ಡಿ. 17 ರಂದು ಮಹರ್ಷಿ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ ಜರುಗಲಿದೆ
ಗದಗ 15 : ಪ್ರತಿ ವರ್ಷದಂತೆ ಫೆಬ್ರವರಿ 08 ಮತ್ತು 09 ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ನಡೆಯಲಿರುವ ಐತಿಹಾಸಿಕ 7 ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ಡಿ.17 ಮಂಗಳವಾರ ಮಧ್ಯಾನ 3 ಘಂಟೆಗೆ ಗದಗ ನಗರದ ವಾಲ್ಮೀಕಿ ಭವನದಲ್ಲಿ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದ ಮಹಾ ಸ್ವಾಮೀಜಿಯವರ ದಿವ್ಯ ಸಾನಿದ್ಯದಲ್ಲಿ ಮಹರ್ಷಿ ವಾಲ್ಮೀಕಿ ಜಾತ್ರೆ 2025 ರ ಪೂರ್ವಭಾವಿ ಸಭೆ ಜರುಗಲಿದೆ. ಕಾರಣ ಗದಗ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಹಿರಿಯರು, ಸಮಾಜದ ಜನಪ್ರತಿನಿಧಿಗಳು, ನೌಕರ ಬಾಂಧವರು, ಯುವಕರು, ಮಹಿಳೆಯರು, ಗದಗ ತಾಲ್ಲೂಕು ಸುತ್ತಮುತ್ತ ಎಲ್ಲ ಗ್ರಾಮದ ವಾಲ್ಮೀಕಿ ನಾಯಕ ಸಮಾಜ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡಬೇಕು ಹಾಗೂ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಗದಗ ಜಿಲ್ಲಾ ವಾಲ್ಮೀಕಿ ನಾಯಕ ಸೇವಾ ಸಂಘದ ಗದಗ ಜಿಲ್ಲಾಧ್ಯಕ್ಷರಾದ ಬಸವರಾಜ.ಎಮ್. ಬೆಳಧಡಿ ಅವರು ಮತ್ತು ಯುವ ಘಟಕದ ಜಿಲ್ಲಾಧ್ಯಕ್ಷರಾದ ಅನೀಲಕುಮಾರ ಸಿದ್ದಮ್ಮನಹಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬಸವರಾಜ.ಎಮ್. ಬೆಳಧಡಿ9008959292