ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ- ಬೈಕ್ ರಾ್ಯಲಿಗೆ ಚಾಲನೆ
ಹಾವೇರಿ 01: ಹಾವೇರಿ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಆಯೋಜಿಸಲಾದ ಬೈಕ್ ರಾ್ಯಲಿಗೆ ಶುಕ್ರವಾರ ಪೊಲೀಸ್ ಉಪ ಅಧೀಕ್ಷಕ ಎಂ.ಎಸ್. ಪಾಟೀಲ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಿಂದ ಆರಂಭವಾದ ಬೈಕ್ರಾ್ಯಲಿ ನಗರದ ಮಹರ್ಷಿ ವಾಲ್ಮೀಕಿ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಬಸ್ ನಿಲ್ದಾಣ ಮುಂಭಾಗ ಸಂಚರಿಸಿ ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಧ್ವನಿವರ್ಧಕ ಹಾಗೂ ಭಿತ್ತಿಪತ್ರಗಳ ಜಾಗೃತಿ ಮೂಡಿಸಲಾಯಿತು ಹಾಗೂ ಪ್ರವಾಸಿ ಮಂದಿರಕ್ಕೆ ಆಗಮಿಸಿ ಮುಕ್ತಾಗೊಂಡಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕು.ವಿನಯಾ ಕಾಟೋಕರ, ದ್ವಿಚಕ್ರ ವಾಹನ ಮಾರಾಟಗಾರರ ಪ್ರತಿನಿಧಿಗಳು, ಚಾಲನಾ ತರಬೇತಿ ಸಿಬ್ಬಂದಿ ಹಾಗೂ ಕಚೇರಿ ಸಿಬ್ಬಂದಿಗಳು ರಾ್ಯಲಿಯಲ್ಲಿ ಭಾಗವಹಿಸಿದ್ದರು.