ಸ್ನೇಹಜೀವಿ ಪೌಂಡೆಶನ ವತಿಯಿಂದ ಸ್ವಚ್ಚತಾ ಅಂದೋಲನ

Cleanliness movement by Snehajeevi Foundation

ಸ್ನೇಹಜೀವಿ ಪೌಂಡೆಶನ ವತಿಯಿಂದ ಸ್ವಚ್ಚತಾ ಅಂದೋಲನ  

ಯಮಕನಮರಡಿ, 23;   ಸಮೀಪದ ಹತ್ತರಗಿ ಗ್ರಾಮದ ಸ್ನೇಹಜೀವಿ ಪೌಂಡೆಶನ್ ಚಾರಿಟೇಬಲ ಟ್ರಸ್ಟ ವತಿಯಿಂದ ದಿ 23 ರಂದು ಸ್ಥಳೀಯ ಆನಂದಪೂರ ಗ್ರಾಮದ ಸರಕಾರಿ ಆಯುರ್ವೇದಿಕ ಆಸ್ಪತ್ರೇ ಆವರಣದಲ್ಲಿ ಭಾರಿ ಪ್ರಮಾಣದಿ ಷರಾಯಿ ಬಾಟಲಿ ಹಾಗೂ ಇತರೆ ವಸ್ತುಗಳು ಸ್ಥಳದಲ್ಲಿ ತುಂಬಿ ತುಳುಕುತ್ತಿದ್ದರೂ ಸಹಿತ ಇತ್ತಕಡೆಗೆ ಅಲ್ಲಿಯ ಜನಪ್ರತಿನಿದಿಗಳು ಕಣ್ಣೇತ್ತಿ ಸಹ ನೋಡದೇ ಇರುವುದನ್ನು ಗಮನಿಸಿ ಸ್ನೇಹ ಜೀವಿ ಪೌಂಡೆಶನ ಸದಸ್ಯರು ಸ್ವಯಂ ಪ್ರೇರಣೆಯಿಂದ ಸ್ವಚ್ಚತೆಯ ಕಾರ್ಯಕೈಗೊಂಡು ಯಮಕನಮರಡಿ ಮತ ಕ್ಷೇತ್ರದಲ್ಲಿ ಮಾದರಿಯಾಗಿದದ್ದಾರೆ.  ಇದರಂತೆ ಗ್ರಾಮದ ಅನೇಕ ಸ್ಥಳಗಳಲ್ಲಿ ಕಸದ ಗುಂಡಿಗಳು ರಾರಾಜಿಸುತ್ತಿದೆ. ಇದರ ಜೋತೆಗೆ ಚರಂಡಿಗಳು ಕೂಡ ತುಂಬಿ ತುಳುಕುತ್ತಿದೆ. ಆದರೆ ಗ್ರಾಮ ಪಂಚಾಯತಿಯವರು ಏಕೆ ವಿಚಾರಿಸುತ್ತಿಲ್ಲ ಎಂದು ಜನರು ಮಾತನಾಡುತ್ತಿದ್ದಾರೆ. ಯುವಕರೇ ದೆಶದ ಶಕ್ತಿ ಎಂಬುದಕ್ಕೆ ಇದೊಂದು ಸಾಕ್ಷಿಯಾಗಿದೆ. ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಸದಸ್ಯರಾದ ಉದಯ ಹೀರೇಮಠ ಅಶೋಕ ಪಾಟೀಲ, ಸಂಜು ಗೊಂಧಳಿ, ಮಲ್ಲೇಶ ಗೋರವ, ಸಚಿನ ಹಂಚಿನಾಳಿ, ಭಿಮಪ್ಪಾ ತೇರಣಿ ಹಾಗೂ ಇತರರು ಉಪಸ್ಥಿತರಿದ್ದರು.