ಲೋಕದರ್ಶನ ವರದಿ
ಗದಗ 30: ಜಿಲ್ಲೆ ಕೊಣ್ಣೂರ ಗ್ರಾಮಕ್ಕೆ ಆಗಮಿಸಿದ ಇನ್ಪೋಸಿಸ್ ಸಂಸ್ಥೆಯ ಅಧ್ಯಕ್ಷರಾದ ಡಾ. ಸುಧಾ ಮೂತರ್ಿಯವರು ಬಂದು ಗ್ರಾಮದ ನಂಜನಗೂಡು ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಆಗಮಿಸಿ ದೇವರ ದರ್ಶನ ಪಡೆದು ನಂತರ ನೆರೆಯಿಂದ ಹಾನಿಯಾದ ಮನೆಗಳಿಗೆ ಬೇಟಿ ಕೊಟ್ಟು ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.
ಸರಕಾರ ಫಲಾನುಭವಿಗಳ ಸ್ಥಳ ತೋರಿಸಿದಲ್ಲಿ ಅಲ್ಲಿ ನಮ್ಮ ಗುತ್ತಿಗೆದಾರರು ಮನೆ ನಿಮರ್ಿಸುತ್ತಾರೆ. ಸರಕಾರ ನಿಗದಿಪಡಿಸಿದಂತೆ ಒಂದು ಬೇಡ್ ರೂಂ ಅಥವಾ ಎರಡೂ ಬೇಡ್ ರೂಂ ಯಾವ ರೀತಿ ಸರಕಾರ ಸೂಚಿಸುತ್ತಾರೋ ಹಾಗೆ ಮನೆ ನಿಮರ್ಿಸುವ ಕೇಲಸ ಮಾಡುತ್ತೇವೆ. ಒಟ್ಟು 200 ಮನೆ ನಿಮರ್ಿಸುವ ಯೋಜನೆ ನಮ್ಮದು ಎಂದರು.ಗರಿಷ್ಠ 10 ಲಕ್ಷ ರೂಪಾಯಿಗಳ ಒಳಗೆ ಒಂದು ಮನೆ ನಿಮರ್ಿಸುತ್ತೇವೆ.ಈಗಾಗಲೇ 5 ಕೋಟಿ ಹಣವನ್ನು ಖಚರ್ು ಮಾಡಿದ್ದೇವೆ ಎಂದರು. ಈಗ 10 ಕೋಟಿ ಹಣವನ್ನು ಮುಖ್ಯಮಂತ್ರಿ ನಿಧಿಗೆ ನೀಡುವದಲ್ಲ ಸರಕಾರ ಸ್ಥಳ ನಿಗದಿಪಡಿಸಿದಲ್ಲಿ ಅದರಲ್ಲಿ ಮನೆ ನಿಮರ್ಾಣ ಒಂದೇ ಸ್ಥಳದಲ್ಲಿ ಕಟ್ಟುವದಿಲ್ಲ. ಐವತ್ತು ಮನೆಗಳು ಒಂದು ಕಡೇ ಮತ್ತೆ ಐವತ್ತು ಮನೆ ಬೇರೆ ಕಡೆ ಹೀಗೆ ಮನೆಗಳ ನಿಮರ್ಾಣ. ಈಗಾಗಲೇ ದನಕರುಗಳಿಗೆ ಬಾಯಿ ಇರುವುದಿಲ್ಲ ಅದಕ್ಕಾಗಿ ಅವುಗಳಿಗೆ ಮೇವು ಸಲ್ಲಿಸಿರುರುತ್ತೇವೆ. ನಿರಾಶ್ರಿತರಿಗೆ ದಿನ ಬಳಕೆಯ ವಸ್ತುಗಳ 10 ಸಾವಿರ ಕೀಟ್ಟ್ ಗಳನ್ನ ತಯಾರಿಸಿ ನೀಡುತ್ತೇವೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯರಾದ ಕೊಣ್ಣೂರ ಮತಕ್ಷೇತ್ರದ ಅಭ್ಯಥರ್ಿ ರಾಜುಗೌಡ ಸಂಕನಗೌಡ ಕೇಂಚನಗೌಡ್ರ.(ಪಾಟೀಲ) ಗ್ರಾಮದ ಜನರು ಉಪಸ್ಥಿತರಿದ್ದರು.