ನವಲಗುಂದ-18: ಮಾಹಿತಿ ತಂತ್ರಜ್ಞಾನವನ್ನು ಹೆಚ್ಚಿಸಿಕೊಳ್ಳುವುದು, ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಾರ ವೃದ್ಧಿಮಾಡಿಕೊಳ್ಳುವುದು, ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಲು ತರಬೇತಿ ಮತ್ತು ಶಿಕ್ಷಣದ ಬಗ್ಗೆ ಹೊಸ ಆಯಾಮಗಳನ್ನು ಸೃಷ್ಠಿಸುವುದು, ಇತರೆ ಸಂಸ್ಥೆಗಳ ಮೂಲಕ ಹೆಚ್ಚಿನ ಆಥರ್ಿಕ ಸಂಪನ್ಮೂಲ ಕ್ರೊಢೀಕರಣ ಇಂತಹ ಹಲವಾರು ಸ್ಪಧರ್ೆಗಳನ್ನು ಸಹಕಾರ ಸಂಸ್ಥೆಗಳು ಎದುರಿಸಬೇಕಾಗಿದೆ ಎಂದು ಮಾಜಿ ಸಚಿವ ವಿನಯ ಕುಲಕಣರ್ಿ ಹೇಳಿದರು.
ಕಾರ್ಯಕ್ರಮವನ್ನು ಕನರ್ಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಬೆಂಗಳೂರ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ, ಧಾರವಾಡ, ಕೆ.ಸಿ.ಸಿ. ಬ್ಯಾಂಕ ನಿ, ಧಾರವಾಡ, ನವಲಗುಂದ ಮತ್ತು ಅಣ್ಣಿಗೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಮತ್ತು ಸಹಕಾರ ಇಲಾಖೆ, ಧಾರವಾಡ ಇವರುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ 65ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಾರ್ವಜನಿಕ, ಖಾಸಗಿ, ಸಹಕಾರಿ ಸಹಭಾಗಿತ್ವ ನಿಮರ್ಾಣ ದಿನದ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸ್ಪಧರ್ಾತ್ಮಕ ದಿನಗಳಲ್ಲಿ ಯಾವುದೇ ವಲಯವಾದರೂ ಯಶಸ್ಸನ್ನು ಕಾಣಬೇಕಾದರೆ ಪರಿಣಾಮಕಾರಿಯ ಸಹಭಾಗಿತ್ವ ಅಗತ್ಯವಾಗಿರುತ್ತದೆ. ಸಮಾನ ಮನಸ್ಕ ವಲಯಗಳೊಂದಿಗೆ ಸಹಭಾಗಿತ್ವವನ್ನು ಹೊಂದಿದಾಗ ಗುರಿ ತಲುಪುವುದು ಸುಲಭವಾಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ನವಲಗುಂದ ಮಾಜಿ ಶಾಸಕರಾದ ಆರ್.ಬಿ. ಶಿರಿಯಣ್ಣವರ ಅವರು ಸಹಕಾರ ಸಂಸ್ಥೆಗಳು ಸಹಕಾರ ತತ್ವಗಳಡಿಯಲ್ಲಿ ನಡೆಯಬೇಕಾಗಿದೆ. ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳು ತರಬೇತಿ ಮತ್ತು ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತುಕೊಡಬೇಕಾಗಿದೆ ಎಂದರು.
ಸಹಕಾರ ಸಂಸ್ಥೆಗಳ ಮೂಲಕ ಹೆಚ್ಚಿನ ಆಥರ್ಿಕ ಸಂಪನ್ಮೂಲ ಕೃಢಿಕರಣ ಮಾಡುವುದರ ಜೊತೆಗೆ ವ್ಯಾಪಾರ ವೃದ್ಧಿಯಾಗಬೇಕಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕಿ ಸಾವಿತ್ರಿ ಬಿ. ಕಡಿ ಅವರು ತಿಳಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ ಧಾರವಾಡ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ಬಾಪುಗೌಡ ಡಿ. ಪಾಟೀಲ ಅವರು ಮಾತನಾಡುತ್ತ, ಸಹಕಾರಿ ಸಂಘಗಳ ಪ್ರಗತಿಯ ಚಿಂತನೆ ಮಾಡುವುದು ಅವಶ್ಯವಾಗಿದೆ. ಇಪ್ಕೋ, ಕ್ರಿಬ್ಕೋ, ಅಮೂಲ್ ಮತ್ತಿತರ ಸಹಕಾರ ಸಂಸ್ಥೆಗಳು ವೈವಿದ್ಯಮಯ ಸಹಭಾಗಿತ್ವವನ್ನು ಖಾಸಗಿ ಹಾಗೂ ಸಾರ್ವಜನಿಕ ವಲಯದಲ್ಲಿ ಹೆಣೆದುಕೊಂಡಿವೆ. ಇತರೆ ಸಂಸ್ಥೆಗಳು ಸಹಕಾರ ತತ್ವಗಳಡಿ ಭಾವಿದ್ದರೂ ಅವುಗಳ ತಾಂತ್ರಿಕತೆ, ವ್ಯವಹಾರಿಕ ನೈಪುಣ್ಯತೆಯನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸಬಹುದಾಗಿದೆ. ಸಹಕಾರ ಸಂಸ್ಥೆಗಳು ಖಾಸಗಿ ಹಾಗೂ ಸಾರ್ವಜನಿಕ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ಹೊಂದುವುದರಿಂದ ಮೂರೂ ವಲಯಗಳಿಗೆ ಪರಸ್ಪರ ಅನುಕೂಲಗಳನ್ನು ಕಲ್ಪಿಸಿದಂತಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯ ಎ.ಬಿ. ಹಿರೇಮಠ, ಡಿ.ವೈ. ಕಾಡಪ್ಪನವರ, ಸದುಗೌಡ ಪಾಟೀಲ ಅವರು ಉಪಸ್ಥಿತರಿದ್ದು ಮಾತನಾಡಿದರು. ಯೂನಿಯನ್ದ ನಿದರ್ೇಶಕರಾದ ದೇಸಾಯಿಗೌಡ ಎಸ್. ಪಾಟೀಲ, ಬಿ.ಎಸ್. ಕುರಹಟ್ಟಿ, ಎಫ್.ಆರ್. ಕಲ್ಲನಗೌಡ್ರ ಮತ್ತು ಸಿ.ಬಿ. ಹಾಳದೊಟರ ಹಾಗೂ ನವಲಗುಂದ & ಅಣ್ಣಿಗೇರಿ ತಾಲೂಕಿನ ಪಿಕೆಪಿಎಸ್ಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿವಾಹಕರುಗಳಿಗೆ ಸನ್ಮಾನಿಸಲಾಯಿತು.
ಕೆ.ಸಿ.ಸಿ. ಬ್ಯಾಂಕಿನ ಎಸ್.ವ್ಹಿ. ಹೂಗಾರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ ನಿವೃತ್ತ ಉಪನಿದರ್ೇಶಕ ಪಿ.ಪಿ. ಗಾಯಕವಾಡ ಉಪನ್ಯಾಸ ನೀಡಿದರು.