ಕಾಮರ್ಿಕ ಅಧಿಕಾರಿಗಳು ತಾಯಿಯಂತೆ ಕೆಲಸ ಮಾಡಿ: ನ್ಯಾ. ಒಡೆಯರ

ಲೋಕದರ್ಶನ ವರದಿ

ಲಕ್ಷ್ಮೇಶ್ವರ 21: ಕಾಮರ್ಿಕ ಅಧಿಕಾರಿಗಳು ತಾಯಿಯಂತೆ ಕೆಲಸ ಮಾಡಲಿ ಎಂದು ಲಕ್ಷ್ಮೇಶ್ವರ ದೀವಾಣಿ ನ್ಯಾಯಾಧೀಶರಾದ ಎಂ ಆರ್ ಒಡೆಯರ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಕಾಮರ್ಿಕರು ಅಶಿಕ್ಷಿತರು, ಅಮಾಯಕರು ಇದ್ದು ಅವರಿಗೆ ದೊರಕುವಂತಹ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಾಮರ್ಿಕರಿಗೆ ಮಾಸ್ಕ ,ಸ್ಯಾನಿಟೈಜರ್,ಸಾಬೂನು ಇರುವ ಕೋವಿಡ್ 19 ಸುರಕ್ಷಾ ಕಿಟ್  ವಿತರಣೆ ಗದಗ ಜಿಲ್ಲಾ ಕಾಮರ್ಿಕರ ಅಧಿಕಾರಿ ಸುಧಾ ಗರಗ, ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿ ಎಸ್ ಜಿ ಸಲಗರೆ, ಲಕ್ಷ್ಮೇಶ್ವರ ತಾಲ್ಲೂಕು ಕಟ್ಟಡ ಕಾಮರ್ಿಕರ ಸಂಘದ ಅಧ್ಯಕ್ಷರಾದ ದುರಗಪ್ಪ ಬಿಂಜಡಗಿ ಅವರು ಮಾತನಾಡಿ ಕಾಮರ್ಿಕರಿಗೆ ನಮ್ಮ ತಾಲೂಕಿನಲ್ಲಿ ಕಾಮರ್ಿಕರಿಗೆ ಸಿಗುವಂತಹ ಹಣ ಖಾತೆಗೆ ಜಮೆ ಅಗದೆ ಇರುವುದರ ಬಗ್ಗೆ  ತಿಳಿಸಿದರು. ಲಕ್ಷ್ಮೇಶ್ವರ ಪುರಸಭೆಯ ಸದಸ್ಯರಾದ ಜಯಕ್ಕ ಕಳ್ಳಿ ಹಾಗೂ ಕಟ್ಟಡ ಅಪಾರ ಪ್ರಮಾಣದ ಕಟ್ಟಡ ಕಾಮರ್ಿಕರು ತಹಶೀಲ್ದಾರರ ಕಚೇರಿ ಆವರಣದಲ್ಲಿ ಸೇರಿ ಸಾಮಾಜಿಕ ಅಂತರ ಕಾಯ್ದುಕೊಂಡರು.