ವಾ.ಕ.ರ.ಸಾ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗವ್ಯಕ್ತಿತ್ವ ವಿಕಸನಕ್ಕಾಗಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ

Guidance and Dialogue Program for Personality Development, Rural Division of V.K.R.S.A., Dharwad

ವಾ.ಕ.ರ.ಸಾ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗವ್ಯಕ್ತಿತ್ವ ವಿಕಸನಕ್ಕಾಗಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮ

ಧಾರವಾಡ 01:  ದಿನಾಂಕ:01-02-2025 ರಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಧಾರವಾಡ ಗ್ರಾಮಾಂತರ ವಿಭಾಗೀಯ ಕಛೇರಿ ಧಾರವಾಡದಲ್ಲಿ ಸಂಸ್ಥೆಯ ನೌಕರರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಮಾರ್ಗದರ್ಶನ ಮತ್ತು ಸಂವಾದ (ಕಾಫಿ ವಿಥ್ ಎಂ.ಡಿ.) ಕಾರ್ಯಕ್ರಮವನ್ನು  ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ.ಎಂ., ಅವರ ಮಾರ್ಗದರ್ಶನದಲ್ಲಿ ಏರಿ​‍್ಡಸಲಾಗಿತ್ತು.  

ಸಂಸ್ಥೆಯ ಏಳಿಗೆಗಾಗಿ ಸಾರ್ವಜನಿಕ ಸೇವೆ ಮಾಡುತ್ತಿರುವ ಸಂಸ್ಥೆಯ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳ ಮಕ್ಕಳಿಗಾಗಿ ಧಾರವಾಡ ಗ್ರಾಮಾಂತರ ವಿಭಾಗದ ಕಾರ್ಮಿಕ ಇಲಾಖೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.   

    ಸಂಸ್ಥೆಯ ಸಿಬ್ಬಂದಿಗಳ ಮಕ್ಕಳನ್ನು ಉದ್ದೇಶಿಸಿ, ವ್ಯವಸ್ಥಾಪಕ ನಿರ್ದೇಶಕರಾದ  ಪ್ರಿಯಾಂಗಾ.ಎಂ., ಅವರು ಮಾತನಾಡಿ, ನಿಮ್ಮೆಲ್ಲರ ತಂದೆ-ತಾಯಿಗಳು ಸಂಸ್ಥೆಯಲ್ಲಿ ಅತ್ಯವಶ್ಯವಾದ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಂಸ್ಥೆಯ ಬಹಳಷ್ಟು ಸಿಬ್ಬಂದಿಗಳು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತ ಚಿಂತೆಯಲ್ಲಿ ಇರುತ್ತಾರೆ. ನೀವು ಕಷ್ಟಪಟ್ಟು ಚೆನ್ನಾಗಿ ಓದುತ್ತಿದ್ದೀರಾ ಎಂದು ಗೊತ್ತಾದರೆ ನಿಮ್ಮ ಪಾಲಕರು ಸಹ ನೆಮ್ಮದಿಯಿಂದ ಸಂಸ್ಥೆಯಲ್ಲಿ ತಮ್ಮ ತಮ್ಮ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.  

 ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಯತ್ತ ಮುನ್ನಡೆಯಬೇಕು. ನಾವು ಕಷ್ಟಪಟ್ಟು ಓದಿದಾಗ ಮಾತ್ರ ಉನ್ನತವಾದ ಎತ್ತರಕ್ಕೆ ಬೆಳೆಯಲು ಸಾಧ್ಯ. ನಾವು ಯಾವುದಕ್ಕೆ ಆದ್ಯತೆ ಕೊಡುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನಿಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಒಳ್ಳೆಯ ಸಾಧನೆ ಮಾಡಿ. ನಿಮ್ಮ ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತಂದು ಕೊಡಿ ಎಂದು ತಿಳಿಸಿದರು.  

ನಂತರ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳೊಂದಿಗೆ ಸಂವಾದ ನಡೆಸಿ, ಅವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ, ಅವರ ಸಂದೇಹಗಳನ್ನು ನಿವಾರಿಸಿದರು.         ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪಿ.ವೈ.ನಾಯಕ, ಧಾರವಾಡ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಡಾ. ಶಶಿಧರ ಚನ್ನಪ್ಪಗೌಡರ್, ವಿಭಾಗೀಯ ಸಂಚಾರಾಧಿಕಾರಿ ಸಂತೋಷ ಕಮತ್, ವಿಭಾಗೀಯ ತಾಂತ್ರಿಕ ಶಿಲ್ಪಿಗಳಾದ ನಿಂಗನಗೌಡ ಪಾಟೀಲ ಹಾಗೂ ಅಧಿಕಾರಿಗಳಾದ ವಿವೇಕಾನಂದ ಘುಳಪ್ಪನವರ, ಇಸ್ಮಾಯಿಲ್ ನವಲಗುಂದ, ಶಂಕರ​‍್ಪ, ನವೀನಕುಮಾರ್ ತಿಪ್ಪಾ ಮತ್ತು ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಉಪಸ್ಥಿತರಿದ್ದರು.