ಸಂಗೊಳ್ಳಿ ರಾಯಣ್ಣ ಸಂಸ್ಥೆ ಸಹಕಾರಿ ಬ್ಯಾಂಕಿನ ಹೆಸರಿನಲ್ಲಿ ಠೇವಣಿದಾರರಿಗೆ ಕೋಟ್ಯಂತರ ವಂಚನೆ ಮಾಡಿದೆ

ಬೆಳಗಾವಿ : ಸಹಕಾರಿ ಬ್ಯಾಂಕಿನ ಹೆಸರಿನಲ್ಲಿ ಠೇವಣಿದಾರರಿಗೆ ಕೋಟ್ಯಂತರ ವಂಚನೆ ಮಾಡಿದ ಆನಂದ ಅಪ್ಪುಗೋಳ ಒಡೆತನದ ಮೂರು ಸಹಕಾರಿ ಸೊಸೈಟಿಗಳ ವ್ಯವಸ್ಥಾಪಕರು ಬೀದಿಗಿಳಿದು ಈ ಸಂಸ್ಥೆಗಳಿಗೆ ತಕ್ಷಣ ಸಹಕಾರ ಇಲಾಖೆಯಿಂದ ಬರಖಾಸ್ತುದಾರರನ್ನು ನೇಮಿಸಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸಹಕಾರಿ ಸಚಿವ ಅವರಿಗೆ ಮನವಿ ಸಲ್ಲಿಸಿದರು.

ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ ಆಪರೇಟಿವ್ ಕ್ರಿಡಿಟ್ ಸೊಸೈಟಿ ಲಿಮಿಟೆಡ್, ಭೀಮಾಂಬಿಕ ಮಹಿಳಾ ವಿವಿಧೋದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತ ಹಾಗೂ ಗುರುರಾಜ ಸೌಹಾರ್ಧ ಸಹಕಾರಿ ನಿಯಮಿತ ಈ ಸಂಸ್ಥೆಗಳ ಶಾಖಾ ವ್ಯವಸ್ಥಾಪಕರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಈಗಾಗಲೇ ಸಂಗೊಳ್ಳಿ ರಾಯಣ್ಣ ಸಂಸ್ಥೆಯ ವಂಚನೆ ಪ್ರಕರಣ ನಡೆದು ವರ್ಷಗಳು ಕಳೆದ ನಂತರ ಇದೀಗ ವ್ಯವಸ್ಥಾಪಕರು ಬೀದಿಗೆ ಇಳಿದು ಠೇವಣಿದಾರರ ಠೇವಣಿ ವಾಪಸ್ ಮಾಡಬೇಕೆಂದು ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಗೆ ಮನವಿ ಮಾಡುತ್ತಿರುವುದು ಠೇವಣಿದಾರರಲ್ಲಿ ಅನೇಕ ಗೊಂದಲಗಳಿಗೂ ಕಾರಣವಾಗಿದೆ. 

2000 ಜ.30ರಂದು ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋ. ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಸಂಸ್ಥೆ ಸ್ಥಾಪನೆಯಾಗಿತ್ತು. ಇದರ ಸಂಸ್ಥಾಪಕ, ಅಧ್ಯಕ್ಷ ಆನಂದ ಅಪ್ಪುಗೋಳ ಆಗಿದ್ದರು. ಈ ಸಂಸ್ಥೆಯು ಜನರ ವಿಶ್ವಾಸದಿಂದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ 35 ಶಾಖೆಗಳನ್ನು ವಿಸ್ತರಿಸಿಕೊಂಡಿತು. ಇನ್ನು ಭೀಮಾಂಬಿಕಾ ಮಹಿಳಾ ವಿವಿಧೋದ್ದೇಶಗಳ ಸೌಹಾರ್ಧ ಸಹಕಾರಿ ನಿಯಮಿತದ 14 ಶಾಖೆಗಳು ಮತ್ತು ಗಜರಾಜ ಸೌಹಾರ್ಧ ಸಹಕಾರಿ ನಿಯಮಿತದ 2 ಶಾಖೆಗಳು ಕೂಡ ಇದೇ ಸಂಸ್ಥೆಯೊಂದಿಗೆ ಸಂಲಗ್ನವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ ಎಂದು ಪ್ರತಿಭಟನಾಕಾರರು ಹೇಳಿಕೊಂಡಿದ್ದಾರೆ. 

ಈ ಎಲಾ ಶಾಖೆಗಳಲ್ಲಿ ನುರಿತ ಮತ್ತು ಅನುಭವಿ ನೌಕರರನ್ನು, ವಿವಿಧ ಇಲಾಖೆ ಬ್ಯಾಂಕ್ ಮತ್ತು ಅರೆ ಸಕರ್ಾರಿ ಸಂಸ್ಥೆಗಳಲ್ಲಿ ಅನುಭವ ಹೊಂದಿದ ಸಿಬ್ಬಂದಿಯನ್ನು ಶಾಖಾ ವ್ಯವಸ್ಥಾಪಕರೆಂದು ನೇಮಿಸಿ ಪ್ರತಿಯೊಬ್ಬ ಶಾಖಾಧಿಕಾರಿಗೂ ಮಾಸಿಕ ವೇತನ ನೀಡಲಾಗುತ್ತಿತ್ತು. ಆದರೆ ಪ್ರತಿದಿನ ಸಂಜೆ 6ರ ವೇಳೆಗೆ ಆಯಾ ಶಾಖೆಗಳಲ್ಲಿ ಶೇಖರಿಸಲ್ಪಟ್ಟಿದ್ದ ಠೇವಣಿ ಮೊತ್ತವನ್ನು ಮುಖ್ಯ ಕಚೇರಿಗೆ ಜಮಾ ಮಾಡಿ ಅಲ್ಲಿಂದ ರಸೀತಿ ಪಡೆದುಕೊಳ್ಳಬೇಕಾಗಿತ್ತು. ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧ್ಯಕ್ಷರು ಮತ್ತು ಕಾರ್ಯದಶರ್ಿಗಳು ಈ ಮೊತ್ತದ ರಸೀದಿಗೆ ಸಹಿ ಹಾಕಿ ಕೊಡುತ್ತಿದ್ದರು. ಇಷ್ಟಕ್ಕೆ ಶಾಖಾಧಿಕಾರಿಗಳ ಜವಾಬ್ದಾರಿ ಮುಗಿಯುತ್ತಿತ್ತು. ಆದರೆ ಇದೀಗ ಸಂಸ್ಥೆಯಲ್ಲಿ ಜಮಾ ಆದ ಹಣವನನು ಸ್ಥಾಪಕಾಧ್ಯಕ್ಷರು ಮತ್ತು ಆಡಳಿತ ಮಂಡಳಿಯವರು ದುರುಪಯೋಗ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಠೇವಣಿದಾರರಿಗೆ ಠೇವಣಿ ಹಿಂದುರಿಗಿಸಿ ಕೊಡದೆ ಭಾರೀ ವಂಚನೆ ಮಾಡಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ, ಆನಂದ ಅಪ್ಪುಗೋಳರನ್ನು ಬಂಧಿಸಿದ್ದೂ ಆಗಿದೆ. ಆದರೆ ಠೇವಣದಾರರಿಗೆ ಈ ತನಕ ಹಣ ಬಂದಿಲ್ಲ. ಈ ನಿಟ್ಟಿನಲ್ಲಿ ಸಕರ್ಾರ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. 

ಈ ವಂಚನೆ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪ್ರತೀ ವರ್ಷ ಲೆಕ್ಕ ಪರಿಶೋಧನೆ ಮಾಡುತ್ತಿದ್ದ ಸಹಕಾರಿ ಲೆಕ್ಕಪರಿಶೋಧನಾ ಇಲಾಖೆಗೆ ಈ ವಿಚಾರ ಯಾಕೆ ತಿಳಿಯಲಿಲ್ಲ. ಬ್ಯಾಂಕ್ ವಂಚನೆಯ ನಂತರ ಎಲ್ಲಾ ಶಾಖೆಗಳಿಗೆ ಬೀಗ ಜಡೆದಿರುವುದರಿಂದ ಆಕಸ್ಮಕವಾಗಿ ನಾವು ಕೆಲಸ ಕಳೆದುಕೊಳ್ಳುವಂತಾಗಿದೆ. ನಮಗೆ ಕೆಲಸವಿಲ್ಲದೆ, ಸಂಬಳವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ. ತಕ್ಷಣ ಸಕರ್ಾರ ಬ್ಯಾಂಕ್ಗೆ ಬರಖಾಸ್ತುದಾರರನ್ನು ನೇಮಕ ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.