ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಓದು ಕಾರ್ಯಕ್ರಮ
ಗದಗ 12: ಹಲವರು ಮನುಷ್ಯರನ್ನು ಗುಲಾಮರನ್ನಾಗಿ ಮಾಡಿದವರನ್ನು ನಾವು ನೊಡಿದ್ದೇವೆ, ಆದರೆ ಗುಲಾಮರನ್ನು ರಾಜ ಮಹಾ ರಾಜರನ್ನಾಗಿಸಿದವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಎಂದು ಸಮಾಜ ಕಲ್ಯಾಣ ಇಲಾಖೆ0ು ಉಪನಿರ್ದೇಶಕ ಮಹೇಶ್ ಪೋತದಾರ್ ಅವರು ಹೇಳಿದರು.
ಗದಗ ನಗರದ ಆದರ್ಶ ಶಿಕ್ಷಣ ಸಂಸ್ಥೆ0ು ವಾಣಿಜ್ಯ ಮಹಾವಿದ್ಯಾಲ0ುದ ಸಿಲ್ವರ್ ಜುಬ್ಲಿ ಸಭಾಂಗಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಆದರ್ಶ ಶಿಕ್ಷಣ ಸಂಸ್ಥೆ0ು ಶ್ರೀ ವಿ ಆರ್ ಕುಷ್ಟಗಿ ಮೆಮೋರಿ0ುಲ್ ಕಾಲೇಜ್ ಆಫ್ ಕಾಮರ್ಸ್ ಹಾಗೂ ರಾಷ್ಟ್ರೀ0ು ಸೇವಾ 0ೋಜನೆ ಘಟಕ ಇವರುಗಳ ಸಂ0ುುಕ್ತ ಆಶ್ರ0ುದಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ ಆರ್ ಅಂಬೇಡ್ಕರ್ ಅವರ ಓದು ಕಾ0ುರ್ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತಕ್ಕೆ ಶ್ರೇಷ್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಭುದ್ಧ ರಾಷ್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಪಾತ್ರ ಅಭಿಸ್ಮರಣೀ0ು. ತಮ್ಮೆಲ್ಲರಿಗೂ ವಿದ್ಯಾಭ್ಯಾಸ ಶಿಕ್ಷಣ ಓದು ಎಷ್ಟು ಮುಖ್ಯ ಎಂಬುದನ್ನು ಡಾ. ಅಂಬೇಡ್ಕರ್ ನೋಡಿ ಅರಿ0ುಬೇಕಿದೆ. ಓದಬೇಕು ಓದಿದ್ದುದನ್ನು ಅರ್ಥ ಮಾಡಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ನಮ್ಮಲ್ಲಿ ಸಾಧನೆ ಮಾಡಲು ಇಚ್ಛಾಶಕ್ತಿ ಬೇಕು, ಇಚ್ಛಾಶಕ್ತಿ ಇದ್ದಲ್ಲಿ ಸಾಧನೆ ಸಾಧ್ಯ ಎಂದು ಹೇಳಿದರು.
ಶೋಷಿತ ವರ್ಗದ ಧ್ವನಿ0ಾಗಿ ಬಡವರ ಕಣ್ಮಣಿ0ಾಗಿ ಡಾ. ಬಿ ಆರ್ ಅಂಬೇಡ್ಕರ್ ಅವರು ಅಗಾಧ ಸಾಧನೆ ಮಾಡುವ ಮೂಲಕ ನಮ್ಮೆಲ್ಲರಿಗೂ ಸ್ಪೂರ್ತಿ0ಾಗಿದ್ದಾರೆ. ಸಕಲರಿಗೂ ಸ್ಪೂರ್ತಿ ಸಿಂಚನ ಡಾ. ಬಿಆರ್ ಅಂಬೇಡ್ಕರ್ ಎಂದು ಅಂಬೇಡ್ಕರ್ ಅವರನ್ನು ಅವರ ಸಾಧನೆಗಳನ್ನು ಬಣ್ಣಿಸಿದರು.
ಭಾರತದ ದಿವ್ಯ ಚೇತನ ಸಂವಿಧಾನ ಶಿಲ್ಪಿ ಡಾಕ್ಟರ್ ಬಿಆರ್ ಅಂಬೇಡ್ಕರ್ ಎಂಬ ಸ್ವರಚಿತ ಗೀತೆ ಹಾಡುವ ಮೂಲಕ ನೆರೆದ ವಿದ್ಯಾರ್ಥಿಗಳಿಗೆ ಮನರಂಜ0ು ಮೂಲಕ ಸಂವಿಧಾನ ಓದಿನ ಕುರಿತು ಮಹೇಶ್ ಪೋತದಾರ್ ಅರಿವು ಮೂಡಿಸಿದರು.
ಹುಲಕೋಟಿ ಜಿಸಿಟಿಎಂ ಪದವಿ ಪೂರ್ವ ಮಹಾವಿದ್ಯಾಲ0ುದ ಪ್ರಾಧ್ಯಾಪಕ ಡಾ. ಅರ್ಜುನ್ ಗೋಳಸಂಗಿ ವಿಶೇಷ ಉಪನ್ಯಾಸ ನೀಡುತ್ತಾ ಸಮತಾ ಭಾರತ ನಿರ್ಮಾಣ ಆಗಬೇಕಿದೆ ಎಂದರು. ಅಂಬೇಡ್ಕರ್ ಅವರ ಬಾಲ್ಯ, ಶಿಕ್ಷಣದ ಕುರಿತು ಅವರು ಅನುಭವಿಸಿದ ಶೋಷಣೆ0ು ಬಗ್ಗೆ, ಸಮಾಜದಲ್ಲಿ ಮೇಲು-ಕೀಳು ಬಡವ ಬಲ್ಲಿದ ಕುರಿತ ಶೋಷಣೆಗಳ ಬಗ್ಗೆ ವಿವರವಾಗಿ ತಿಳಿಸುವ ಮೂಲಕ, ಶೋಷಣೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು
ಸಮ ಸಮಾಜ ನಿರ್ಮಾಣಕ್ಕೆ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರ ವಿಚಾರಧಾರೆ, ಜೀವನ ತತ್ವ, ಸಿದ್ಧಾಂತ ಓದು, ಪ್ರೇರಕ ಶಕ್ತಿ0ಾಗಿದೆ ಎಂದು ಅಭಿಪ್ರಾ0ುಪಟ್ಟರು. ಸಂವಿಧಾನವು ಸರ್ವರಿಗೂ ಸಂಬಂಧಿಸಿದಾಗಿದ್ದು ಅದೇ ತರಹ ಡಾ. ಬಿಆರ್ ಅಂಬೇಡ್ಕರ್ ಅವರು ಸಹ ಸರ್ವರಿಗೂ ಸಂಬಂಧಿಸಿದವರು ಎಂಬುದನ್ನು ನಾವೆಲ್ಲರೂ ಅರಿ0ುಬೇಕಿದೆ. ಸಂವಿಧಾನದ ಆಶ0ುಗಳ ಈಡೇರಿಕೆಗಾಗಿ ನಾವೆಲ್ಲ ಪಣತೊಡೋಣ ಎಂದು ಕರೆ ನೀಡಿದರು.
ಜಿಲ್ಲಾ ವಾರ್ತಾಧಿಕಾರಿ ವಸಂತ ಮಡ್ಲೂರ ಮಾತನಾಡಿ, ಸ್ವಾಭಿಮಾನ ನಮ್ಮತನ ಜೀವನದಲ್ಲಿ ಅಳವಡಿಕೊಳ್ಳುವ ಮೂಲಕ ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಧ್ಯಾನದ ಬಲದಿಂದ ಅಧ್ಯ0ುನ ಕೇಡಾಗುವಂತೆ, ಜ್ಯೋತಿ0ು ಬಲದಿಂದ ತಬಂದದ ಕೇಡಾಗುತ್ತದೆ. ಅದೇ ತರ ಶಿಕ್ಷಣ ಜೀವನದಲ್ಲಿ ಎಂತಹ ಬದಲಾವಣೆ0ುನ್ನು ತರಲು ಸಾಧ್ಯ ಎಂಬುದನ್ನು ತಿಳಿಸಿದರು. ಸಂವಿಧಾನ ಓದು ಕಾ0ುರ್ಕ್ರಮವು ಸಂವಿಧಾನದ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸುವುದಾಗಿದೆ ಸಂವಿಧಾನ ನಮ್ಮೆಲ್ಲರಿಗೂ ಶ್ರೇಷ್ಠ ಎಂಬುದನ್ನು ಅರಿತು ಸಮಸಮಾಜ ನಿರ್ಮಿಸಲು ಮುಂದಾಗೋಣ ಎಂದು ಹೇಳಿದರು.
ಕಾ0ುರ್ಕ್ರಮದ ಅಧ್ಯಕ್ಷತೆ0ುನ್ನು ಆದರ್ಶ ಶಿಕ್ಷಣ ಸಮಿತಿ ಅಧ್ಯಕ್ಷರಾದ ಕೆ ವಿ ಕುಷ್ಟಗಿ ಅವರು ವಹಿಸಿದ್ದರು. ಆದರ್ಶ ವಾಣಿಜ್ಯ ಮಹಾವಿದ್ಯಾಲ0ುದ ಪ್ರಾಚಾ0ುರ್ ಪ್ರೊ. ಕೆ ಗಿರಿರಾಜಕುಮಾರ್ ಅವರು ಸಂವಿಧಾನದ ಪ್ರಸ್ತಾವನೆ0ುನ್ನು ಓದಿಸಿದರು.
ವೇದಿಕೆ0ುಲ್ಲಿ ಆದರ್ಶ ವಾಣಿಜ್ಯ ಮಹಾವಿದ್ಯಾಲ0ುದ ಕೋ ಆರ್ಡಿನೇಟರ್ ಹಾಗೂ ಉಪಪ್ರಾಚಾ0ುರ್ ಡಾ. ವಿ ಟಿ ನಾ0್ಕುರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾ0ುಕ ನಿರ್ದೇಶಕ ವೀರ0್ಯುಸ್ವಾಮಿ ಬಿ ಹಾಜರಿದ್ದರು.
ಗದಗ ದಲಿತ ಕಲಾ ಮಂಡಳಿ ಅಧ್ಯಕ್ಷ ಶರೀಫ್ ಬೆಳೆ0ುಲಿ ಹಾಗೂ ಸಂಗಡಿಗರು ಅಂಬೇಡ್ಕರ್ ಕುರಿತು ಗೀತೆಗಳನ್ನು ಪ್ರಸ್ತುತ ಪಡಿಸಿದರು. ಡಾ. ಬಿಆರ್ ಅಂಬೇಡ್ಕರ್ ಕುರಿತು ರಸಪ್ರಶ್ನೆ ಪ್ರಬಂಧ ಸ್ಪರ್ಧೆ, ಆಶುಭಾಷಣ, ಕವನ ವಾಚನ ಸ್ಪರ್ಧೆ0ುಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಜರಗಿತು. ಆದರ್ಶ ಮಹಾವಿದ್ಯಾಲ0ುದ ಎನ್ ಎಸ್ ಎಸ್ ಘಟಕದ ಕಾ0ುರ್ಕ್ರಮ ಅಧಿಕಾರಿ ಪ್ರೊ. ಬಿಪಿ ಜೈನ ಕಾ0ುರ್ಕ್ರಮ ನಿರ್ವಹಿಸಿದರು.