ಹಾರೂಗೇರಿ,01: ನಾವುಗಳು ಆಸ್ಪತ್ರೆಗಳಿಂದ ದೂರ ಉಳಿದರೆ ಮಾತ್ರ ನಮ್ಮ ಆರೋಗ್ಯ ಉತ್ತಮವಾಗಿ ಇಟ್ಟುಕೊಳುವುದಕ್ಕೆ ಸಾಧ್ಯ. ಮುಖ್ಯವಾಗಿ ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳಿಗೆ ಸಾರ್ವಜನಿಕರು ಗೌರವ ನೀಡಿ ಸರಿಯಾಗಿ ಸ್ಪಂದಿಸಬೇಕು ಸರಕಾರಿ ಆಸ್ಪತ್ರೆಗಳು ನಮ್ಮ ಆಸ್ಪತ್ರೆ ಎಂಬ ಮನೋಭಾವನೆಗಳು ನಮ್ಮಲ್ಲಿ ಮೂಡಬೇಕೆಂದು ಕುಡಚಿ ಶಾಸಕ ಪಿ. ರಾಜೀವ್ ಹೇಳಿದರು.
ಪಟ್ಟಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ 2 ಕೋಟಿ ಅನುದಾನದಲ್ಲಿ ನಿಮರ್ಾಣಗೊಂಡ ನೂತನ ಕಟ್ಟಡದ ಉದ್ಘಾಟನೆ ನೆರವೆರಿಸಿ ಮಾತನಾಡುತ್ತಾ. ಮುಂಬರುವ ದಿನಗಳಲ್ಲಿ ತುತರ್ು ಚಿಕಿತ್ಸೆಗಾಗಿ ಶಾಸಕರ ಅನುದಾನದಲ್ಲಿ ವಾಹನ ನೀಡಿ. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹೆಚ್ಚಿ ಅಭಿವೃದ್ಧಿಗಾಗಿ ಕ್ರೀಯಾ ಯೋಜನೆಯನ್ನು ಮಾಡಿ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿ ಉನ್ನತ ಮಟ್ಟದಲ್ಲಿ ಆಸ್ಪತ್ರೆ ಬೆಳೆಸೋಣ. ಆಯುಷ್ಮಾನ್ ಭಾರತ ಯೋಜನೆ ಹಾಗೂ ಇನ್ನೂ ಹೆಚ್ಚಿನ ಸೌಲಭ್ಯಗಳು ಸರಕಾರಿ ಆಸ್ಪತ್ರೆಗಳನ್ನು ದೊರೆಯುತ್ತವೆ. ಸಾರ್ವಜನಿಕರು ಅದರ ಸೂಕ್ತವಾದ ಉಪಯೋಗವನ್ನು ಪಡೆದುಕೊಂಡು ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳುವ ಪ್ರಯತ್ನವನ್ನು ಮಾಡಬೇಕೆಂದು ಕರೆ ನೀಡಿದರು.
ಎನ್ಜಿಒಗಳಿಗೆ ಈ ಆಸ್ಪತ್ರೆ ನಿರ್ವಹಣೆ ಮಾಡಿಕೊಳ್ಳುವುದಕ್ಕೆ ಕ್ರಮವನ್ನು ಕೈಗೊಂಡು ಹಾಗೂ ಖಾಸಗಿ ಆಸ್ಪತ್ರೆಗಳು ಈ ಒಂದು ಸರಕಾರಿ ಪ್ರಾಥಮಿಕ ಆರೋಗ್ಯ ಹೊಂದಾಣಿಕೆ ಮಾಡಿಕೊಂಡು ಬಡವರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳುವುದಕ್ಕೆ ಉಪಯೋಗವಾಗುತ್ತದೆಂದು ಹೇಳಿದರು.
ತಾಲೂಕಾ ಪಂಚಾಯತ ಅಧ್ಯಕ್ಷ ಸುಜಾತಾ ಗೋಮಟೇಶ ಪಾಟೀಲ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಎಸ್.ವ್ಹಿ. ಮುನ್ಯಾಳ, ತಾಲೂಕಾ ಅಧಿಕಾರಿಕಾರಿ ಡಾ. ಎಮ್.ಎಸ್. ಕೊಪ್ಪದ, ಡಾ. ಸೋಮಶೇಖರ ಪಾಟೀಲ, ಇಂಜೀನಿಯರ ನಾಜಿನೀನಬಾನು ಶೇಖ, ಪುರಸಭೆ ಸದಸ್ಯ ಸಂತೋಷ ಶಿಂಗಾಡಿ, ರಾಜು ಐತವಾಡಿ, ಬಸವರಾಜ ಖೋತ, ಕಾಂತು ಬಾಂಡಗಿ, ಮಾರುತಿ ಕಲ್ಯಾಣಕರ, ನಾಗೇಶ ಕಾಮಶೆಟ್ಟಿ, ಮಹಾದೇವ ಗಾಣಿಗೇರ ಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.