ನಕಲಿ ದಾಖಲೆಗಳು ಸೃಷ್ಠಿ: ತಪ್ಪಿತಸ್ಥರ ಮೇಲೆ ಕ್ರಮ: ಉಪವಿಭಾಗಿಗಾಧಿಕಾರಿ

Creation of fake documents: Action against guilty: Sub-Divisional Officer

ನಕಲಿ ದಾಖಲೆಗಳು ಸೃಷ್ಠಿ: ತಪ್ಪಿತಸ್ಥರ ಮೇಲೆ ಕ್ರಮ: ಉಪವಿಭಾಗಿಗಾಧಿಕಾರಿ 

ಸಂಬರಗಿ 01: ಗ್ರಾಮೀಣ ಪ್ರದೇಶದಲ್ಲಿ ನಕಲಿ ದಾಖಲೆಗಳು ಸೃಷ್ಠಿ ಮಾಡುವ ವ್ಯಕ್ತಿ ಯಾರೇ ಇದ್ದರೂ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಚಿಕ್ಕೋಡಿ ಉಪ-ವಿಭಾಗಿಗಾಧಿಕಾರಿ ಸುಭಾಷ ಸಂಪಗಾಂವಿ ಹೇಳಿದ್ದು. 

ಮದಬಾವಿ ಗ್ರಾಮದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಮಾಡನಾಡಿ ಅವರು ಕಂದಾಯ ಇಲಾಖೆಯಲ್ಲಿ ನಕಲಿ ದಾಖಲೆ ಸೃಷ್ಠಿಮಾಡುವ ವಿಚಾರವನ್ನು ಪತ್ರಕರ್ತರ ಗಮನಕ್ಕೆ ತಂದ ನಂತರ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇತ್ತೀಚಿಗೆ ಕೆಲವು ವಿಷಯಗಳು ನನ್ನ ಗಮನಕ್ಕೆ ಬಂದಿದ್ದು, ಪರೀಶೀಲನೆ ಮಾಡಿ ಕ್ರಮ ಕೈಗೊಳ್ಳಲಾಗುವುದು. ನಕಲಿ ದಾಖಲೆ ಸೃಷ್ಠಿಸುವ ಪ್ರಕರಣದಲ್ಲಿ ಅನ್ಯಾಯ ಆಗಿರುವ ವ್ಯಕ್ತಿ ನಮ್ಮ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ಪರೀಶಿಲನೆ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. 

ಅರಣ್ಯ ಇಲಾಖೆ ಕುರಿತು ಕೇಳಿದ ಪ್ರಶ್ನೆಗೆ ಮಾತನಾಡಿ ಅಥಣಿ ತಾಲೂಕಿನಲ್ಲಿ 744 ಹೇಕ್ಟರ್ ಅರಣ್ಯ ಅಭಿವೃದ್ಧಿ ಕ್ಷೇತ್ರ ಇದ್ದು, ಪ್ರತಿ ವರ್ಷ 10,000 ಸಸಿ ನಾಟಿ ಮಾಡುವ ಗುರಿ ಇದ್ದು, ಕೇವಲ 4,600 ಸಸಿಗಳ ನಾಟಿ ಮಾಡಿದ್ದಾರೆ. ಆದರೆ ನೀರಿನ ಕೋರತೆಯಿಂದ ಗಡಿ ವಿಭಾಗದಲ್ಲಿ ಸಸಿಗಳು ಬತ್ತಿ ಹೋಗುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಬದಿಗೆ ನಾಟಿ ಮಾಡುವ ಸಸಿಗೆ ನೀರ ಬಿಡಲು ಸೂಚನೆ ನೀಡುತ್ತೇನೆ. ಅರಣ್ಯ ಇಲಾಖೆ ಬೇಜವಾಬ್ದಾರಿ ಕೆಲಸವನ್ನು ಮಾಡಬಾರದು, ಶೀಘ್ರದಲ್ಲಿ ಚಿಕ್ಕೋಡಿ ವಿಭಾಗ ಮಟ್ಟದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಅವರಿಗೆ ಸೂಚನೆ ನೀಡಲಾಗುವುದು.