ಮಕ್ಕಳ ಶೈಕ್ಷಣಿಕ ಮನೋ ವಿಕಾಸತೆಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಅಗತ್ಯ- ಶ್ಯಾಮಸುಂದರ

Competitive programs are necessary for the educational and psychological development of children -

ಮಕ್ಕಳ ಶೈಕ್ಷಣಿಕ ಮನೋ ವಿಕಾಸತೆಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳು ಅಗತ್ಯ- ಶ್ಯಾಮಸುಂದರ  

 ರಾಣೇಬೆನ್ನೂರು  27:   ಇಂದಿನ ಮಕ್ಕಳಲ್ಲಿ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಚಟುವಟಿಕೆಗಳು ತುಂಬಾ ಅಗತ್ಯವಿದೆ. ಆಂತರಿಕ ಪ್ರತಿಭೆ ಹೊರಹಮ್ಮಿಸಲು ಇಂತಹ ಸಾಮೂದಾಯಿಕ ಕಾರ್ಯಕ್ರಮಗಳು ಇಂದಿನ ಅಗತ್ಯವಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ಯಾಮ ಸುಂದರ ಅಡಿಗ ಹೇಳಿದರು.  

 ಅವರು, ಗುರುವಾರ ಇಲ್ಲಿನ ಸರ್ಕಾರಿ ನೌಕರರ ಸಭಾಭವನದಲ್ಲಿ  ಕರ್ನಾಟಕ ರಾಜ್ಯ ನೌಕರರ ಸಂಘದ ತಾಲೂಕಾ ಘಟಕ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯವು ಆಯೋಜಿಸಿದ್ದ ತಾಲೂಕಾ ಮಟ್ಟದ, ಸ್ಪರ್ಧಾತ್ಮಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

      ಇಂದಿನ ಮಕ್ಕಳಲ್ಲಿ ಅಧಿಕ ಪ್ರಮಾಣದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ಅನೇಕ ರೀತಿಯ ವೈಚಾರಿಕ ಗುಣಗಳಿವೆ ಅವರಲ್ಲಿರುವ ಪ್ರತಿಭೆಗೆ ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಮೇಲಿಂದ ಮೇಲೆ ನಡೆಯಬೇಕಾದ ಅಗತ್ಯವಿದೆ ಎಂದರು.  

 ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ನೌಕರರ ಸಂಘದ ತಾಲೂಕ ಅಧ್ಯಕ್ಷ ಮಂಜುನಾಥ ಕೆಂಚರೆಡ್ಡಿ ಅವರು, ಸಮಾಜದಲ್ಲಿ ವೈವಿಧ್ಯಮಯ ಪ್ರತಿಭೆಗಳಿವೆ. ಅವರಲ್ಲಿರುವ  ವಿಷಯಗಳನ್ನು ಹೆಕ್ಕಿ ತೆಗೆಯುವ ಕೆಲಸ ಶಿಕ್ಷಕರಿಂದಾಗಬೇಕಾಗಿದೆ ಎಂದರು.  

       ತಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕಾರ ಪರಂಪರೆಯಲ್ಲಿ, ಸಾರ್ವಜನಿಕ ಸೇವೆ  ಮಾಡುವ ಅವಕಾಶ ತಮಗೆ ದೊರಕಿದೆ. ಜೊತೆಗೆ ಬಂಧುಗಳ ಸ್ನೇಹಿತರ, ಎನ್‌ಜಿಓ ಸದಸ್ಯರ ಪ್ರಾಂಜಲ ಮನಸ್ಸಿನ ಸಹಾಯ ಸಹಕಾರವು ತಮಗಿರುವುದರಿಂದ ಇಂತಹ ಕಾರ್ಯಕ್ರಮಗಳು ನಡೆಸಲು ತುಂಬಾ ಸಹಕಾರಿಯಾಗಿದೆ. ಪ್ರತಿಭೆಗಳಿಗೆ ಪ್ರೋತ್ಸಾಹಿಸಲು ಇದರಿಂದ ತಮಗೆ  ಸಾಧ್ಯವಾಗುತ್ತದೆ ಎಂದರು.  

      ಭವಿಷ್ಯದ ದಿನಗಳಲ್ಲಿ ವರ್ಷದಲ್ಲಿ ಎರಡು ಕಾರ್ಯಕ್ರಮಗಳು ಹಾಕಿಕೊಂಡಿದ್ದೇವೆ. ಹಂತ ಹಂತವಾಗಿ ಸಮಗ್ರ ವಿದ್ಯಾರ್ಥಿ ಸಮುದಾಯಕ್ಕೆ ಅಗತ್ಯವಿರುವ ಬೇರೆ ಬೇರೆ ರೀತಿಯ  ಕಾರ್ಯಕ್ರಮಗಳು  ರೂಪಿಸುವ ಉದ್ದೇಶ ತಮ್ಮದಾಗಿದೆ ಅದಕ್ಕೆ ಎಲ್ಲರ ಸಹಾಯ,ಸಹಕಾರ ಅಗತ್ಯವಿದೆ ಎಂದರು.  

       ತಾಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಗಳ 5ನೇ ತರಗತಿಯ 176 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅದರಲ್ಲಿ ಉರ್ದು ಶಾಲೆಯ 3 ಹಾಗೂ ಕನ್ನಡ ಶಾಲೆಯ 23 ವಿದ್ಯಾರ್ಥಿಗಳು, ತಮ್ಮ ಪ್ರಬುದ್ಧತೆಯ ಅಂಕಗಳು ಪಡೆದು ಪ್ರತಿಭೆ ಮೆರೆಯಲು ಸಾಕ್ಷಿಯಾಗಿದ್ದಾರೆ ಎಂದರು.  

     ಪ್ರಾಯೋಜಕರಾದ ಹನುಮನಮಟ್ಟಿ  ಕೃಷಿ ವಿಶ್ವ ವಿದ್ಯಾಲಯದ ಡಾ, ಕಾವೇರಿ  ಮಂಜುನಾಥ ಕೆಂಚರೆಡ್ಡಿ ಅವರು, ಶೈಕ್ಷಣಿಕ ಪ್ರಗತಿಗೆ ಪ್ರತಿಯೊಬ್ಬರ ಸಹಾಯ ಸಹಕಾರ ಅಗತ್ಯ. ಪ್ರತಿಭೆ ಪ್ರೋತ್ಸಾಹಿಸಬೇಕಾದರೆ ಸ್ಪರ್ಧೆಗಳು ಅಗತ್ಯ ಮತ್ತು ಅವಶ್ಯ. ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ ಎಲ್ಲರಲ್ಲೂ ಇದ್ದೇ ಇರುತ್ತದೆ. ಸೋಲು ಗೆಲುವು ಸಹಜ. ಇದಕ್ಕೆ ಸಂಘ, ಸಂಸ್ಥೆಗಳ, ಗುರುಗಳ ಮಾರ್ಗದರ್ಶನ ಅಗತ್ಯವಿದೆ ಎಂದರು.