ಹಸುಹತ್ಯೆ ಪ್ರಕರಣ: ಮತ್ತಿಬ್ಬರು ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಣೆ
ಕಾರವಾರ 26: ಹಸು ಹತ್ಯೆ ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ವಾಸಿಂ ಹಾಗೂ ಮುಜಾಮಿಲ್ ಎನ್ನುವವರು ಪ್ರಮುಖ ಆರೋಪಿಗಳಾಗಿದ್ದು, ಆರೋಪಿಗಳ ಬಗ್ಗೆ ಮಾಹಿತಿ ನೀಡಿ, ಹುಡುಕಿಕೊಟ್ಟವರಿಗೆ 50 ಸಾವಿರ ಬಹುಮಾನ ನೀಡುವುದಾಗಿ ಎಸ್ಪಿ ನಾರಾಯಣ ಘೋಷಣೆ ಮಾಡಿದರು.ಕಾರವಾರದ ಡಿಆರ್ ಕಚೇರಿಯಲ್ಲಿ ಮಾಧ್ಯಮಗಳ ಜೊತೆ ರವಿವಾರ ಮಾತನಾಡಿ ಹೊನ್ನಾವರದಲ್ಲಿ ನಡೆದ ಹಸು ಹತ್ಯೆ ಪ್ರಕರಣದ ವಿವರ ನೀಡಿದರು.
ಪ್ರಕರಣದ ಆರೋಪಿ, ಹಸು ಕಡಿದ ಕತ್ತಿಯನ್ನು ಅಡಗಿಸಿಟ್ಟ ಜಾಗ ತೋರಿಸುವುದಾಗಿ ಹೇಳಿ, ಪೊಲೀಸರ ಮೇಲೆ ದಾಳಿ ಮಾಡಿದಾಗ , ಆತನ ಕಾಲಿಗೆ ಗುಂಡು ಹಾರಿಸಬೇಕಾದ ಪ್ರಸಂಗವನ್ನು ವಿವರಿಸಿದರು. ಆರಂಭದಲ್ಲಿ ಬಂಧಿತನಾದ ಆರೋಪಿಯನ್ನು ನ್ಯಾಯಾಯಲ ನ್ಯಾಯಾಂಗ ವಶಕ್ಕೆ ನೀಡಿದೆ. ಪ್ರಮುಖ ಆರೋಪಿಗಳಿಬ್ಬರ ಹುಡುಕಾಟ ಚುರುಕುಗೊಳಿಸಿದ್ದು, ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಣೆ ಮಾಡಲಾಗಿದೆ ಎಂದರು.ದನ ಕಡಿದ ಆರೋಪಿಗಳನ್ನು ಹಿಡಿಯುವಲ್ಲಿ ವಿವಿಧ ಮಸೀದಿಗಳ ತಂಜೀಂ ಸಂಸ್ಥೆ, ಅನೇಕ ಮುಸ್ಲಿಂ ಮುಖಂಡರು ಸಹಕರಿಸಿದ್ದಾರೆ. ಮಾಧ್ಯಮ ಸಂಯಮ ತೋರಿಸಿದೆ ಎಂದು ಎಸ್ಪಿ ಸ್ಮರಿಸಿಕೊಂಡರು.
ಹಸು ಹತ್ಯೆಯನ್ನು ಸಮುದಾಯದಗಳ ನಡುವೆ ಸಂಘರ್ಷಕ್ಕೆ ಬಳಸದಂತೆ ಪೊಲೀಸರು ಶ್ರದ್ಧೆವಹಿಸಿ ಕೆಲಸ ಮಾಡಿದ್ದಾರೆ. ಜನರು ಸಹ ಪೋನ್ ಮೂಲಕ ಸುಳಿವು ನೀಡಿದ್ದರು.ಕೊಂಡಕುಳಿ ಗ್ರಾಮದಲ್ಲಿ ನಡೆದಿದ್ದ ಗರ್ಭ ಧರಿಸಿದ್ದ ಹಸುವಿನ ಹತ್ಯೆ ಪ್ರಕರಣ ಇಡೀ ರಾಜ್ಯದಲ್ಲಿ ಸುದ್ದಿ ಮಾಡಿತ್ತು. ಈ ಪ್ರಕರಣವನ್ನು ಮುಖ್ಯಮಂತ್ರಿ, ಗೃಹಮಂತ್ರಿಗಳು ಗಂಭೀರವಾಗಿ ತೆಗೆದುಕೊಂಡು ತನಿಖೆಗೆ ಸೂಚಿಸಿದ್ದರು ಎಂದು ಎಸ್ಪಿ ನಾರಾಯಣ ಹೇಳಿದರು.ಕೊಂಡಕುಳಿ ಗ್ರಾಮದಲ್ಲಿ ಮೇಯಲು ಬಂದಿದ್ದ ಹಸುವನ್ನ ಕಡಿದು ಭಟ್ಕಳದಲ್ಲಿ ಮದುವೆ ಸಮಾರಂಭದಲ್ಲಿ ಊಟಕ್ಕೆ ಬಳಕೆ ಮಾಡಲು ಆರೋಪಿಗಳು ನೀಡಿದ್ದರು. ಈ ಸುಳಿವು ತನಿಖೆಗೆ ನೆರವಾಯಿತು. ದನ ಸಾಗಾಟದ ಪ್ರಕರಣದ ಎಲ್ಲಾ ಆರೋಪಿಗಳನ್ನು ವಿಚಾರಿಸಲಾಯಿತು. ಸುಮಾರು 400 ಕ್ಕೂ ಹೆಚ್ಚು ಜನರನ್ನು ಪೊಲೀಸರು ವಿಚಾರಣೆ ನಡೆಸಿದಾಗ , ಕೊನೆಗೆ ಹೊನ್ನಾವರ ತಾಲೂಕಿನ ಲ್ಕಿಯ ತೌಫಿಕ್ ಎಂಬ ಆರೋಪಿಯನ್ನು ಭದ್ರಾವತಿಯಲ್ಲಿ ಬಂಧಿಸಲಾಯಿತು.
ಇನ್ನು ಹೊನ್ನಾವರ ಬಳಿಯ ಕಾಸರಕೋಡನ 19 ವರ್ಷದ ಯುವಕ ಫೈಝಾನ್ ಎನ್ನುವ ಆರೋಪಿಯನ್ನ ಸಹ ಬಂಧಿಸಿದ್ದೆವು. ಈತ ಆರೋಪಗಳು ಪರಾರಿಯಾಗಲು ನೆರವಾಗಿದ್ದ. ಅದಕ್ಕೂ ಮುನ್ನ ಕುಮಟಾದ ಬಾರ್ ಒಂದರಲ್ಲಿ ಕುಡಿದು, ತಪ್ಪಿಸಿಕೊಳ್ಳುವ ಪ್ಲಾನ್ ರೂಪಿಸಿದ್ದರು ಎಂದು ಎಸ್ಪಿ ಮಾಧ್ಯಮಗಳಿಗೆ ವಿವರಿಸಿದರು. ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದು ಇಬ್ಬರು ಹಿಂದೂ ಸಮಾಜಕ್ಕೆ ಸೇರಿದ ಆರೋಪಿಗಳು ಸಹ ಇದ್ದು, ಹಸು ಕಡಿದ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎನ್ನಲಾಗಿದೆ. ಇದನ್ನು ತನಿಖೆ ಮಾಡಲಾಗುತ್ತಿದೆ ಎಂದರು.
ಆರೋಪಿಗಳು ಹಸುವಿನ ಮಾಂಸವನ್ನ ಭಟ್ಕಳದ ಮದುವೆ ಸಮಾರಂಭಕ್ಕೆ ಮಾರಾಟ ಮಾಡಿದ್ದು, ಅವರಿಂದ 7500 ರೂ. ಹಣವನ್ನ ಸಹ ಪಡೆದಿದ್ದರು.ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡ ದಾಖಲೆ ಪೊಲೀಸರಿಗೆ ಲಭ್ಯವಾಗಿದೆ ಎಂದರು. ಈ ಪ್ರಕರಣದಲ್ಲಿ ನಾಪತ್ತೆಯಾದ ಇಬ್ಬರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದರು. ಎಸ್ಪಿ ಜೊತೆ ಮಾಧ್ಯಮಗೋಷ್ಠಿಯಲ್ಲಿ ಅಡಿಶನಲ್ ಎಸ್ಪಿ ಜಗದೀಶ್ , ಕುಮಟಾ , ಹೊನ್ನಾವರ ಸಿಪಿಐ ಇದ್ದರು.