ಭಾರತದ ಸಂವಿಧಾನ ವಿಶ್ವದ ಶ್ರೇಷ್ಟ ಸಂವಿಧಾನ:ಎನ್.ಎಮ್.ಭಾವಿಮನಿ
ಮುಂಡರಗಿ 26: ಭಾರತಕ್ಕೆ ಬ್ರಿಟಿಷ್ ರಿಂದ ಸ್ವಾತಂತ್ರ-್ಯ ದೊರೆತ ನಂತರ ದೇಶವನ್ನು ಮುನ್ನಡೆಸಲು ಭಾರತೀಯರೆ ರಚಿಸಿದ ಸಂವಿಧಾನವನ್ನು ಜನೆವರಿ 26 ,1950ರಂದು ಜಾರಿಗೆತಂದ ದಿನವನ್ನು ಗಣರಾಜ್ಯೋತ್ಸವ ದಿನಾಚರಣೆವೆಂದು ಆಚರಿಸುತ್ತೆವೆ ಎಂದು ಡಾ.ಅಂಬೇಡ್ಕರ ವಿದ್ಯಾವರ್ಧಕ ವಿದ್ಯಾ ಸಮಿತಿಯ ಕಾರ್ಯದರ್ಶಿ ಎನ್ ಎಂ ಭಾವಿಮನಿ ಅವರು ಹೇಳಿದರು. ನಗರದ ಅಂಬೇಡ್ಕರ್ ಮಹಾವಿದ್ಯಾಲಯದಲ್ಲಿ ರವಿವಾರದಂದು ಜರುಗಿದ ಗಣರಾಜ್ಯೋತ್ಸವ ದಿನಾಚರಣೆ ಧ್ವಜಾರೋಹಣ ನೇರವರಿಸಿ ಅವರು ಮಾತನಾಡಿದರು. ಕರಡು ಸಮಿತಿ ಅಧ್ಯಕ್ಷರಾದ ಡಾ.ಅಂಬೇಡ್ಕರ ರವರು ಅನೇಕ ದೇಶದ ಸಂವಿಧಾನ ವನ್ನು ಅಧ್ಯಯನ ಮಾಡಿ ನಮ್ಮ ದೇಶಕ್ಕೆ ಸೂಕ್ತವೆನುಸುವುದನ್ನು ಎರವಲು ಪಡೆದುಕೊಂಡಿದ್ದಾರೆ,ನಮ್ಮ ದೇಶವು 75 ವರ್ಷ ಸುಭದ್ರವಾಗಿ ನಡೆಯಲು ಸಂವಿಧಾನವು ಭದ್ರಬುನಾದಿಯಾಗಿದೆ.ಸ್ವಾತಂತ್ರ-್ಯ,ಸಮಾನತೆ,ಏಕತೆ,ಭ್ರಾತೃತ್ವ ನಮ್ಮ ಸಂವಿಧಾನದ ಪ್ರಮುಖ ಮೌಲ್ಯಗಳಾಗಿವೆ.ನಮ್ಮ ದೇಶದಲ್ಲಿ ಅನೇಕ ಭಾಷೆ ,ಸಂಸ್ಕೃತಿ,ಪರಂಪರೆಯ ಆಚರಣೆ ನಡುವೆಯೂ ಎಲ್ಲರೂ ಸ್ವಾಭಿಮಾನದಿಂದ ಬದಕಲು ಸಂವಿಧಾನ ಎಲ್ಲರ ಶಕ್ತಿಯಾಗಿದೆ .ಈ ರಾಷ್ಟ್ರೀಯ ಹಬ್ಬವು ದೇಶದ ಏಕತೆ ಮತ್ತು ಹೆಮ್ಮೆಯನ್ನು ಕಾಪಾಡಿಕೊಳ್ಳಲು ನಮಗೆಲ್ಲರಿಗೂ ಅವಕಾಶವನ್ನು ನೀಡುತ್ತದೆ. ಇದೇ ಮಂತ್ರವನ್ನು ನಾವೆಲ್ಲರೂ ಸಹ ಜಪಿಸುತ್ತಾ, ಸದಾ ನೆನಪಿನಲ್ಲಿ ಇಟ್ಟುಕೊಂಡು, ಚೆನ್ನಾಗಿ ಓದಿ, ಈ ದೇಶವನ್ನು ಇನ್ನಷ್ಟು ಅಭಿವೃದ್ಧಿಯತ್ತ ಸಾಗಿಸೋಣ ಎಂದು ಚೆನ್ನಾಗಿ ಓದಿ ಎಂದು ಹೇಳಿದರು. ಡಾ.ಅಂಬೇಡ್ಕರ ವಿದ್ಯಾವರ್ಥಕ ವಿದ್ಯಾಸಮಿತಿಯ ಸಂಚಾಲಕರಾದ ವಿನಾಯಕ ಭಾವಿಮನಿ ಮಾತನಾಡಿ ಪ್ರತಿವರ್ಷ ನಮ್ಮ ದೇಶದಲ್ಲಿ ಇದೊಂದು ಮಹತ್ವದ ಸಂದರ್ಭವಾಗಿದೆ. ಇನ್ನು ನವದೆಹಲಿಯ ಕರ್ತವ್ಯ ಪಥದಲ್ಲಿ ರಕ್ಷಣಾ ಪಡೆಗಳು ಅತ್ಯಂತ ಭವ್ಯವಾದ ಪರೇಡ್ ಮೆರವಣಿಗೆಯನ್ನು ನಡೆಸುತ್ತವೆ.ದೇಶದ ವಿವಿಧ ಸಂಸ್ಕೃತಿಗಳ ಸ್ತಬ್ಧ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ.ಅದರಲ್ಲಿ ನಮ್ಮ ಹೆಮ್ಮೆಯ ಪ್ರಾರಂಪರಿ ಪ್ರದೇಶವಾದ ಲಕ್ಕುಂಡಿಯ ದೇವಾಲಯದ ಸ್ತಬ್ಧ ಚಿತ್ರ ಇಂದು ದೆಹಲಿಯಲ್ಲಿ ನಡೆಯುತ್ತಿರುವುದು ನಮ್ಮೆಲ್ಲರಿಗು ಹೆಮ್ಮೆಯ ಸಂಗತಿಯಾಗಿದೆ. ಭಾರತದ ಸಂವಿಧಾನವು ಬೃಹತ್ ಮತ್ತು ಲಿಖಿತ ಭಾರತದ ಸರ್ವೋಚ್ಛ ಕಾನೂನಾಗಿದೆ ಇದರ ಜಾರಿಗೆ ಮಹತ್ವದ ಕೊಡುಗೆ ನೀಡಿದವರು ಡಾ ಬಿ.ಆರ್.ಅಂಬೇಡ್ಕರ್ ರವರು.ಆದ್ದರಿಂದ ಅಂಬೇಡ್ಕರ್ ರನ್ನು ಭಾರತ ಸಂವಿಧಾನದ ಪಿತಾಮಹರು ಎನ್ನಲಾಗುತ್ತದೆ.ನಾವು ಈ ಸಂವಿಧಾನವನ್ನು ಗೌರವಿಸಬೇಕು. ಅದರಲ್ಲಿ ಇರುವ ನಿಯಮಗಳನ್ನು ಅನುಸರಿಸಬೇಕು. ಮೂಲಭೂತ ಹಕ್ಕುಗಳಂತೆ, ದೇಶದ ಪ್ರಜೆಗಳಾಗಿ ಇದರಲ್ಲಿ ನೀಡಲಾದ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಅಂಬೇಡ್ಕರ ಕಾಲೇಜಿನ ವ್ಯವಸ್ಥಾಪಕರಾದ ಬಸವರಾಜ ಚಿಗಣ್ಣನವರ ಮಾತನಾಡಿ ನಮ್ಮ ದೇಶದ ಸಂವಿಧಾನವು ಕಾರ್ಯಾಂಗ,ನ್ಯಾಯಂಗ,ಶಾಸಕಾಂಗದ ದಿಕ್ಸೂಚಿ ಯಾಗಿದೆ,ಸಂವಿಧಾನ ವು ಕೇವಲ ವಕೀಲರಿಗೆ ಸೀಮಿತವಾಗದೆ ಎಲ್ಲಾವಿದ್ಯಾರ್ಥಿಗಳು ಅಧ್ಯಯನ ಮಾಡಿ ಅದರ ಮಹತ್ವವನ್ನು ತಿಳಿಯಲು ಸೂಚಿಸಿದರು,ಈಗಾಗಲೇ ದ್ವೀತಿಯ ಪಿ.ಯು.ಸಿ. ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಿದ್ದು ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದು ಓದಿ ಉತ್ತಮ ಫಲಿತಾಂಶ ಪಡೆಯಲು ಶುಭಕೋರಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಮಲ್ಲೇಶ ಹೊಸಮನಿ ಮಾತನಾಡಿ ಗಣರೋಜ್ಯೊತ್ಸವ ದಿನದ ಬಗ್ಗೆ ಎಲ್ಲರು ಕೇವಲ ಆಚರಣೆಗೆ ಸೀಮಿತಗೊಳಿಸದೆ ಸಂವಿಧಾನವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡು ನೀವು ಕಾರ್ಯನಿರ್ವಹಿಸಿವ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಬೇಕು ಹಾಗು ಓದಿನ ಕಡೇ ಗಮನ ಹರಿಸಬೇಕು ಎಂದು ತಿಳಿಸಿದರು. ಉಪನ್ಯಾಸಕಿಯರಾದ ಸುಧಾ ಪೂಜಾರ್ ,ಅಶ್ವಿನಿ ಹೊಸಪೇಟೆ, ಪ್ರೇಮಾ ಅಳಗವಾಡಿ,ಶನ್ಮುಖ ಚಿಲಗೋಡ,ಸೇರಿದಂತೆ ಕಾಲೇಜಿನ ಸಿಬ್ಬಂಧಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.