ನೂತನ ಪದಾಧಿಕಾರಿಗಳ ಒಕ್ಕೂಟ ಪದಗ್ರಹಣ
ಧಾರವಾಡ 22: ಧಮರ್ಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದಂತಹ ಈ ಯೋಜನೆಯು ಗ್ರಾಮೀಣ ಭಾಗದಲ್ಲಿ ಮಾತ್ರ ಸಿಮೀತವಾಗಿರದೆ ಪಟ್ಟಣಗಳಲ್ಲಿರುವ ಜನರಿಗೆ ಆಥರ್ಿಕ ವ್ಯವಹಾರಕ್ಕೆ ಸಹಾಯ ಮಾಡುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಮುಂದಾಗಿದೆ. ಇಂತಹ ಯೋಜನೆಯನ್ನು ಕೊಡುಗೆಯಾಗಿ ನೀಡಿದ ಶ್ರೀಕ್ಷೇತ್ರಕ್ಕೆ ಅಭಿನಂದನಾರ್ಹರು ಎಂದು ಧಾರವಾಡ ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ನಿಜನಗೌಡ ನಿಂಗನಗೌಡ ಪಾಟೀಲ ತಿಳಿಸಿದರು.
ತಾಲೂಕ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟಗಳು, ಮುಳಮುತ್ತಲ, ಮಂಗಳಗಟ್ಟಿ, ಕುರುಬಗಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳಗಟ್ಟಿಯ ರೇಣುಕಾಚಾರ್ಯ ಸಭಾ ಭವನದಲ್ಲಿ ಜರುಗಿದ ಒಕ್ಕೂಟಗಳ ನೂತನ ಪದಾಧಿಕಾರಿಗಳ ಒಕ್ಕೂಟ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆಯನ್ನು ಕುರುಬಗಟ್ಟಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ನಿಂಗನಗೌಡ ಅಯ್ಯನಗೌಡ ಪಾಟೀಲ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುರುಬಗಟ್ಟಿ ಗ್ರಾಮ ಪಂಚಾಯತ ಸದಸ್ಯ ರಜಾಕ್ ವಿಜಾಪೂರ ಉಪಸ್ಥಿತರಿದ್ದರು.
ಶ್ರೀ.ಕ್ಷೇ.ಧ.ಗ್ರಾ ಯೋಜನೆ ಜಿಲ್ಲಾ ನಿದರ್ೆಶಕ ದಿನೇಶ್ ಎಮ್. ನೂತನ ಪದಾಧಿಕಾರಿಗಳ ಜವಾಬ್ದಾರಿ ಹಸ್ತಾಂತರವನ್ನು ಮಾಡಿ ಅವರ ಜವಾಬ್ದಾರಿಯನ್ನು ತಿಳಿಸಿ ಸ್ವ-ಸಹಾಯ ಸಂಘಗಳಿಂದ ಮಹಿಳೆಯರಿಗೆ ಆಥರ್ಿಕ ನೆರವು ಮತ್ತು ಸ್ವಾವಲಂಬಿಯ ಬದುಕನ್ನು ಕಟ್ಟಿಕೊಳ್ಳಲು ನೆರವಾಗಿದೆ. ಹಾಗೂ ಮಹಿಳೆಯರು ಹೆಚ್ಚು ಸ್ವ-ಉದ್ಯೋಗ ಮತ್ತು ಕ್ರಿಯಾಶೀಲರಾಗಿ ಒಳ್ಳೆಯ ನಾಗರಿಕರಾಗಿ ಬದುಕಬೇಕು ಎಂದು ಆವರು ಕಿವಿಮಾತು ಹೇಳಿದರು.
ತಾಲೂಕಿನ ಯೋಜನಾಧಿಕಾರಿ ಉಲ್ಲಾಸ್ ಮೇಸ್ತ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿ ನೂತನ ಪದಾಧಿಕಾರಿಗಳಿಗೆ ವಿಧಿ ಬೋಧನೆ ಮಾಡಿದರು. ವಲಯದ ಮೇಲ್ವಿಚಾರಕ ಹರೀಶ್ ಶೆಟ್ಟಿ ನಿರೂಪಿಸಿ ವಂದಿಸಿದರು. ವಲಯದ ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.