ಕೈ ತಪ್ಪಿದ ಸಚಿವ ಸ್ಥಾನ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಲೋಕದರ್ಶನ ವರದಿ

ಬ್ಯಾಡಗಿ23: ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಬಿ.ಸಿ.ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯದೇ ಇರುವುದನ್ನು ಖಂಡಿಸಿ ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

    ಶನಿವಾರ ಹಳೆಪುರಸಭೆಯ ಹತ್ತಿರ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದ್ದರು. ಈ ಸಂದರ್ಭದಲ್ಲಿ ತಾಲೂಕಾ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಎಚ್.ಬುಡ್ಡನಗೌಡ್ರ ಮಾತನಾಡಿ ಕಳೆದ ಮೂರ ಬಾರಿ ಶಾಸಕರಾಗಿ ಬಿ.ಸಿ.ಪಾಟೀಲ ಆಯ್ಕೆಯಾಗುವ ಮೂಲಕ ಜಿಲ್ಲೆಯ ಎಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಆಸೆ ಅಭಿಲಾಸೆಗಳಿಗೆ ಸಮ್ಮತಿ ಕೋಡುತ್ತ ಕಾರ್ಯಕರ್ತರೊಂದಿಗೆ ಉತ್ತಮ ಭಾಂದ್ಯವ್ಯ ಹೊಂದಿದ್ದಾರೆ. 

    ಕಾರ್ಯಕರ್ತರ ನೋವು ನಲಿವುಗಳ ಬಗ್ಗೆ ಸ್ಪಂದನೆ ನೀಡುತ್ತಾ ಬಂದಿರುವ ಶಾಸಕ ಬಿ.ಸಿ.ಪಾಟೀಲ ಅವರಿಗೆ ಈ ಭಾರಿ ಸಚಿವ ಸ್ಥಾನ ದೊರೆಯಲಿದೆ ಎಂದು ಬಹಳ ವಿಶ್ವಾಸ ಹೊಂದಲಾಗಿತ್ತು. ಆದರೇ ಈ ಬಾರಿಯೂ ಬಿ.ಸಿ.ಪಾಟೀಲ ಅವರಿಗೆ ಸಚಿವ ಸ್ಥಾನ ದೊರಕದೇ ಇರುವುದು ತುಂಬಾ ನೋವಿನ ವಿಚಾರವೆಂದು ತಮ್ಮ ನೋವನ್ನು ತೋಡಿಕೊಂಡರಲ್ಲದೇ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.   

      ತಾಲೂಕಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾಜರ್ುನ ಕರಿಲಿಂಗಪ್ಪನವರ ಮಾತನಾಡಿ ಮೊದಲ ಭಾರಿ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸರಕಾರ ರಚನೆಯಾದ ಸಂದರ್ಭದಲ್ಲಿಯೇ ಶಾಸಕ ಬಿ.ಸಿ.ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಲೇಬೇಕಾಗಿತ್ತು. 

  ಆದರೇ ಕಾಂಗ್ರೆಸ್ ಹೈಕಮಾಂಡ ಮುಂದಿನ ಭಾರಿ ಸಚಿವ ಸಂಪುಟ ವಿಸ್ತರೆಣೆ ಸಂದರ್ಭದಲ್ಲಿ ಮಂತ್ರಿ ಸ್ಥಾನ ಕೊಡುವುದಾಗಿ ಭರವಸೆ ನೀಡಿ, ಇಂದು ವಿಸ್ತರಣೆಯಾದ ಸಚಿವ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡದೇ ಇರುವುದು ನಮ್ಮೆಲ್ಲರಿಗೆ ಬಹಳಷ್ಟು ನೋವು ತಂದಿದೆ.

   ಆದ್ದರಿಂದ ಈ ಕೂಡಲೇ ಬಿ.ಸಿ.ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಲೇಕೆಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.

  ಪಕ್ಷದ ಪ್ರಧಾನ ಕಾರ್ಯದಶರ್ಿ ರಮೇಶ ಸುತ್ತಕೋಟಿ, ಪಕ್ಷದ ಧುರೀಣರಾದ ಬೀರಪ್ಪ ಬಣಕಾರ, ಬಾಲಚಂದ್ರಗೌಡ ಪಾಟೀಲ, ಖಾದರಸಾಬ ದೊಡ್ಡಮನಿ, ದುಗರ್ೇಶ ಗೋಣೆಮ್ಮನವರ, ಮಂಜುನಾಥ ಭೋವಿ, ನಜೀರ ಅಹ್ಮದಶೇಖ, ಮಜೀದ ಮುಲ್ಲಾ, ದತ್ತು ಸಾಳುಂಕೆ, ರವಿಗೌಡ ಪಾಟೀಲ, ಸುಭಾಸ ದಾವಣಗೇರಿ, ಮೋಹನ ಕತ್ತಿ, ಹೊನ್ನಪ್ಪ ಬಾಕರ್ಿ, ಎ.ಎಂ.ಸೌದಾಗಾರ, ಹನುಮಂತಪ್ಪ ಶಿರಗುಂಬಿ, ರಾಜು ಕಳ್ಯಾಳ, ಮಹ್ಮದ ಹನೀಫ ಪಾಟೀಲ, ರಾಜು ಲಮಾಣಿ ಸೇರಿದಂತೆ ಇನ್ನಿತರರಿದ್ದರು.

ಬ್ಯಾಡಗಿಯ ಹಳೆ ಪುರಸಭೆಯ ಎದರು ಶಾಸಕ ಬಿ.ಸಿ.ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯದೇ ಇರುವುದನ್ನು ಖಂಡಿಸಿ ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು