ನಗರಸಭೆ ಕ್ರೀಡಾಂಗಣ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ: ಪ್ರಕಾಶ ಕೋಳಿವಾಡ

Committed to comprehensive development of Municipal Stadium: Prakash Koliwada

ನಗರಸಭೆ ಕ್ರೀಡಾಂಗಣ ಸಮಗ್ರ ಅಭಿವೃದ್ಧಿಗೆ ಬದ್ಧನಾಗಿದ್ದೇನೆ: ಪ್ರಕಾಶ ಕೋಳಿವಾಡ  

 ರಾಣೇಬೆನ್ನೂರು 16: ವಾಣಿಜ್ಯ  ನಗರ ರಾಣಿಬೆನ್ನೂರಿಗೆ ಕಳಸಪ್ರಾಯವಾಗಿರುವ, ನಗರಸಭೆ ಕ್ರೀಡಾಂಗಣವು ಸಂಪೂರ್ಣ ಅಭಿವೃದ್ಧಿಯಾಗಬೇಕಾದ ಅಗತ್ಯವಿದ್ದು, ಅದಕ್ಕಾಗಿ ತಾವು ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಪ್ರಕಾಶ್ ಕೋಳಿವಾಡ ಹೇಳಿದರು.   ಅವರು, ಸೋಮವಾರ ಬೆಳ್ಳಂ ಬೆಳಗ್ಗೆ, ಕ್ರೀಡಾಂಗಣಕ್ಕೆ ಭೇಟಿ ನೀಡಿ, ನಗರದ ನೂರಾರು ಕ್ರೀಡಾಪಟುಗಳ ಮನವಿಯನ್ನು ಆಲಿಸಿ  ಮಾತನಾಡಿದರು.  

           ಖಾಸಗಿ ಕಾರ್ಯಕ್ರಮಗಳಿಗೆ, ಕ್ರೀಡಾಂಗಣ ಕೊಡಲೇಬೇಕಾಗುತ್ತದೆ. ಆದರೆ ಇಲ್ಲಿ ನಿತ್ಯವೂ ನಡೆಯುವ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು, ಪೌರಾಯುಕ್ತರಿಗೆ  ಸೂಚಿಸಿದ್ದೇನೆ ಎಂದರು.  

      ಕ್ರೀಡಾಪಟುಗಳು ಕ್ರೀಡಾಂಗಣದ ಅಭಿವೃದ್ಧಿಗಾಗಿ ಮೂಲಭೂತ ಸೌಲಭ್ಯ ಕಲ್ಪಿಸಲು ಕೋರಿದ್ದಾರೆ. ಅದು ಅಭಿವೃದ್ಧಿಪಡಿಸುವ ಕರ್ತವ್ಯ ನನ್ನದಾಗಿದೆ. ಸಾಕಷ್ಟು ಹಣ ಸರ್ಕಾರದಲ್ಲಿ ಅದಕ್ಕಾಗಿ ಮೀಸಲಾಗಿ ಇಟ್ಟಿದ್ದೇವೆ. ಹಣವನ್ನು ಶೀಘ್ರದಲ್ಲಿಯೇ  ಬಿಡುಗಡೆಗೊಳಿಸಿ, ಪರಿಪೂರ್ಣ ಅಭಿವೃದ್ಧಿ ಮಾಡಲು ಮುಂದಾಗುತ್ತೇನೆ ಎಂದು ಕ್ರೀಡಾಪಟುಗಳಿಗೆ ಭರವಸೆ ನೀಡಿದರು.  

      ಪೌರಾಯುಕ್ತ ಫಕೀರ​‍್ಪ ಇಂಗಳಗಿ,ಮಾತನಾಡಿ, ಈಗಾಗಲೇ ಪೂರ್ಣ ಅಭಿವೃದ್ಧಿಗಾಗಿ ಕ್ರಿಯಾಯೋಜನೆ ಸಿದ್ಧವಾಗಿದೆ. ವಾಹನಗಳು ಇಲ್ಲಿ ನಿಲ್ಲುವುದರಿಂದ. ಮತ್ತು ಬೇರೆ ಬೇರೆ ಕಾರ್ಯಕ್ರಮಗಳು ಇರುವುದರಿಂದ ತೆಗ್ಗುಗಳು ಕಾಣುತ್ತಿವೆ. ಅನೈತಿಕ ಚಟುವಟಿಕೆಗಳು ತಡೆಯಲು, ನಾಳೆಯಿಂದಲೇ ಸಿಬ್ಬಂದಿ ನೇಮಿಸಿ ತಹಬದಿಗೆ ತರಲಾಗುವುದು ಎಂದರು.  

 ಈ ಸಂದರ್ಭದಲ್ಲಿ ಇರ್ಫಾನ್ ದಿಡಗೂರು, ಶಶಿಧರ್ ಬಸೇನಾಯ್ಕಕರ, ಮೃತ್ಯುಂಜಯ ಗುದಿಗೇರ,    

 ಬಸವರಾಜ ಹುಚ್ಚಗೊಂಡರ,  ಎಂ.ಎನ್‌. ಕೆಂಪಗೌಡ್ರು, ಕುಸ್ತಿಪಟು ಕಾರ್ತಿಕ್ ಕಾಟಿ,ಗಂಗಾಧರ ಮೇದಾರ್, ದೇವರಾಜ ಮೇದಾರ್, ಪ್ರಕಾಶ್ ಮೈಲಾರ,  ಕಿರಣ್, ರಾಜು ಅಂಬ್ಲಿ, ನಾಗರಾಜ್ ಮೇದಾರ,  ಆನಂದ ಹುಲಬನ್ನಿ, ಸೇರಿದಂತೆ ನಗರಸಭಾ ಸದಸ್ಯರು,ಸಿಬ್ಬಂದಿ, ಕ್ರೀಡಾಪಟುಗಳು ಸೇರಿ ನೂರಾರು ಕ್ರೀಡಾಪಟುಗಳು  ಉಪಸ್ಥಿತರಿದ್ದರು.