ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಬಯ್ಯಾರೆಡ್ಡಿ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಸಂತಾಪ

Condolences from various organizations on the death of the state president of the Karnataka Provinc

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಬಯ್ಯಾರೆಡ್ಡಿ ನಿಧನಕ್ಕೆ ವಿವಿಧ ಸಂಘಟನೆಗಳಿಂದ ಸಂತಾಪ

ಹಾವೇರಿ 05: ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸವಾದಿ)ಯ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರು, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾಗಿದ್ದ ಕಾಮ್ರೇಡ್ ಜಿ.ಸಿ.ಬಯ್ಯಾರೆಡ್ಡಿ ಯವರ ನಿಧನಕ್ಕೆ ಎಸ್‌ಎಫ್‌ಐ -ಡಿವೈಎಫ್‌ಐ ಜಿಲ್ಲಾ ಸಮಿತಿಗಳು ಹಾಗೂ ಸಿಪಿಐ(ಎಂ) ಹಾವೇರಿ ಸ್ಥಳೀಯ ಸಮಿತಿಗಳು ತೀವ್ರ ಶೋಕವನ್ನು ವ್ಯಕ್ತಪಡಿಸಿವೆ ಎಂದು ಮುಖಂಡರಾದ ಅಂದಾನೆಪ್ಪ ಹೆಬಸೂರು ಹೇಳಿದರು. 

ಜಂಟಿ ಪತ್ರಿಕಾ ಹೇಳಿಕೆ ನೀಡಿದ ಅವರು ಕಳೆದ ಒಂದು ವಾರದಿಂದ ಶ್ವಾಸಕೋಶದ ಸೋಂಕಿನಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಇಂದು 2025 ಜನವರಿ 4 ರಂದು ಜಯನಗರದ ಅಪಲೋ ಆಸ್ಪತ್ರೆಯಲ್ಲಿ ಬೆಳಗಿನ ಜಾವ 2.30 ರ ಸುಮಾರಿಗೆ ಬಹು ಅಂಗಾಗಗಳ ವೈಫಲ್ಯದಿಂದ ನಿಧನರಾದರು. 

64 ವಯಸ್ಸಿನ ಅವರುಪತ್ನಿ, ಪುತ್ರಿ ಹಾಗೂ ಅಪಾರ ಬಂಧು,ಮಿತ್ರರನ್ನು ಹೋರಾಟದ ಒಡನಾಡಿಗಳನ್ನು ಅಗಲಿದ್ದಾರೆ. ಅವಿಭಜಿತ ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗಡಿಗವಾರಪಲ್ಲಿ ಗ್ರಾಮದಲ್ಲಿ ಜನಿಸಿದ ಬಯ್ಯಾರೆಡ್ಡಿ ಅವರ ತಂದೆ ದಕ್ಷಿಣ ಕರ್ನಾಟಕದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದಿವಂಗತ ಚೌಡಪ್ಪ ಮತ್ತುತಾಯಿ ಬಯ್ಯಮ್ಮ ಅವರ ನಾಲ್ಕನೆಯ ಪುತ್ರರು. 1980ರ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಗೆ ಸೇರಿದಅವರು ವಿದ್ಯಾರ್ಥಿ ಚಳುವಳಿಯ ಮೂಲಕ ಹಂತ ಹಂತವಾಗಿ ಬೆಳೆದವರು. ನರಗುಂದ-ನವಲಗುಂದ ಪ್ರದೇಶದಲ್ಲಿ ಆರಂಭಗೊಂಡ ರೈತರ ಬಂಡಾಯ ಸಂದರ್ಭದಲ್ಲಿ ಹೋರಾಟ ನಿರಂತರ ರೈತರಿಗೆ ಬೆಂಬಲ ನೀಡಿ ವಿದ್ಯಾರ್ಥಿಗಳ ಸಮರಶೀಲ ಹೋರಾಟವನ್ನು ಸಂಘಟಿಸಿದರು.ಆ ಸಂದರ್ಭದಲ್ಲಿ ನಡೆದ ಪೊಲೀಸ್ ಗೋಲೀಬಾರ್‌ನಲ್ಲಿ ಹಲವರು ಹುತಾತ್ಮರಾಗಿದ್ದರು.ಸಮಾಜದಲ್ಲಿ ಶಾಂತಿ, ನಾಡಿನ ಸೌಹಾರ್ದ ಪರಂಪರೆಯ ರಕ್ಷಣೆಗಾಗಿ, ಒಟ್ಟಾರೆ, ದುಡಿಯುವ ಜನರ ಚಳುವಳಿ ಕಟ್ಟುವಲ್ಲಿ, ರಾಜ್ಯದಲ್ಲಿ ದುಡಿಯುವ ವರ್ಗದ ಪರ್ಯಾಯ ರಾಜಕೀಯವನ್ನು ಕಟ್ಟುವಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಅವರ ಕೊಡುಗೆಗಳನ್ನು ಸಿಪಿಐ(ಎಂ) ಸ್ಮರಿಸುತ್ತದೆ. ಅವರ ಅಕಾಲಿಕ ಅಗಲಿಕೆ ನಾಡಿನ ಶ್ರಮಜೀವಿಗಳ ಮತ್ತು ಪ್ರಜಾಸತ್ತಾತ್ಮಕ ಪ್ರಗತಿಪರಜನ ಚಳುವಳಿಗೆ ಅಪಾರವಾದ ನಷ್ಟವನ್ನು ಉಂಟು ಮಾಡಿದೆ ಎಂದು ಅಭಿಪ್ರಾಯಸುತ್ತದೆ ಮತ್ತು ಸಮಾನತೆಯ ಸಮ ಸಮಾಜವನ್ನು ಕಟ್ಟುವ ಅನ್ಯಾಯ ಅಸಮಾನತೆಗಳ ಎದುರಿನಲ್ಲಿ ಹೋರಾಡುವ ಅವರ ಆಶಯಗಳನ್ನ ಸಾಧಿಸುವುದು ಅವರ ಕೊಡುಗೆಗಳನ್ನು ಸ್ಮರಿಸುತ್ತಾ ಭಾವನಾತ್ಮಕ ಶ್ರದ್ಧಾಂಜಲಿಯನ್ನು ಎಸ್‌ಎಫ್‌ಐ-ಡಿವೈಎಫ್‌ಐ ಹಾಗೂ ಸಿಪಿಐ(ಎಂ) ಸಲ್ಲಿಸುತ್ತವೆ. ದುಃಖತಪ್ತರಾದ ಅವರ ಕುಟುಂಬಕ್ಕೆ ಬಂಧು ಬಳಗಕ್ಕೆ ಹಾಗೂ ಎಲ್ಲ ಸಂಗಾತಿಗಳಿಗೂ ತೀವ್ರ ಸಂತಾಪವನ್ನು ಸೂಚಿಸುತ್ತವೆ ಎಂದರು. ಜಂಟಿಯಾಗಿ ಬಸವರಾಜ ಪೂಜಾರ ಹಾಗೂ ಬಸವರಾಜ ಎಸ್ ತಿಳಿಸಿದ್ದಾರೆ.