ಒಗ್ಗಟ್ಟು ಸಮಾಜದ ಅಭಿವೃದ್ಧಿಗೆ ಪೂರಕ:ಸಿದ್ದಲಿಂಗ ಶ್ರೀ
ತಾಳಿಕೋಟಿ 25: ಯಾವುದೇ ಒಂದು ಸಮಾಜದ ಏಳಿಗೆ ಆಗಬೇಕಾದರೆ ಆ ಸಮಾಜದ ಜನರ ಮಧ್ಯೆ ಒಗ್ಗಟ್ಟು ಇರಬೇಕಾದದ್ದು ಅಗತ್ಯ,ಸಜ್ಜನ ಸಮಾಜದ ಬಾಂಧವರು ಅನುಭಾವಿ ಹಾಗೂ ಅನುಭವಿಗಳಾಗಿದ್ದಾರೆ.ಎಲ್ಲ ಸಮಾಜದವರೊಂದಿಗೆ ಬೆರೆತು ಬಾಳುವ ಗುಣದಿಂದಾಗಿಯೇ ಅವರಿಗೆ ಇಂತಹ ಕಾರ್ಯಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಖಾಸ್ಗತೇಶ್ವರ ಮಠದ ಸಿದ್ದಲಿಂಗ ದೇವರು ಹೇಳಿದರು.
ಬುಧವಾರ ಪಟ್ಟಣದ ಹುಣಸಗಿ ರಸ್ತೆ ಪಕ್ಕದ ಸಂಗಮ ಲಾಡ್ಜ್ ಹತ್ತಿರ ನಿರ್ಮಾಣಗೊಳ್ಳಲಿರುವ ಸಜ್ಜನ ಸಮಾಜದ ಗಾಣಸಿರಿ ಸರ್ಕಲ್ ಗೆ ಭೂಮಿ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು. ಇಂದು ಭೂಮಿ ಪೂಜೆ ನೆರವೇರಿಸಿದ ಈ ಸರ್ಕಲ್ ಒಂದು ಸುಂದರ ಹಾಗೂ ಭವ್ಯವಾದ ಸರ್ಕಲ್ ಆಗಿ ನಿರ್ಮಾಣವಾಗಿ ಈ ಸಮಾಜದ ಪರಂಪರೆಯನ್ನು ಮುಂದಿನ ಪೀಳಿಗೆ ತಿಳಿಯುವಂತಾಗಬೇಕು ಎಂದು ಹೇಳಿ ಮಠದ ಆಶೀರ್ವಾದ ಈ ಸಮಾಜದೊಂದಿಗೆ ಸದಾ ಇರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷ ಪ್ರಕಾಶ ಸಜ್ಜನ,ಉಪಾಧ್ಯಕ್ಷ ತಿಪ್ಪಣ್ಣ ಸಜ್ಜನ, ಪುರಸಭೆ ಸದಸ್ಯರಾದ ಮುತ್ತಪ್ಪ ಚಮಲಾಪೂರ,ಪರಶುರಾಮ ತಂಗಡಗಿ,ಜೈಸಿಂಗ್ ಮೂಲಿಮನಿ,ಅರ್ಬನ್ ಬ್ಯಾಂಕ್ ನಿರ್ದೇಶಕ ಎಂ.ಎಸ್.ಸರಸಟ್ಟಿ, ಪ್ರಕಾಶ ಹಜೇರಿ,ವಿಜಯಸಿಂಗ್ ಹಜೇರಿ,ಹುಸೇನ ಜಮಾದಾರ,ಜಿ.ಜಿ.ಮದರಕಲ್ಲ, ಸಂಗಮೇಶ ಶರಣರ,ಇಬ್ರಾಹಿಂ ಮನ್ಸೂರ,ಮಾನಸಿಂಗ್ ಕೊಕಟನೂರ,ಮಹಾಂತೇಶ ಮುರಾಳ,ಮಂಜೂರ ಬೇಪಾರಿ, ರಾಜು ಸಜ್ಜನ,ಭರತ್ ವಿಜಾಪುರ,ಹನುಮಂತ್ರಾಯಗೌಡ ಬಾಗೇವಾಡಿ,ರವಿಕಾಂತ ಚಂದುಕರ, ಸೌರಭ ವಿಜಾಪುರ,ರತನಸಿಂಗ್ ಕೊಕಟನೂರ,ಅಶೋಕ ಸಜ್ಜನ,ಕಾಶಿನಾಥ ಸಜ್ಜನ,ಶರಣಪ್ಪ ಸಜ್ಜನ,ಡಾ.ನಾಗರಾಜ ಸಜ್ಜನ,ಪರ್ಪ ಸಜ್ಜನ,ವಿ.ಬಿ.ಕೋರವಾರ ಮತ್ತಿತರರು ಇದ್ದರು.