ಧಾರವಾಡ 29:ವಿಕಲಚೇತನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಲು ಅನುಕೂಲವಾಗುವಂತೆ ವಾಹನ ವ್ಯವಸ್ಥೆ, ಮತಗಟ್ಟೆ ಕೇಂದ್ರದಲ್ಲಿ ರ್ಯಾಂಪ್, ವ್ಹೀಲ್ಚೇರ್, ಬ್ರೈಲ್ ಲಿಪಿ ಇರುವ ಮತಯಂತ್ರದ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಸೌಲಭ್ಯ ಅಗತ್ಯವಿರುವ ಅರ್ಹ ವಿಕಲಚೇತನರು ಉಚಿತ ಸಹಾಯವಾಣಿ 1950 ಕ್ಕೆ ಕರೆ ಮಾಡುವ ಮೂಲಕ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಧಾರವಾಡ ಆಕಾಶವಾಣಿ ಕೇಂದ್ರ ಆಯೋಜಿಸಿದ್ದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದರು.
ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಸಾರ್ವತ್ರಿಕ ಚುನಾವಣೆಗಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಕಲಚೇತನರು ತಮ್ಮ ಮತದಾನದ ಹಕ್ಕು ಚಲಾಯಿಸಲು ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ ಎಂದು ಹೇಳಿದರು.
ನವಲಗುಂದ ತಾಲೂಕಿನ ಶಿರೋಳ ಗ್ರಾಮದ ವಿಕಲಚೇತನ ಉದಯ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಪ್ರತಿಯೊಬ್ಬ ಅರ್ಹ ವಯಸ್ಕರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಇದಕ್ಕಾಗಿ ಸಹಾಯವಾಣಿ 1950 ಕ್ಕೆ ಕರೆ ಮಾಡಬಹುದು ಅಥವಾ ಭಾರತ ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸಿವ್ಹಿಜಿಲ್ ಆ್ಯಪ್ ಬಳಸಬಹುದು.
ವಿಕಲಚೇತನರು ಮತದಾನ ಮಾಡಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಿದ್ದು. ಮತಗಟ್ಟೆಗೆ ಮತದಾನಕ್ಕಾಗಿ ಬರುವ ವಿಕಲಚೇತನರಿಗೆ ಜಿಲ್ಲಾಡಳಿತ ವಾಹನ ವ್ಯವಸ್ಥೆ ಮಾಡಲಿದೆ. ಮತ್ತು ಅವರಿಗೆ ಒಬ್ಬ ಸಹಾಯಕರನ್ನು ಹೊಂದಲು ಅವಕಾಶ ಕಲ್ಪಿಸಲಾಗಿದೆ. 18 ವರ್ಷ ತುಂಬಿದ ಒಬ್ಬ ವ್ಯಕ್ತಿಯು ಒಬ್ಬ ವಿಕಲಚೇತನರಿಗೆ ಮಾತ್ರ ಸಹಾಯಕರಾಗಿ ಬರಬಹುದು ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿ.ಸಿ. ಸತೀಶ್ ನೀವು ಕೇಳಿದ ಪ್ರಶ್ನೇ ಅತ್ಯಂತ ಸೂಕ್ತವಾಗಿದೆ. ಈ ಸೌಲಭ್ಯಕ್ಕಾಗಿ ಭಾರತ ಚುನಾವಣಾ ಆಯೋಗಕ್ಕೆ ಹಿಮ್ಮಾಹಿತಿ ಸಲ್ಲಿಸಲಾಗುವುದು ಎಂದು ಹೇಳಿದರು.ರಾಯಬಾಗ, ಬದಾಮಿ, ಗುಳೇದಗುಡ್ಡ, ಹಾರೋಗೇರಿ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳುಗರ ಭಾಗವಹಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆದರು.
ಆಕಾಶವಾಣಿ ಕೇಂದ್ರದ ನಿಲಯ ನಿದರ್ೆಶಕ ಸತೀಶ ಪರ್ವತಿಕರ ಕಾರ್ಯಕ್ರಮ ನಿರ್ವಹಿಸಿದರು. ಡಾ.ಗಿರೀಶ್.ವಿ. ಪಾಟೀಲ ಸಂಕಲನ ಮಾಡಿದರು. ತಹಶೀಲ್ದಾರ ಪ್ರಕಾಶ ಕುದರಿ ಉಪಸ್ಥಿತರಿದ್ದರು