ಕ್ರಿಕೆಟ್ ಪಂದ್ಯಾವಳಿ: ಯಂಗ್ ಸ್ಟಾರ್ ತಂಡಕ್ಕೆ ರೋಚಕ ಗೆಲುವು
ತಾಳಿಕೋಟಿ 23: ತಾಲೂಕಿನ ತುಂಬಗಿ ಗ್ರಾಮದಲ್ಲಿ ಶ್ರೀ ಗ್ರಾಮದೇವತೆ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡ ಗ್ರಾಮೀಣ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಅಂತಿಮ ಪಂದ್ಯದಲ್ಲಿ ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಣಾ ಸಮಾರಂಭ ರವಿವಾರ ಜರುಗಿತು.
ವಿಜೇತ ತಂಡಗಳಿಗೆ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿ ಸಮಾಜ ಸೇವಕ ಪ್ರವೀಣ ರೆಡ್ಡಿ ಅವರು ಮಾತನಾಡಿ ಈ ಟೂರ್ನಮೆಂಟ್ನಲ್ಲಿ ಟ್ರೋಫಿ ಗೆದ್ದ ಹಾಗೂ ರನ್ನರ್ಸ್ ತಂಡಗಳಿಗೆ ನಾನು ಅಭಿನಂದಿಸುತ್ತೇನೆ. ಕ್ರೀಡೆಯಲ್ಲಿ ಸೋಲು-ಗೆಲುವೇ ಮುಖ್ಯ ವಾಗಬಾರದು, ಭಾಗವಹಿಸುವಿಕೆ ಮುಖ್ಯವಾಗಬೇಕು. ಇಂದಿನ ಸೋಲು ನಾಳಿನ ಗೆಲುವಿಗೆ ಸೋಪಾನ ಒಳ್ಳೆಯ ಕ್ರೀಡಾ ಮನೋಭಾವದೊಂದಿಗೆ ಕ್ರೀಡೆ ಆಡಲು ಪ್ರಯತ್ನಿಸಿ ಎಂದರು.
ಎರಡು ದಿನಗಳ ಈ ಟೂರ್ನಮೆಂಟ್‌ನಲ್ಲಿ ಒಟ್ಟು ಎಂಟು ತಂಡುಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಯಂಗ್ ಸ್ಟಾರ್ ಕ್ರಿಕೆಟ್ ಟೀಮ್ ಹಾಗೂ ಎಚ್‌ಎಸ್ ಗೆಳೆಯರ ಬಳಗದ ತಂಡಗಳು ಮುಖಾಮುಖಿಯಾಗಿ ಯಂಗ್ ಸ್ಟಾರ್ ಕ್ರಿಕೆಟ್ ತಂಡವು ರೋಚಕ ಗೆಲುವು ಸಾಧಿಸಿತು, ಎಚ್‌ಎಸ್ ಗೆಳೆಯರ ಬಳಗದ ಟೀಮ್ ರನ್ನರ್ಸ್ ಆಯಿತು. ತುಂಬಗಿಯ ಜೈ ಭೀಮ್ ಸಿಸಿ ತಂಡ ಟೂರ್ನಮೆಂಟಿನಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಮೂರನೇ ಸ್ಥಾನದ ಬಹುಮಾನವನ್ನು ಪಡೆದುಕೊಂಡಿತು. ವಿಜೇತ ತಂಡಕ್ಕೆ ಕಮಿಟಿ ವತಿಯಿಂದ ಪ್ರಥಮ ಬಹುಮಾನ,7001,ರನ್ನರ್ ತಂಡಕ್ಕೆ ಸಮಾಜ ಸೇವಕ ಪ್ರವೀಣ ರೆಡ್ಡಿ ಕೊಡ ಮಾಡಿದ ರೂ 5001, ಮೂರನೇ ಬಹುಮಾನ ಆದಿಲ್ ನಾಯ್ಕೋಡಿ ಅವರಿಂದ ರೂ.3001 ನೀಡಿ ಗೌರವಿಸಲಾಯಿತು. ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಹಿರಿಯರು ಉಪಸ್ಥಿತರಿದ್ದರು.