ಲೋಕದರ್ಶನ ವರದಿ
ಗದಗ 10: ಡಾ. ಬಿ. ಆರ್ ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ ನಾವೆಲ್ಲರೂ ಸೇರಿ ಭಾರತ ಭಾಗ್ಯವಿಧಾತನ ಜಯಂತಿಯನ್ನು ವಿಶ್ವದಲ್ಲಿ ಅರ್ಥಪೂರ್ಣವಾಗಿ ನಮ್ಮ ನಮ್ಮ ಮನೆಯಲ್ಲಿ 14 ದೀಪಗಳನ್ನು ಹಚ್ಚಿ ಆಚರಿಸೋಣ. ಅಂಬೇಡ್ಕರ್ ಜಯಂತಿಯನ್ನು ಬಹಳ ಜನ ಬಹಳ ವಿಜೃಂಭಣೆಯಿಂದ ಮಾಡುವುದು ನಮ್ಮ ಅಭಿಮಾನ ಆದರೆ ಕೊರೊನಾ ಭೀತಿಯಿಂದ ಅಂಬೇಡ್ಕರ್ ಜಯಂತಿಯನ್ನು ಈ ಭಾರಿ ಮಾಡಲು ಸಾಧ್ಯವಿಲ್ಲ ಎಂದು ಮನೆಯಲ್ಲೇ ಕೂತು ಯೋಚಿಸುವ ಅಗತ್ಯವಿಲ್ಲ. ಮನೆಯಲ್ಲೇ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು 14ದೀಪಗಳನ್ನು ಹಚ್ಚೋಣ ಅಂಬೇಡ್ಕರ್ ಹಬ್ಬವನ್ನು ಸಂಭ್ರಮ ಪಡೋಣ, ನಮ್ಮ ಮನಸ್ಸಿನಲ್ಲಿ ನಮ್ಮ ಮನೆಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬರು ಇದ್ದಾರೆ ಅನ್ನೋದನ್ನ ತೋರಿಸೋಣ ಮನೆಯಲ್ಲೆ ಇದ್ದು ನಮ್ಮ ನಮ್ಮ ಮಕ್ಕಳಿಗೆ ಜೈ ಭೀಮ್ ಪಾಠ ಹೇಳಿ ಕೊಡೋಣ ಅಂಬೇಡ್ಕರ್ ರವರನ್ನು ಮತ್ತೆ ಮತ್ತೆ ಓದಿಕೊಳ್ಳೋಣ ಆಗ ನಮಗೂ, ನಮ್ಮ ಮಕ್ಕಳಿಗೂ ಅಂಬೇಡ್ಕರ್ ಅರ್ಥವಾಗುತ್ತಾರೆ. ಎಂದು ರಾಮಣ್ಣ ಬಿ ಗಡದವರ್ ಅಂಬೇಡ್ಕರ್ ಸೇನೆ ಗದಗ ಜಿಲ್ಲಾಧ್ಯಕ್ಷರು ಹಾಗೂ ಲಕ್ಷ್ಮೇಶ್ವರ ಪುರಸಭೆಯ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.