ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ

ಬೆಳಗಾವಿ 30: ನಮ್ಮ ಶಿಕ್ಷಣ ವ್ಯವಸ್ಥೆ ಬೋಧನೆ, ಸಂಶೋಧನೆ ಹಾಗೂ ಸಮಾಜ ಸೇವೆ ಎಂಬ ಮೂರು ಆಯಾಮಗಳನ್ನು ಹೊಂದಿದ್ದು, ಯುವ ವಿದ್ಯಾಥರ್ಿಗಳು ಸಮಾಜ ಸೇವೆಯ ತಮ್ಮ ಜವಾಬ್ದಾರಿಯನ್ನು ನಿರ್ಲಕ್ಷಿಸಬಾರದು ಎಂದು ಬೆಂಗಳೂರು ಆಲ್ ಇಂಡಿಯಾ ಇನ್ಸ್ಟ್ಯೂಟ್ ಆಫ್ ಲೋಕಲ್ ಸೆಲ್ಪ್ ಗವರ್ನನಮೆಂಟ್ ಪ್ರಾದೇಶಿಕ ನಿದರ್ೆಶಕ ಅರುಣ ಪೂಜಾರ ಹೇಳಿದರು. 

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ವತಿಯಿಂದ, ಭಾರತ ಸಕರ್ಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಪ್ರಾದೇಶಿಕ ನಿದರ್ೆಶನಾಲಯ, ಬೆಂಗಳೂರು, ಇವರ ಸಹಯೋಗದೊಂದಿಗೆ ದಿ. 23-29ರ ಅವಧಿಯಲ್ಲಿ "ಜ್ಞಾನ ಸಂಗಮ", ಬೆಳಗಾವಿಯಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ದೇಶದ ಹನ್ನೊಂದು ರಾಜ್ಯಗಳ 210 ಎನ್.ಎಸ್.ಎಸ್. ಸ್ವಯಂ ಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು. 

ಹಾವೇರಿ ಕನರ್ಾಟಕ ಜಾನಪದ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಚಂದ್ರಶೇಖರ ಅವರು ಮಾತನಾಡಿ "ಯುವಕರು ಜೀವನದಲ್ಲಿ ಶಾಂತಿ ಹಾಗೂ ನೆಮ್ಮದಿ ಸಾಧಿಸುವುದನ್ನು ತಮ್ಮ ಗುರಿಯಾಗಿಸಿಕೊಳ್ಳಬೇಕೆಂದು" ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ವಿಟಿಯು ಪರೀಕ್ಷಾ ವಿಭಾಗದ ಕುಲಸಚಿವ ಡಾ. ಸತೀಶ ಅಣ್ಣಿಗೇರಿ ಅವರು ಮಾತನಾಡಿ "ವಿದ್ಯಾಥರ್ಿಗಳು ಶಿಕ್ಷಣದೊಂದಿಗೆ ನೈತಿಕತೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು.       

ಬೆಂಗಳೂರು ಎನ್.ಎಸ್.ಎಸ್. ಪ್ರಾದೇಶಿಕ ನಿದರ್ೆಶನಾಲಯ ಪ್ರಾದೇಶಿಕ ನಿದರ್ೆಶಕ ಕೆ. ವಿ. ಖಾದ್ರಿ ನರಸಿಂಹಯ್ಯ ಸ್ವಾಗತಿಸಿದರು. ವಿತಾವಿ ಎನ್.ಎಸ್.ಎಸ್. ಅಧಿಕಾರಿ ಡಾ. ಅಪ್ಪಾಸಾಬ ಎಲ್. ವಿ. ವಂದನಾರ್ಪಣೆ ಮಾಡಿದರು.