ಬಿಣಗಾ ಗ್ರಾಸಿಂ ಕಾರ್ಖಾನೆಯಲ್ಲಿ ಕ್ಲೋರಿನ್ ಸೋರಿಕೆ ಪ್ರಕರಣ : ಕಾರ್ಖಾನೆ ಸದ್ಯಕ್ಕೆ ಬಂದ್
ಕಾರವಾರ 12: ಕಾರವಾರ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಿಣಗಾ ಗ್ರಾಮದಲ್ಲಿರುವ ಗ್ರಾಸಿಂ ಇಂಡಸ್ಟ್ರಿ ಯಲ್ಲಿ ಕ್ಲೋರಿನ್ ಸೋರಿಕೆಯಾದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಸದ್ಯಕ್ಕೆ ಮುಚ್ಚಲಾಗಿದೆ. ಸ್ಥಳೀಯರು ಮತ್ತು ಜಿಲ್ಲಾಡಳಿತ ಸುರಕ್ಷಿತ ಕ್ರಮದ ಹಿನ್ನೆಲೆಯಲ್ಲಿ ಕಾರ್ಖಾನೆ ಮುಚ್ಚಲು ಆಗ್ರಹಿಸಿದ್ದರು. ಕಾರ್ಖಾನೆ ತನ್ನ ಘಟಕದ ಸುರಕ್ಷಿತೆ ಖಾತ್ರಿ ಮಾಡಿದ ನಂತರವಷ್ಟೇ ,ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭವಾಗುವ ಸಾಧ್ಯತೆಗಳಿವೆ.
ಕ್ಲೋರಿನ್ ಸೋರಿಕೆ ಯಿಂದ ಅಸ್ವಸ್ಥ ರಾಗಿದ್ದಹದಿನೆಂಟು ಜನ ಬಿಹಾರ ಮೂಲದ ಕಾರ್ಮಿಕರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.ಅಸ್ವಸ್ಥಗೊಂಡ ಕಾರ್ಮಿಕರನ್ನು ಕಾರವಾರದ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು . ರವಿವಾರ ಸಂಜೆ ವೇಳೆಗೆ ಎಲ್ಲರೂ ಪ್ರಾಣ ಅಪಾಯದಿಂದ ಪಾರಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.ಕ್ಲೋರಿನ್ ಸೋರಿಕೆ ಸಾರ್ವಜನಿಕರಲ್ಲಿ ಭೀತಿ :ಈಚೆಗೆ ಕಳೆದ ವರ್ಷದ ನವ್ಹೆಂಬರ್ ನಲ್ಲಿ ಕ್ಲೋರಿನ್ ಸೋರಿಕೆ ಯಿಂದ ಬೈತಖೋಲ್ ದ ಒಬ್ಬ ಯುವಕ ಮೃತಪಟ್ಟದ್ದು , ಆ ನಂತರ ಕಾರ್ಖಾನೆ ಆಡಳಿತ ಎಚ್ಚೆತ್ತು ಕೊಂಡಿಲ್ಲ ಎಂದು ಸ್ಥಳೀಯರು ಆರೋಪ ಮುಂದುವರಿದಿದೆ.
ಗ್ರಾಸಿಂ ಈ ದುರ್ಘಟನೆ ಬಗ್ಗೆ ಅಂತರಿಕ ತನಿಖೆಗೆ ಆದೇಶಿಸಿದೆ.ಪ್ರತಿಭಟನೆಗೆ ಮಣಿದ ಕಾರ್ಖಾನೆಯ ಆಡಳಿತ ಮಂಡಳಿ : ಬಿಣಗಾ ಗ್ರಾಮದ ಸ್ಥಳೀಯರು ನಗರಸಭೆಯ ಮಾಜಿ ಸದಸ್ಯ ರಾಜಾ ಗೌಡ, ಹಾಲಿ ಸದಸ್ಯ ಪಿ.ಪಿ.ನಾಯ್ಕ, ರುಕ್ಮಿಣಿ ಗೌಡ,ಶ್ವೇತಾ ನಾಯ್ಕ ನೇತೃತ್ವದಲ್ಲಿ ಗ್ರಾಸಿಂ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಿದ ನಂತರ ಕಾರ್ಖಾನೆಉತ್ಪಾದನೆ ನಿಲ್ಲಿಸಿದೆ.ಕಾರ್ಖಾನೆ ಗ್ರಾಮಸ್ಥರ ಸಭೆ ಕರೆದಿಲ್ಲ. . ಘಟನೆ ನಡೆದು ಎರಡು ತಾಸು ವಿಷಯ ಮುಚ್ಚಿಟ್ಟದ್ದೇಕೆ ಎಂಬ ಪ್ರಶ್ನೆ ಉದ್ಬವಿಸಿದೆ.ಕ್ಲೋರಿನ್ ಸೋರಿದರೂ ಎಚ್ಚರಿಕೆ ಸೈರನ್ ಕೂಗಿಲ್ಲ. ಆ ಸ್ಥಳದಲ್ಲಿ ಕೌಶಲ್ಯ ಇಲ್ಲದ ಬಿಹಾರಿ ಕಾರ್ಮಿಕ ರಿಂದ ಕೆಲಸ ಮಾಡಿಸಲಾಗಿತ್ತೇ ಎಂಬ ಚರ್ಚೆ ನಡದಿದೆ.