ಶ್ರೀಗಳ ಪುಣ್ಯಸ್ಮರಣೋತ್ಸವ: ವಿಶೇಷ ಪ್ರವಚನ ಕಾರ್ಯಕ್ರಮ
ಯಮಕನಮರಡಿ 03: ಸ್ಥಳೀಯ ಸುಕ್ಷೇತ್ರ ಶೂನ್ಯ ಸಂಪಾದನಾ ಮಠದಲ್ಲಿ ಲಿಂಗೈಕ್ಯ ಜಗದ್ಗುರು ಗುರುಸಿದ್ಧ ಮಹಾಸ್ವಾಮಿಗಳು ಇವರ 31 ಪುಣ್ಯಸ್ಮರಣೋತ್ಸವದ ನಿಮಿತ್ಯವಾಗಿ ವಿಶೇಷ ಪ್ರವಚನ ಕಾರ್ಯಕ್ರಮ ಜರುಗಿತು.
ದಿವ್ಯ ಸಾನಿಧ್ಯವನ್ನು ಶ್ರೀಮಠದ ಉತ್ತರಾಧಿಕಾರಿ ಸಿದ್ದಬಸವ ದೇವರು ವಹಿಸಿ ಸಿದ್ದರಾಮೇಶ್ವರರ ಚರಿತ್ರೆ ಜೀವನ, ಬೋಧನೆ ಹಾಗೂ ಪವಾಡಗಳ ಕುರಿತು ತಿಳಿಸಿ ಆಶಿರ್ವಚನ ನೀಡಿದರು. ಕಾರ್ಯಕ್ರಮಕ್ಕೆ ವಿಶೇಷ ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲಾ ಲಿಂಗಾಯತ ವೇದಿಕೆಯ ಅಧ್ಯಕ್ಷ ಶಂಕರ ಗುಡಸ್ ಅವರು ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ಶ್ರೀಮಠದ ಟ್ರಸ್ಟಿನ ನಿರ್ದೇಶಕ ಅಶೋಕ ಮಲಕಾರ ಹಾಗೂ ಗ್ರಾಮದ ಹಿರಿಯ ಬಾಬು ವಾಘ ಇವರು ಉಪಸ್ಥಿತರಿದ್ದರು.
ಸಂಗೀತಗಾರರು ಹಾಗೂ ತಬಲಾ ವಾದಕರು ಉಪಸ್ಥಿತಿರಿದ್ದು, ಸಂಗೀತದ ರಸದೂತಣ ನೀಡಿದರು. ಎಸ್.ಆರ್. ತಬರಿ ಆಗಮಿಸಿದ ಗಣ್ಯರಿಗೆ ಸ್ವಾಗತ ಕೋರಿ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ ಹುನ್ನರಗಿ ಶಿಕ್ಷಕರು ವಂದನೆ ಸಲ್ಲಿಸಿದರು. ಉಪನ್ಯಾಸಕರು ಶಂಕರ. ಗುಡಸ್, ಗ್ರಾಮದ ಹಿರಿಯರು ಬಾಬು ವಾಘ, ಅಶೋಕ ಮಲಕಾರ, ಸಂಗೀತಗಾರ ಹಾಗೂ ತಬಲಾ ವಾದಕರು ಹಾಜರಿದ್ದು ಸಂಗೀತದ ರಸದೂತಣ ನೀಡಿದರು. ಸಮಸ್ತ ಗ್ರಾಮದ ಶರಣ-ಶರಣೆಯರು ಭಾಗವಹಿಸಿ ಗುರುಸಿದ್ದ ಮಹಾಸ್ವಾಮಿಗಳರವರ ಆಶೀರ್ವಾದಕ್ಕೆ ಪಾತ್ರರಾದರು.