ಶಿಕ್ಷಣ ಪರಿಪೂರ್ಣತೆಗೆ ಮಕ್ಕಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಿವೆ
ರಾಣೇಬೆನ್ನೂರು 25: ಮಕ್ಕಳಲ್ಲಿರುವ ಆಂತರಿಕ ಪ್ರತಿಭೆ ಹೊರ ಸೂಸಲು, ಸಾಂಸ್ಕೃತಿಕ ಮತ್ತು ರಂಗ ಚಟುವಟಿಕೆ ಸಂಸ್ಥೆಗಳ ಕಾರ್ಯವು ಇಂದಿನ ಅಗತ್ಯವಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಹೇಳಿದರು. ಅವರು, ರವಿವಾರ, ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ, ರಂಗ ಕುಸುಮ,ಪ್ರಕಾಶನ ಸಂಸ್ಥೆ ಆಯೋಜಿಸಿದ್ದ, ಮಕ್ಕಳ ಸಾಂಸ್ಕೃತಿಕ ಸೌರಭ ಹಾಗೂ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕಲೆ, ಸಾಹಿತ್ಯ, ಸಂಗೀತ, ಮತ್ತು ಮತ್ತು ಸಂಸ್ಕೃತಿ ಮಕ್ಕಳ ಮನೋವಿಕಾಸತೆಗೆ ಸಹಕಾರಿಯಾಗಿವೆ. ವ್ಯಕ್ತಿತ್ವ ವಿಕಸತೆ ಸಾಂಸ್ಕೃತಿಕ ಚಟುವಟಿಕೆಗಳಿಂದ ಮಾತ್ರ ಎನ್ನುವ ವಾಸ್ತವಿಕ ಸ್ಥಿತಿ ಅರಿಯದೆ ಹೋದರೆ ಮಕ್ಕಳ ಮನಸ್ಸು ಕುಬ್ಜವಾಗಲಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ, ರಾಜ್ಯ ಮಕ್ಕಳ ಸಾಹಿತ್ಯ ವೇದಿಕೆ ಸಂಘಟನಾ ಕಾರ್ಯದರ್ಶಿ ಹು. ವಿ. ಸಿದ್ದೇಶ್ ಅವರು, ಪ್ರಾಥಮಿಕ ಶಿಕ್ಷಣ ಪರಿಪೂರ್ಣತೆಗೆ, ಮಕ್ಕಳಲ್ಲಿ ನಾಟಕಾ ಭಿನಯ, ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ನಾಡಿನಾದ್ಯಂತ ಪೂರಕ ಕಾರ್ಯಕ್ರಮಗಳು ಆಯೂಜಿಸಲಾಗುತ್ತಿದೆ ಎಂದರು. ಕಥೆಗಾರ ಹಾವೇರಿಯ, ನಿಂಗರಾಜ ಸೊಟ್ಟಪ್ಪನವರ, ಹೊನ್ನಾಳಿ ಡಾ, ಎಂ.ಇ. ಶಿವಕುಮಾರ್ ಅವರು ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಪುಸ್ತಕ ಬಿಡುಗಡೆ, ಮಕ್ಕಳ ಕವಿಗೋಷ್ಠಿ, ಪರಿಷತ್ತು ಪದಾಧಿಕಾರಿಗಳ ಸೇವಾ ದೀಕ್ಷ ಕಾರ್ಯಕ್ರಮ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ, ರಂಗ ಕುಸುಮ- ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ತು ಅಧ್ಯಕ್ಷ ವೆಂಕಟೇಶ್ ಈಡಿಗರ ಅವರು, ಕಳೆದ 20 ವರ್ಷಗಳಿಂದ, ತಮ್ಮ ಸಂಸ್ಥೆ, ಸಾರ್ವಜನಿಕವಾಗಿ ರಂಗ ಚಟುವಟಿಕೆ, ಸಾಂಸ್ಕೃತಿಕ ಕಲೆ ಪ್ರಚಾರ, ಸಾಧಕ ಗಣ್ಯರ ಸನ್ಮಾನ, ಕಲೆಗಳ ಜೀವಂತವಾಗಿರಬೇಕೆನ್ನುವ ಸದುದ್ದೇಶದಿಂದ, ವರ್ಷದುದ್ದಕ್ಕೂ ನಿಷ್ಪಲ ಸೇವೆ ಸಲ್ಲಿಸುತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ, ರಂಗ ಚಟುವಟಿಕೆ ಸೇರಿದಂತೆ ವಿವಿಧ ಕ್ಷೇತ್ರದ ಹತ್ತಾರು ಸಾಧಕರಿಗೆ, ಗೌರವ ಬಿರುದು ಇತ್ತು ಅಭಿನಂದಿಸಿ ಸನ್ಮಾನಿಸಲಾಯಿತು. ಕಸಾಪ ತಾಲೂಕ ಅಧ್ಯಕ್ಷ ಪ್ರಭಾಕರ ಶಿಗ್ಲಿ, ರಂಗಾಯಣ ನಿರ್ದೇಶಕ ಪ್ರಸನ್ನ ಸಾಗರ, ಚನ್ನರಾಯಪಟ್ಟಣದ ಮಹಾದೇವ, ಮಸಾಪ ಸಂ ಕಾರ್ಯದರ್ಶಿ ಸಚಿನ್ ಎಸ್.ಎ, ಉಪಸ್ಥಿತರಿದ್ದರು. ವೇದಶ್ರೀ ತ್ರಿಷಾ ಹಿರೇಮಠ ಪ್ರಾರ್ಥಿಸಿದರು. ದಾವಲ ಮಲೀಕ, ಸ್ವಾಗತಿಸಿದರು. ಹನಕೆರೆ, ನಿರೂಪಿಸಿ. ಶ್ರೀಮತಿ ಕಾವ್ಯ ಅಂಗಡಿ ವಂದಿಸಿದರು. ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾರ್ವಜನಿಕರ ಗಮನ ಸೆಳೆದವು.