ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳೆಸಿ: ನೀಲಗುಂದ
ಮುಧೋಳ 16: ಶಾಲಾ ಶಿಕ್ಷಣ ಇಲಾಖೆ ಬಾಗಲಕೋಟ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುಧೋಳ್ ವತಿಯಿಂದ ತಾಲೂಕು ಮಟ್ಟದ ವಿಜ್ಞಾನ ವಿಷಯ ಸಮೂಹ ಕಾರ್ಯಗಾರ ಮಹಾಲಿಂಗಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಜ್ಞಾನಜ್ಯೋತಿ ಪ್ರಾಥಮಿಕ ಹಾಗೂ ಪ್ರೌಢಶಾಲೆ ಶಾಲಾ ಸಭಾಭವನದಲ್ಲಿ ದಿ. 14 ಶನಿವಾರದಂದು ಯಶಸ್ವಿಯಾಗಿ ನಡೆಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಮಲ್ಲಪ್ಪ ಕುಳಲಿಯವರು ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಕಾಶಿಬಾಯಿ ಸಿದ್ದಪ್ಪ ಕೊಣ್ಣೂರರವರು ಹಾಜರಾಗಿದ್ದರು. ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಸಂಗಮೇಶ್ ನಿಲಗುಂದ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ವಿಜ್ಞಾನ ವಿಷಯವು ವಿದ್ಯಾರ್ಥಿಗಳ ಜೀವನದಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ, ಮಕ್ಕಳಲ್ಲಿ ವೈಜ್ಞಾನಿಕ ಭಾವನೆ ಬೆಳೆಯುವಂತಾಗಲಿ, ತಾಲೂಕಿನ ಎಲ್ಲಾ ಶಿಕ್ಷಕರು ಸಂಯಮ,ತಾಳ್ಮೆಯಿಂದ ವೈಜ್ಞಾನಿಕವಾಗಿ ಬೋಧಿಸಿದರೆ ತಾಲೂಕಿನ ಒಟ್ಟಾರೆ ಫಲಿತಾಂಶವು ಹೆಚ್ಚಾಗಿ ರಾಜ್ಯಕ್ಕೆ ಮಾದರಿಯಾಗಲಿದೆ. ಇದಕ್ಕಾಗಿ ಇಲಾಖೆ ನಿಮಗೆ ಸದಾ ಮಾರ್ಗದರ್ಶನ ಮಾಡುತ್ತಲಿದೆ. ತಾವುಗಳು ಇದರ ಉಪಯೋಗ ಪಡೆದುಕೊಂಡು ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.
ಉಪನ್ಯಾಸಕರಾಗಿ ಉದಯಕುಮಾರ್ ಯರಗಟ್ಟಿ ಗೋಕಾಕ್ ನಡೆಸಿಕೊಟ್ಟರು. ಜ್ಞಾನಜ್ಯೋತಿ ಶಾಲೆಯ ವಿದ್ಯಾರ್ಥಿಗಳು ಜಲಚಕ್ರ ಗೀತೆ ಮತ್ತು 118 ಧಾತುಗಳನ್ನು ಹೇಳಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲಾ ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿಗಳಾದ ಎಸ್. ಎಸ್ ಹಾಲವರ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ ಫಲಿತಾಂಶ ಸುಧಾರಣೆ ಬಗ್ಗೆ ಮಾತನಾಡಿದರು. ಮತ್ತು ವಿಷಯ ಸಮೂಹಕ್ಕೆ ಆಗಮಿಸಿದ ಎಲ್ಲಾ ಶಿಕ್ಷಕರಿಗೆ ರೊಟ್ಟಿ, ಚಪಾತಿ, ಹೋಳಿಗೆ, ತುಪ್ಪ, ಅನ್ನ, ಸಾಂಬಾರ, ಕಾಯಿಪಲ್ಲೇ ಹತ್ತು ಹಲವಾರು ವಿಧಗಳಿಂದ ಕೂಡಿದ್ದ ಊಟದ ವ್ಯವಸ್ಥೆ ಮಾಡಲಾಗಿತ್ತು.
ನಿರೂಪಣೆಯನ್ನು ಎನ್ ವೈ ತಳವಾರ್ ನಡೆಸಿಕೊಟ್ಟರು. ಎಸ್ ಆರ್ ಯಾದವಾಡ ಸ್ವಾಗತಿಸಿದರು. ಕೆ ಆರ್ ಮಾಚಕನೂರ್ ವಂದಿಸಿದರು. ಮುಖ್ಯೋಪಾಧ್ಯಾಯ ವೀರಭದ್ರ ಆರ್ ಬೀರನಗಡ್ಡಿ ಮತ್ತು ಸಮೂಹದ ಅಧ್ಯಕ್ಷ ಅರವಿಂದ್ ಚಿಂತಾಮಣಿ ಹಾಗೂ ಇಅಓ ಆಗಿ ಆಗಮಿಸಿದ ಎಸ್. ಖ. ನೀಲಗುಂದ ಗುರುಗಳು ಮತ್ತು ವಿಷಯ ಸಮೂಹದ ನೂಡಲ್ ಅಧಿಕಾರಿಗಳಾಗಿ ಜಿ.ಜಿ ಕಿತ್ತೂರ್ ಗುರುಗಳು ಎಸ್ ಕೆ ಬೆನಕಟ್ಟಿ ಮತ್ತು ಪ್ರಗತಿ ಪ್ರೌಢಶಾಲೆಯ ಶಿಕ್ಷಕರಾದ ವಿಜಯ್ ಕುಮಾರ್ ಕುಳಲಿ ಉಪಸ್ಥಿತರಿದ್ದರು.