ಇಂದು ಧರ್ಮಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಡಾ.ಕಾಡಯ್ಯಾ ಹಿರೇಮಠಗೆ ಅಭಿನಂದನಾ ಕಾರ್ಯಕ್ರಮ
ರಾಯಬಾಗ 10: ರಾಷ್ಟ್ರಮಟ್ಟದ ಗೌರವ ಡಾಕ್ಟರೇಟ್ ಪ್ರಶಸ್ತಿ ಹಾಗೂ ನವದೆಹಲಿಯಲ್ಲಿ ಧರ್ಮಸೇವಾ ರತ್ನ ಪ್ರಶಸ್ತಿ ಪಡೆದ ಡಾ.ಕಾಡಯ್ಯಾ ಶಿವಮೂರ್ತಿ ಹಿರೇಮಠ ಅವರಿಗೆ ಶನಿವಾರ ದಿ.11 ರಂದು ಸಂಜೆ 3 ಗಂಟೆಗೆ ಅಭಿನಂದನಾ ಕಾರ್ಯಕ್ರಮವನ್ನು ಮಹಾಲಿಂಗೇಶ್ವರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ರವೀಂದ್ರ ಚೌಗುಲೆ ಹೇಳಿದರು.
ತಾಲೂಕಿನ ದಿಗ್ಗೇವಾಡಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ಬಬಲಾದಿಯ ಮೂಲ ಸಂಸ್ಥಾನಮಠದ ಸಿದ್ಧರಾಮಯ್ಯ ಅಜ್ಜನವರು ಸಾನಿಧ್ಯವಹಿಸುವರು. ಮಹಾಲಿಂಗೇಶ್ವರ ಮಠದ ನೂತನ ಮಹಾಲಿಂಗೇಶ್ವರ ಸ್ವಾಮೀಜಿಗಳು, ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ, ಯುವಕೇಸರಿ ಶಿವರಾಜ ಪಾಟೀಲ ಸೇರಿದಂತೆ ಅನೇಕ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಹಳೆ ದಿಗ್ಗೇವಾಡಿ ಗ್ರಾಮದಲ್ಲಿ ಬಬಲಾಧಿಯ ಮೂಲ ಸಂಸ್ಥಾನಮಠದ ಸಿದ್ಧರಾಮಯ್ಯ ಅಜ್ಜನವರ ಮೆರವಣಿಗೆ ಆರಂಭಿಸಿ ದಿಗ್ಗೇವಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ನಂತರ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡ ನಂತರ ಸಂಜೆ ರಸಮಂಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲ ಭಕ್ತಾಧಿಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು.