ಕೇಂದ್ರ ಕಾರಾಗೃಹದಲ್ಲಿ ಕ್ರಿಕೆಟ್ ಪಂದ್ಯಾವಳಿ: ಕೃಷ್ಣಮೂರ್ತಿ ಚಾಲನೆ
ಬೆಳಗಾವಿ 24: ಕ್ರೀಡೆಗಳು ಪ್ರತಿಯೊಬ್ಬರ ಜೀವನದಲ್ಲಿ ಬಹುಮುಖಿ ಮತ್ತು ಅವಿಭಾಜ್ಯ ಪಾತ್ರವನ್ನು ನಿರ್ವಹಿಶಿಸುತ್ತವೆ. ಹಾಗೂ ಶಿಸ್ತಿ ಮತ್ತು ಸಂಯಮ ಗುಣಗಳು ಬೆಳೆಯುತ್ತವೆ. ಅಲ್ಲದೇ ದೈಹಿಕ ಸದೃಢತೆ ಜೊತೆಗೆ ಪರಿಶ್ರಮದ ಮನೋಭಾವವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತವೆ. ಇದರಿಂದ ಒತ್ತಡ ನಿವಾರಣೆಯಾಗುತ್ತದೆ. ಹಾಗೂ ಆತ್ಮ ವಿಶ್ವಾಸ, ನವಚೈತನ್ಯ ಹೆಚ್ಚುತ್ತದೆ ಎಂದು ಕಾರಾಗೃಹದ ಪ್ರಭಾರಿ ಮುಖ್ಯ ಅಧಿಕ್ಷಕ ವಿ. ಕೃಷ್ಣಮೂರ್ತಿ ಹೇಳಿದರು.
ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ದಿ. 23ರಂದು ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಆರೋಗ್ಯವೇ ಭಾಗ್ಯ” ಎಂಬ ನಾಣ್ಣುಡಿಯಂತೆ ಕ್ರೀಡೆಗಳು ಉತ್ತಮ ಆರೋಗ್ಯ ಕಾಪಾಡುವಲ್ಲಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ತಿಳಿದೋ ಅಥವಾ ತಿಳಿಯದೆ ತಪ್ಪು ಮಾಡಿ ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವ ಬಂಧಿಗಳನ್ನು ಮನ ಪರಿವರ್ತಿಸಿ, ಬಿಡುಗಡೆ ನಂತರ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬಾಳುವಂತೆ ಮಾಡುವುದೇ, ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ನಿಟ್ಟಿನಲ್ಲಿ ಕಾರಾಗೃಹದ ಸಿಬ್ಬಂದಿ ವರ್ಗದವರಿಗೂ ಹಾಗೂ ನಿವಾಸಿಗಳಲ್ಲಿ ಕ್ರೀಡಾ ಮನೋಭಾವ ಬೆಳೆಸಲು ಹಾಗೂ ಮನರಂಜನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಮಿತ್ಯ ಈ ಕ್ರೀಕೆಟ್ ಪಂದ್ಯಾವಳಿ ಆಯೋಜಿಸಲಾಗಿರುತ್ತದೆ ಎಂದು ಹೇಳಿದರು. ಹಾಗೂ ಇಂದಿನ ದಿನಗಳಲ್ಲಿ ವಿವಿಧ ಕೇಂದ್ರ ಕಾರಾಗೃಹಗಳ ಜೊತೆಗೆ ಹಾಗೂ ಶಾಲಾ ಕಾಲೇಜುಗಳ ಕ್ರೀಡಾ ತಂಡಗಳೊಂದಿಗೆ ವಿವಿಧ ಪಂದ್ಯಾವಳಿಗಳನ್ನು ಏರಿ್ಡಸಲಾಗುವುದು ಎಂದು ಹೇಳಿದರು.
ಪಂದ್ಯಾವಳಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದು, ಅದರಲ್ಲಿ ಕಾರಾಗೃಹ ನಿವಾಸಿಗಳ ತಂಡವು ವಿಜಯಶಾಲಿಯಾಗಿದ್ದು, ಆ ತಂಡಕ್ಕೆ ಕ್ರಿಕೆಟ್ ಟ್ರೋಫಿ ವಿತರಿಸಲಾಯಿತು. ಕಾರಾಗೃಹದ ಸಹಾಯಕ ಅಧಿಕ್ಷಕ ಮಲ್ಲಿಕಾರ್ಜುನ ಕೊಣ್ಣೂರ ಇವರ ಉಸ್ತುವಾರಿಯಲ್ಲಿ ಹಾಗೂ ಜೈಲರ್‌ಗಳಾದ ರಾಜೇಶ ಧರ್ಮಟ್ಟಿ, ದಂಡಯ್ಯನವರ, ಭಜಂತ್ರಿ ಹಾಗೂ ಆರ್.ಬಿ. ಕಾಂಬಳೆ ಮತ್ತು ಕಾರಾಗೃಹದ ಎಲ್ಲಾ ಸಹಾಯಕ ಜೈಲರ ಹಾಗೂ ಸಿಬ್ಬಂದಿಗಳ ಉಪಸ್ಥಿತರಿದ್ದರು.