ಚಿತ್ಪಾವನ ಬ್ರಾಹ್ಮಣ ಸಂಘ, ಧಾರವಾಡ ಅಚ್ಚುಕಟ್ಟಾಗಿ ಜರುಗಿದ ಸರಳ ಸುಂದರ ದ್ವೈವಾರ್ಷಿಕ ಚಿತ್ಪಾವನ ಸ್ನೇಹಕೂಟ
ಧಾರವಾಡ 24 : ಚಿತ್ಪಾವನ ಬ್ರಾಹ್ಮಣ ಸಂಘದ ದ್ವೈವಾರ್ಷಿಕ ಸ್ನೇಹಕೂಟವು ದಿ: 23-03-2025 ರಂದು ನಗರದ ಗೋಪಾಲಕೃಷ್ಣ ಮಂಗಲ ಕಾರ್ಯಾಲಯದಲ್ಲಿ ಸಮಾಜದಲ್ಲಿ ನಗಣ್ಯವೆನಿಸುವ ಸಂಖ್ಯಾಬಲದ ಚಿತ್ಪಾವನ ಕುಟುಂಬಗಳ ಉಪಸ್ಥಿತಿಯ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಾಂಗವಾಗಿ ಸಂಪನ್ನಗೊಂಡಿತು. ವೇದಮೂರ್ತಿ ಸೋಮದೇವ ಮರಾಠೆ ಇವರ ವೇದಘೋಷ ಹಾಗೂ ಸಮಾಜದ ಮಹಿಳೆಯರ ಪ್ರಾರ್ಥನೆಯೊಂದಿಗೆ ಚಿತ್ಪಾವನರ ಆರಾಧ್ಯದೈವತ ಗುರು ಭಗವಾನ್ ಪರಷುರಾಮರ ಭಾವಚಿತ್ರಕ್ಕೆ ದೀಪ ಪ್ರಜ್ವಲದೊಂದಿಗೆ ಕಾರ‌್ಯಕ್ರಮ ಶುಭಾರಂಭಗೊಂಡಿತು. ಮಕ್ಕಳಿಂದ ದೇಶಾಭಿಮಾನ ಸಾರುವ ಫ್ಯಾನ್ಸಿ ಡ್ರೆಸ್ ಸ್ಪರ್ಧೆ, ದೇಶಭಕ್ತಿಗೀತೆಗಳು, ಮಹಿಳೆಯರಿಂದ ಭಾವಗೀತೆಗಳು, ಚಿತ್ಪಾವನರ ವಿಶೇಷತೆಯ ಮಂಗಳಾಗೌರಿ ಆಟ, ಗೋಂಧಳ ನೃತ್ಯ, ಪುರುಷರು ಮತ್ತು ಮಹಿಳೆಯರಿಗಾಗಿ ರೋಚಕ ರಸಪ್ರಶ್ನೆ, ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಒನ್ ಮಿನಿಟ್ ಷೋ, ಮುಂತಾದ ಮನೋವಿಕಾಸ, ಮನೋರಂಜನ ಕಾರ‌್ಯಕ್ರಮಗಳು ಆಕರ್ಷಣೀಯವಾಗಿ ಜರುಗಿದವು. ಸಂಘದ ಅಧ್ಯಕ್ಷ ನರಸಿಂಹ ಪರಾಂಜಪೆ, ಉಪಾಧ್ಯಕ್ಷೆ ಶುಭದಾ ಘಾಣೇಕರ, ಇತರ ಪದಾಧಿಕಾರಿಗಳಾದ ಎನ್.ಎಸ್. ಕಾಳೆ, ವೆಂಕಟೇಶ ಜೋಗಳೆಕರ, ಅರವಿಂದ ಜೋಶಿ, ಪ್ರದೀಪ ತಾಡಮರಿ ಮುಂತಾದವರ ಉಪಸ್ಥಿತಿಯ ವೇದಿಕೆಯಲ್ಲಿ ಅವಳಿನಗರಗಳ ಆಯ್ದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಣೆ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆದವು. ಪ್ರಾರಂಭದಲ್ಲಿ ನರಸಿಂಹ ಪರಾಂಜಪೆ ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅನಿತಾ ತಾಡಮರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಪ್ರದೀಪ ತಾಡಮರಿ ವಂದಿಸಿದರು. ಸಮಾಜದ ಗಣ್ಯರಾದ ಶ್ರೀ ಪ್ರಸಾದ ಗಣಪುಲೆ, ಗುರುಮೂರ್ತಿ ಮೆಹಂದಳೆ, ಸುಖದ್ ಜೋಶಿ, ಸಿದ್ಧಾರ್ಥ ಗೋಖಲೆ, ಶ್ರೀಪಾದ ಜೋಶಿ, ಪ್ರಭಾಕರ ತಾಮಣಕರ, ರವಿ ಜೋಶಿ, ದಿಗಂಬರ ಕರಂದಿಕರ, ವಿಲಾಸ ಕೇಳಕರ, ಪ್ರದೀಪ ಹೆಬ್ಬಾರ, ವಸಂತ ಕರಮರಕರ, ಧನಂಜಯ ಫಡ್ಕೆ, ಲತಾ ಪಂಡಿತ, ಅಶ್ವಿನಿ ಗದ್ರೆ, ಛಾಯಾ ಮೋಡಕ, ಪ್ರತಿಭಾ ಗೋಡಬೋಲೆ, ಲಾವಣ್ಯ ಮರಾಠೆ, ಗೀತಾ ಸೋಹನಿ, ರೂಪಾ ದಾತೆ, ಸೀಮಾ ಪರಾಂಜಪೆ ಮುಂತಾದವರು ಉಪಸ್ಥಿತರಿದ್ದರು.