ಚೌಡೇಶ್ವರಿ ದೇವಿ ಜಾತ್ರೋತ್ಸವ

Chowdeshwari Devi Festival

ಚೌಡೇಶ್ವರಿ ದೇವಿ ಜಾತ್ರೋತ್ಸವವು  

ರಾಣೇಬೆನ್ನೂರು  12: ತಾಲೂಕಿನ ಹುಲಿಕಟ್ಟಿ ಗ್ರಾಮದ  ಬೀರಲಿಂಗೇಶ್ವರ ದೇವರ ಹಾಗೂ ಚೌಡೇಶ್ವರಿ ದೇವಿ ದುರ್ಗಾದೇವಿ ದೇವಿಯರ ವಾರ್ಷಿಕ ಸಂಪ್ರದಾಯದ ಜಾತ್ರೋತ್ಸವವು ಹತ್ತಾರು ಸಾವಿರ ಭಕ್ತಾದಿಗಳ ಮಧ್ಯೆ ನೆರವೇರಿಸಲಾಯಿತು. ಸೋಮವಾರ ಮುಂಜಾನೆ ಗ್ರಾಮದ ಎಲ್ಲಾ ದೇವಾನುದೇವತೆಗಳ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಾತ್ರೋತ್ಸವದ ನಿಮಿತ್ತ ಗ್ರಾಮದ ಪ್ರತಿಯೊಂದು ಓಣಿಗಳಲ್ಲಿ ವಿಶೇಷ ಅಲಂಕಾರ, ಮಾಡಲಾಗಿತ್ತುಹಬ್ಬದ ಸಂಭ್ರಮ ಉತ್ಸಾಹದೊಂದಿಗೆ ನೆರವೇರಿದ ಜಾತ್ರೆಯಲ್ಲಿ ಜಿಲ್ಲೆ ತಾಲೂಕು ಸೇರಿದಂತೆ ನಾಡಿನ ಸಾವಿರಾರು ಭಕ್ತರು ಪಾಲ್ಗೊಂಡು ತಮ್ಮ ಭಕ್ತಿ ಸೇವೆ ಮೆರೆದು ಧನ್ಯತೆ ಪಡೆದರು.  ಸಂಪ್ರದಾಯದಂತೆ ಸೂರ್ಯೋದಯ ಕಾಲ   ಪಂಜಿನ ಪವಾಡ,ಭಕ್ತರಿಂದ ಸಾಮೂಹಿಕ  ದೀಡು ನಮಸ್ಕಾರ, ಉರುಳು ಸೇವೆ ಸಲ್ಲಿಸಿ ದೇವರಿಗೆ ಹರಕೆ ನೈವೇದ್ಯ ಸಮರ​‍್ಿಸಿದರು.  ಮಧ್ಯಾನ  12-00 ಗಂಟೆಗೆ ಗುಡದಯ್ಯನ  ವಾಲಗ,  ಭಕ್ತಾದಿಗಳಿಗೆ ವಾರದಿಂದ ಕುಡಿ ಇಟ್ಟಿರುವ ಹಾಲಿನ ಕೊಡ ಪೂಜೆ ನೆರವೇರಿಸಿದರು. ಹಣ್ಣು ತುಪ್ಪ ವಿತರಿಸಿ ಅನಂತರ ಗ್ರಾಮದಲ್ಲಿ  ಬೆಲ್ಲದ ಬಂಡೆಯಿಂದ ಮೆರವಣಿಗೆ ನೆರವೇರಿಸಲಾಯಿತು.  ಈ ಸಂದರ್ಭದಲ್ಲಿ ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯ ಸದಸ್ಯರು ಮುಖಂಡರು ಗ್ರಾಮದ ನಾಗರಿಕರು ಮುಂಚೂಣಿಯಲ್ಲಿ ಪಾಲ್ಗೊಂಡಿದ್ದರು.