ಪ್ರಾಚೀನ ಇತಿಹಾಸವನ್ನು ವಿಶ್ಲೇಷಣೆ ಮಾಡುವಲ್ಲಿ ಡಿಎನ್ಎ ವಿಧಾನ ಸಹಾಯಕಾರಿ: ಪ್ರೊ. ಪ್ರಮೋದ

ಲೋಕದರ್ಶನವರದಿ

ಧಾರವಾಡ೧೬ :  ಪ್ರಾಚೀನ ಇತಿಹಾಸವನ್ನು ವಿಶ್ಲೇಷಣೆ ಮಾಡುವಲ್ಲಿ ಆನುವಂಶಿಕ ವೈಜ್ಞಾನಿಕ ಡಿಎನ್ಎ ವಿಧಾನ ಬಹಳ ಸಹಾಯಕಾರಿಯಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಪ್ರಮೋದ ಗಾಯಿ ಅಭಿಪ್ರಾಯಪಟ್ಟರು. 

  ನಗರದ ಕನರ್ಾಟಕ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ವತಿಯಿಂದ ಕವಿವಿಯ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ ಪ್ರೊ. ಆಯ್.ಕೆ.ಪತ್ತಾರ ಅವರ ಅಭಿನಂದನಾ ಸಮಾರಂಭ, ಇತಿಹಾಸ ತಜ್ಞರ ಕಾಯರ್ಾಗಾರ ಮತ್ತು ಕನರ್ಾಟಕದ ಸಾಂಸ್ಕೃತಿಕ ಚರಿತ್ರೆಯ ಅಧ್ಯಯನಗಳು ಎಂಬ ವಿಷಯದ ಕುರಿತು ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

      ಪ್ರಸ್ತುತ ಪ್ರಾಚೀನ ಇತಿಹಾಸದ ಸಂಶೋಧನೆಯಲ್ಲಿ ಶಿಲೆಗಳು, ಮಾನವನ ಮೂಳೆಗಳು ಮತ್ತು ಲೊಹದ ಪಳಿಯುಳಿಕೆಗಳಿಂದ ಗತಕಾಲದ ಮಾನವನ ಇತಿಹಾಸವನ್ನು ತಿಳಿಯಲು ಸಹಾಯಕವಾಗಿದ್ದು, ಇಂದು  ಆಧುನಿಕ ಮತ್ತು ವೈಜ್ಞಾನಿಕವಾಗಿ ಡಿಎನ್ಎ ಆನುವಂಶಿಕ ವಿಧಾನದ ಮೂಲಕ ಸಂಶೋಧನೆಯಲ್ಲಿ ಅನುಸರಿಸುತ್ತಿದ್ದು, ಮುಖ್ಯವಾಗಿ ಮಾನವ ಉಗಮ ಮತ್ತು ಬೆಳವಣಿಗೆ ಕುರಿತು ಐತಿಹಾಸಿಕವಾಗಿ ವಿಶ್ಲೇಷಣೆ ಮಾಡುವಲ್ಲಿ ಡಿಎನ್ಎ ವಿಶ್ಲೇಷಣೆ ಅವಶ್ಯಕತೆ ಬಹಳ ಇದೆ ಎಂದರು. ಭಾರತೀಯ ಜನಸಂಖ್ಯೆಯ ಹಂಚಿಕೆಯು ವಿಭಿನ್ನವಾಗಿದ್ದು, ಅಂಡಮಾನ ಮತ್ತು ನಿಕೋಬಾರನಲ್ಲಿರುವ ಆದಿವಾಸಿಗಳ ಗತಕಾಲದ ಇತಿಹಾಸವನ್ನು ಅರಿಯಲು ಇಂತಹ ವೈಜ್ಞಾನಿಕ ವಿಧಾನದ ಮೂಲಕ ಸಂಶೋಧನಾ ವಿಧಾನದ ಮೂಲಕ ವಿಶ್ಲೇಷಸಲಾಗುತ್ತಿದೆ ಎಂದರು.

    ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಆಯ್.ಕೆ.ಪತ್ತಾರ ಅವರು ನಿವೃತ್ತಿ ಹೊಂದುತ್ತಿರುವ ಹಿನ್ನಲೆಯಲ್ಲಿ ಪ್ರೊ. ಶಿವರುದ್ರ ಕಲ್ಲೋಳಕರ ಅವರು ಅಭಿನಂದನಾ ಪೂರ್ವಕವಾಗಿ ಮಾತನಾಡಿ ಪ್ರೊ. ಆಯ್.ಕೆ.ಪತ್ತಾರ ಅವರು ಸರಳ ಸಜ್ಜಿನಿಕೆಯ ಶಾಂತ ಸ್ವಭಾದವರು ಆಗಿದ್ದು ಅವರು ಇತಿಹಾಸ ವಿಭಾಗಕ್ಕೆ ತಮ್ಮ ಕೃತಿ ಮತ್ತು ಸಂಶೋಧನೆಗಳ ಮೂಲಕ ತಮ್ಮದೇ ಆದ ಕೂಡುಗೆಯನ್ನು ನೀಡಿದ್ದು, ಅವರು ಮೌನೇಶ್ವರ ಅವರ ವಚನಗಳ ಕುರಿತು ಪುಸ್ತಕ ರಚಿಸಿದ್ದಾರೆ ಎಂದರು.

   ಪ್ರೊ. ಆರ್.ಎಮ್. ಷಡಕ್ಷರಯ್ಯ ಮಾತನಾಡಿ ಪ್ರೊ. ಆಯ.ಕೆ ಪತ್ತಾರ ಅವರು ಉತ್ತಮ ಆದರ್ಶ ಶಿಕ್ಷಕರಾಗಿದ್ದು ಅವರು ಕನರ್ಾಟಕ ಇತಿಹಾಸಕ್ಕೆ ಸಂಶೋಧನೆ ಮೂಲಕ ಕೂಡುಗೆ ನೀಡಿದ್ದಾರೆ ಎಂದರು.

ಅಭಿನಂದನೆಯನ್ನು ಸ್ವಿಕರಿಸಿ ಮಾತನಾಡಿದ ಪ್ರೊ. ಆಯ. ಕೆ. ಪತ್ತಾರ ಮಾತನಾಡಿ 38 ವರ್ಷದ ನನ್ನ ಶೈಕ್ಷಣಿಕ ಜೀವನದಲ್ಲಿ ಅನೇಕ ಜನರು ನನಗೆ ಮಾರ್ಗದರ್ಶನ ಮಾಡಿದ್ದಾರೆ . ನನ್ನ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ನನ್ನ ಗುರುತಿಸಲಾಗುತ್ತಿದೆ ಎಂದ ಅವರು ಶಿಕ್ಷಕರಿಗೆ ವಿದ್ಯಾಥರ್ಿಗಳೇ ಆಸ್ತಿ ಎಂದರು.

   ಈ ವಿಚಾರ ಸಂಕಿರಣದಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳಾದ ಕೆಸಿಡಿಯ ಜಗದೀಶ ಕಿವುಡನ್ನವರ ಹಂಪಿ ವಿಶ್ವವಿದ್ಯಾಲಯದ ರಮೇಶ ನಾಯಕ ಮತ್ತು ಪ್ರೊ. ವಾಸುದೇವ ಬಡಿಗೇರ ಕವಿವಿಯ ಡಾ. ಎಸ್.ಜಿ.ಚಲವಾದಿ, ಬೆಳಗಾವಿ ರಾಣಿ ಚೆನ್ನಮ್ಮಾ ವಿಶ್ವವಿದ್ಯಾಲಯದ ಡಾ. ರಮೇಶ ಕಾಂಬಳೆ ಕೂಪ್ಪಳ ಸರಕಾರಿ ಕಾಲೇಜಿನ ಡಾ. ಶುಭಾ, ಹುನಗುಂದ ವಸ್ತ್ರದ ಕಾಲೇಜಿನ ನಾಗನ್ನವರ ಶಿವಾನಂದ, ಡಾ. ಮಾಧುರಿ ಚೌಗಲೆ, ಡಾ. ಆದಿತ್ಯ ಹೆಗಡೆ, ಶ್ರೀಮತಿ ತಾಜುನ್ನಿಸಾ ಸಯ್ಯದ ಭಿಮಾಶಂಕರ, ಮತ್ತು ಅರ್ಚನಾ ಕಾಂಬಳೆ ಅವರು ಕನರ್ಾಟಕ ಸಂಸ್ಕೃತಿ ಚರಿತ್ರೆಯ ಅಧ್ಯಯನದ ವಿವಿಧ ವಿಷಯಗಳ ಕುರಿತು ಪ್ರಬಂಧ ಮಂಡಿಸಿದರು.

ಕಾರ್ಯಕ್ರಮದಲ್ಲಿ  ಡಾ. ಎಲ್.ಪಿ. ಮಾರುತಿ ಪ್ರೊ. ಶಿವರುದ್ರ ಕಲ್ಲೋಳಕರ,  ಡಾ. ಶಿಲಾಧರ ಮುಗಳಿ, ಡಾ. ಆಯ್.ಕೆ.ಪತ್ತಾರ, ಡಾ. ಆರ್.ಎಂ. ಷಡಕ್ಷರಯ್ಯ, ಡಾ. ಜಗದೀಶ ಕೆ. ಪತ್ರಗಾರ ಇಲಾಖೆಯ ಹಿರಿಯ ಸಹಾಯಕ ನಿದರ್ೇಶಕರಾದ ಮಂಜುಳಾ ಯಲಿಗಾರ ವಿಶ್ರಾಂತ ಪ್ರಾಧ್ಯಾಪಕಿ ಡಾ. ಮಹಾದೇವಿ ಹಾಗರಗಿ. ಡಾ. ಕೆ. ಲೋಕೇಶ ಸೇರಿದಂತೆ ವಿದ್ಯಾಥರ್ಿಗಳು ಮತ್ತು ಪ್ರೊ. ಆಯ್.ಕೆ ಪತ್ತಾರ ಅವರ ಕುಟುಂಬ ವರ್ಗದವರು ಇದ್ದರು.