ಲೋಕದರ್ಶನ ವರದಿ
ಕೊಪ್ಪಳ 18: ಜಿಲ್ಲೆಯಲ್ಲಿ ಈಚೆಗೆ ಮಳೆ ಸುರಿದು ಸುಮಾರು 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಯಾಗಿತ್ತು. ಅದನ್ನು ಪರಿಶೀಲನೆ ಮಾಡಿ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇನೆ. ಇದನ್ನೇ ಕಾಂಗ್ರೆಸ್ನವರು ಢೋಂಗಿ ರಾಜಕಾರಣ ಅಂದ್ರೆ ಏನು ಮಾಡಲಾಗದು. ಢೋಂಗಿ ರಾಜಕಾರಣ ಎಂದರೇನು? ಎಂದು ರಾಜ್ಯದ ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಶನಿವಾರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ ಜಿಲ್ಲೆಗೆ ಮೊದಲ ಬಾರಿಗೆ ಬಂದಿದ್ದು, ಕೊರೊನಾ ಭೀತಿ ನಿಯಂತ್ರಣ ಕುರಿತು ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆ ಕುರಿತು ಸಭೆ ನಡೆಸುತ್ತಿದ್ದೇನೆ. ಜಿಲ್ಲೆಯಲ್ಲಿ ಇದುವರೆಗೂ ಕೊರೊನಾ ಪಾಸಿಟೀವ್ ಕೇಸ್ ಇಲ್ಲದಿರುವುದು ಸಂತೋಷದ ಸಂಗತಿ. ಕೊಪ್ಪಳ ಜಿಲ್ಲಾಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಅವರು ಪ್ರಶಂಸಿದ ಅವರು ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಪಾಸಿಟೀವ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಶೋಚನೀಯ ಸಂಗತಿ. ತಬ್ಲಿಘಿಗಳಿಂದ ಆತಂಕ ಹೆಚ್ಚಾಗುತ್ತಿದೆ. ತಬ್ಲಿಘಿ ಸಭೆ ನಡೆಸಿರುವುದು ಅಪರಾಧವೇನಲ್ಲ. ಆದರೆ ಸಭೆಯಲ್ಲಿ ಪಾಲ್ಗೊಂಡವರು ಸ್ವ -ಇಚ್ಛೆಯಿಂದ ಮುಂದೆ ಬಂದು ಪರೀಕ್ಷೆಗೊಳಪಟ್ಟರೆ ನಿಯಂತ್ರಣ ತಕ್ಕ ಮಟ್ಟಿಗೆ ಸಾಧ್ಯ. ಅದೇ ರೀತಿ ನಂಜನಗೂಡು ಜ್ಯುಬಿಲಿಯ ಫ್ಯಾಕ್ಟರಿ ಪ್ರಕರಣದಿಂದಲೂ ಪಾಸಿಟೀವ್ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಭತ್ತ ಬೇರೆ ರಾಜ್ಯಗಳಿಗೆ ರಫ್ತಾಗಲು ಯಾವುದೇ ಅಂತಾರಾಜ್ಯ ನಿಬರ್ಂಧ ಇಲ್ಲ. ಆದರೆ ಗಡಿ ಭಾಗದ ಪ್ರದೇಶಗಳಲ್ಲಿ ಕೊರೊನಾ ಪಾಸಿಟಿವ್ ಹಾವಳಿ ಹೆಚ್ಚಾಗಿರುವುದರಿಂದ ಸಹಜವಾಗಿ ಆತಂಕ ಉಂಟಾಗುತ್ತಿದೆ. ರೈತರು ತಮ್ಮ ಬೆಳೆಗಳಿಗೆ ಬೆಲೆ ಸಿಗುತ್ತಿಲ್ಲ ಎಂದು ಬೆಳೆಗಳನ್ನು ನಾಶ ಮಾಡುವುದು, ಹರಗುವುದು ಸರಿಯಲ್ಲ. ಮಧ್ಯವತರ್ಿಗಳನ್ನು ಅವಲಂಬಿಸದೇ ರೈತರೇ ನೇರವಾಗಿ ಆನ್ಲೈನ್ ಟ್ರೇಡಿಂಗ್ ಶುರು ಮಾಡಿದರೆ ನಷ್ಟದ ಸಾಧ್ಯತೆ ಕಡಿಮೆ ಲಾಭ ಬರುತ್ತದೆ ಎಂದು ಅವರು ವಿವರಿಸಿದರು.
ಮಾಹಿತಿ ಇಲ್ಲ: ಬಿಜೆಪಿ ಮುಖಂಡ ಮುಂಬೈ ಮೂಲದ ಯುವತಿಯನ್ನು ಜಿಲ್ಲೆಗೆ ಕರೆ ತಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವರು, ಈ ಬಗ್ಗೆ ನನಗೆ ಜಾಸ್ತಿ ಮಾಹಿತಿ ಇಲ್ಲ. ಈ ಕುರಿತು ತಿಳಿದುಕೊಂಡು ನಂತರ ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಪಿಕ್ನೀಕ್ ಬಂದಿರಲಿಲ್ಲ: ಜಿಲ್ಲೆಯಲ್ಲಿ ಉಂಟಾದ ಬೆಳೆ ಹಾನಿ ಪ್ರದೇಶಗಳಿಗೆ ಕೃಷಿ ಸಚಿವನಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. ಆ ವೇಳೆ ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕಿತ್ತು. ಆದರೆ ಅವರು ಬಾರದಿರುವುದನ್ನು ಪ್ರಶ್ನಿಸಿದ್ದೇನೆ. ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಸಚಿವರು ಇದು ಮುಗಿದು ಹೋದ ಅಧ್ಯಾಯವಾಗಿದ್ದು, ಜಿಲ್ಲಾಧಿಕಾರಿಗಳು ಅದಕ್ಕೆ ಉತ್ತರ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜನಾಕ್ರೋಶ ಎನ್ನುವುದು ಸುಳ್ಳು. ಸರಕಾರದ ಸಂಬಳ ಪಡೆದು ಕರ್ತವ್ಯ ಮಾಡಿದ್ದೇನೆ, ಜನರ ಕೆಲಸ ಮಾಡುತ್ತೇನೆ. ಸರಕಾರದ ಸಂಬಳ ಪಡೆಯುವವರು ಸಹ ಜನರ ಕೆಲಸ ಮಾಡಬೇಕು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಈ ಸಂದರ್ಭದಲ್ಲಿ ಯಲಬುಗರ್ಾ ಶಾಸಕ ಹಾಲಪ್ಪ ಆಚಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಚ್.ವಿಶ್ವನಾಥರಡ್ಡಿ, ಬಿಜೆಪಿ ಮುಖಂಡ ಅಮರೇಶ ಕರಡಿ, ನಗರ ಪ್ರಾಧಿಕಾರ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಹಳ್ಳಿ, ಸದಸ್ಯರಾದ ಬಸವರಾಜ್ ಭೋವಿ, ನಾಗಭೂಷಣ್ ಸಾಲಿವ್ಮಠ, ತಾ.ಪಂ.ಸದಸ್ಯ ಚಂದ್ರಕಾಂತ ನಾಯಕ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.