ಕಾರವಾರ : ಕರಾವಳಿ ಉತ್ಸವ-2018 ಅಂಗವಾಗಿ ನಡೆಯುವ ಮುಕ್ತ ಪ್ರೊ ಕಬಡ್ಡಿ ಪಂದ್ಯಾವಳಿಗೆ ತಂಡಗಳನ್ನು ಆಹ್ವಾನಿಸಲಾಗಿದೆ.
ಡಿಸೆಂಬರ್ 8 ಮತ್ತು 9ರಂದು ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆಯುವ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಇಚ್ಚಿಸುವ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳ ತಂಡಗಳು ಡಿಸೆಂಬರ್ 5, 2018ರೊಳಗೆ ಪ್ರವೇಶ ಶುಲ್ಕ ರೂ.1000 ಪಾವತಿಸಿ ನೋಂದಾಯಿಸಿಕೊಳ್ಳಬಹುದಾಗಿದೆ.
ಈ ತಂಡಗಳು ಕನರ್ಾಟಕದ ಇತರ ಜಿಲ್ಲೆಗಳ ಕ್ರೀಡಾಪಟುಗಳನ್ನು ಸೇರಿಸಿಕೊಂಡು ಪಂದ್ಯಾವಳಿಯಲ್ಲಿ ಆಡಬಹುದಾಗಿದ್ದು ಪ್ರವೇಶ ಶುಲ್ಕ ನೀಡಿ ನೋಂದಾಯಿಸಿ ಸ್ಪಧರ್ೆಯಲ್ಲಿ ಭಾಗವಹಿಸುವ ತಂಡಗಳಿಗೆ ಮಾತ್ರ ನೋಂದಣಿ ಶುಲ್ಕವನ್ನು ಮರುಪಾವತಿಸಲಾಗುವುದು.
ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಲಾಗುವುದು. ಅದರಂತೆ ಪ್ರಥಮ ಬಹುಮಾನ ರೂ.30,000/-, ದ್ವಿತೀಯ ಬಹುಮನ ರೂ.20,000/-, ತೃತೀಯ ಬಹುಮಾನ ರೂ.10,000/- ಹಾಗೂ ನಾಲ್ಕನೇ ಬಹುಮಾನ ರೂ.5,000/- ನೀಡಲಾಗುವುದು.
ಕಬಡ್ಡಿ ಪಂದ್ಯಾವಳಿ ನಿಯಮಾನುಸಾರ ನಡೆಸಲಾಗುವುದು. ಭಾಗವಹಿಸುವ ತಂಡಗಳು ಜಿ.ಪಿ.ನಾಯಕ ಮೊ.9448628625, ಸದಾನಂದ ಎಂ.ನಾಯಕ ಮೊ.9448014307, ಪ್ರಕಾಶ ರೇವಣಕರ ಮೊ.9880748821 ಇವರಲ್ಲಿ ತಮ್ಮ ತಂಡವನ್ನು ನೋಂದಾಯಿಸಿಕೊಳ್ಳಬಹುದು ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಕರಾವಳಿ ಉತ್ಸವ-2018ರ ಮುಕ್ತ ಪ್ರೊ ಕಬಡ್ಡಿ ಪಂದ್ಯಾವಳಿ ಸಮಿತಿ ಪ್ರಕಟಣೆ ತಿಳಿಸಿದೆ.