ಘನಮಠೇಶ್ವರ ಮಹಾಶಿಯೋಗಿಗಳ ಪೂಣ್ಯಸ್ಮರಣೋತ್ಸವ, ಸಾವಿತ್ರಿಬಾಯಿ ಫೂಲೆ ಜಯಂತಿ ಆಚರಣೆ
ತಾಳಿಕೋಟಿ 03: ಘನಮಠೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ದಿ. 3ರಂದು ಘನಮಠೇಶ್ವರ ಮಹಾಶಿಯೋಗಿಗಳ 145ನೇ ಪೂಣ್ಯಸ್ಮರಣೋತ್ಸವ ಹಾಗೂ ಸಾವಿತ್ರಿಬಾಯಿ ಫೂಲೆ ಅವರ 194ನೇ ಜಯಂತ್ಯೋತ್ಸವವನ್ನು ಆಚರಣೆ ಮಾಡಲಾಯಿತು.
ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸಜ್ಜನ ಅವರು ಮಾತನಾಡಿ ಶ್ರೀಗಳು ಹಾಕಿಕೊಟ್ಟಂತ ಮಾರ್ಗದರ್ಶನ ಹಾಗೂ ಅವರ ಪ್ರವಚನ ಸಾರಗಳ ಕುರಿತು ಮತ್ತು ಸಾವಿತ್ರಿಬಾಯಿ ಪೂಲೆ ಅವರ ಆದರ್ಶ ಮತ್ತು ಮೌಲ್ಯಗಳು ಇಂದಿನ ಸಮಾಜಕ್ಕೆ ಮತ್ತು ವಿದ್ಯಾಥಿಗಳಿಗೆ ಸ್ಫೂರ್ತಿದಾಯಕವಾಗಿದ್ದು ಅವರ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಸಂಸ್ಥೆಯ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರು ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‌ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಜಿ.ಎನ್.ಪಾಟೀಲ, ಸರ್ವ ಸಿಬ್ಬಂದಿವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ಕಲ್ಮೇಶ ಸರ್ ನಡೆಸಿಕೊಟ್ಟರು.