ಶೇಖರ ಕಲ್ಲೂರ
ಚನ್ನಮ್ಮನ ಕಿತ್ತೂರ ಃ ಈವತ್ತಿನ ದಿನ ಯುವಕರು ಹಾಗೂ ರೈತಾಪಿ ವರ್ಗದ ಜನರು ಹೈನುಗಾರಿಕ್ಕೆ ಬಿಟ್ಟು ಖಾಸಗಿ ಕೆಲಸಕ್ಕೆ ಹೋಗಿ ಆರೋಗ್ಯಕ್ಕೆ ಮಾರಕವಾಗಿರುವ ಸತ್ವ ರಹಿತ ಕಲಬೆರೆಕೆಯ ಹಾಲಿನ ಪ್ಯಾಕೇಟ್ ತಂದು ಉಪಯೊಗಿಸುತ್ತಿದ್ದು ಹೈನುಗಾರಿಕೆಯನ್ನು ಮರೆತು ಬಿಟ್ಟಿದ್ದಾರೆ. ಆದರೇ ಸ್ವಾಮಿಜಿಯೊಬ್ಬರು ಸ್ವತಃ ಜಾನುವರುಗಳನ್ನು ಅವರೇ ಸಾಕಾಣಿಕೆ ಮಾಡುವ ಮೂಖಾಂತರ ಹೈನುಗಾರಿಕೆಯನ್ನು ಮಾಡಲು ಮುಂದಾಗಿದ್ದಾರೆ.
ಹೌದು, ಸ್ಥಳಿಯ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿಗಳು ಜಾನುವಾರ ಸಾಕುವ ಮೂಲಕ ಹೈನುಗಾರಿಕೆಗೆ ಹಾಗೂ ಸ್ವತಃ ಕೆಎಮ್ಏಫ್ ಡೈರಿಯನ್ನೂ ಸ್ಥಾಪಿಸಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವ ಪೀಳಿಗೆಗೆ ಹಾಗೂ ರೈತಾಪಿ ವರ್ಗದ ಜನರಿಗೆ ಮಾದರಿಯಾಗಿದ್ದಾರೆ.
ಸಮೀಪದ ಗಿರಿಯಾಲ ಗ್ರಾಮದ ಜಮೀನಿನಲ್ಲಿ 18 ಆಕಳು ಹಾಗೂ 2 ಎಮ್ಮೆಗಳನ್ನು ಸಾಕಿ ದಿನಕ್ಕೆ 120 ರಿಂದ 140 ಲೀಟರ್ ಹಾಲು ಉತ್ಪಾದಿಸುವ ಮೂಲಕ ಹೈನುಗಾರಿಕೆ ಉದ್ಯೋಗದಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ.
ಆದಿ ಕಾಲದಿಂದಲೂ ಮಠಗಳಲ್ಲಿ ಗೋ ಶಾಲೆ ಇರಬೇಕು ಎಂಬುದು ಪದ್ಧತಿಯಾಗಿದ್ದಿತು. ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿರುವುದಾಗಿ ಹೇಳುವ ಸ್ವಾಮಿಜಿಗಳು ಜಾನುವಾರು ಸಾಕಾಣಿಕೆಯಲ್ಲಿ ಬದಲಾವಣೆ ಮಾಡಿದ್ದು ಹೆಚ್ಚು ಹಾಲು ನೀಡುವ ಚಿಕ್ಕಬಳ್ಳಾಪೂರ ಹಾಗೂ ಯರಗಟ್ಟಿ ಪ್ರದೇಶಗಳಿಂದ ತರಿಸಲಾಗಿದ್ದು ಇದೀಗ ಗುಜರಾತ ರಾಜ್ಯದಿಂದ ಗಿರಿ ತಳಿಯ ಆಕಳುಗಳನ್ನು ತರಿಸುತ್ತಿದ್ದಾರೆ. ಎಲ್ಲದಕ್ಕೂ ಬ್ಯಾಂಕ್ ಸಾಲ ಸೌಲಭ್ಯವಿದ್ದು ಗ್ರಾಮೀಣ ನಿರುದ್ಯೋಗಿ ಯುವಕರು ಮನೆಗೆ ಭಾರವಾಗದೇ ಬ್ಯಾಂಕ್ಗಳ ಸಹಾಯ ಮೂಲಕ ಹೈನುಗಾರಿಗೆ ಪ್ರಾರಂಭಿಸಿ ಮನೆತನಗಳ ಆಥರ್ಿಕ ಪರೀಸ್ಥಿತಿ ಸುಧಾರಿಸಿಕೊಳ್ಳಬಹುದಾಗಿದ್ದು ಹಾಗೂ ದೇಶಿ ತಳಿಗಳನ್ನು ಅಭಿವೃದ್ಧಿಪಡಿಸಿ-ಉಳಿಸಿ ಬೆಳೆಸಿ ಸಂರಕ್ಷಿಸಿಕೊಂಡು ಹೋಗಲು ಅನುಕೂಲವಾಗುತ್ತದೆ. ಭಾರತ ಕೃಷಿ ಪ್ರಧಾನ ದೇಶ. ಹೈನುಗಾರಿಯು ಕೃಷಿಯ ಅಂಗವಾಗಿ ರೈತನ ಆಥರ್ಿಕ ಸ್ಥಿತಿ ಸುಧಾರಣೆಗೆ ಸಹಾರಿಯಾಗಿದೆ. ಇಂಥ ಹೈನುಗಾರಿಯಿಂದ ಇಂದು ರೈತರು ವಿಮುಖರಾಗುತ್ತಿದ್ದು ಗ್ರಾಮೀಣ ಪ್ರದೇಶಗಳಲ್ಲೂ ಸತ್ವ ರಹಿತ ಪಾಕೆಟ್ ಹಾಲು ಕೊಳ್ಳುವ ಸಂಸ್ಕೃತಿ ನಮ್ಮಲ್ಲಿ ಪ್ರಾರಂಭವಾಗಿದ್ದು ದುರಾದೃಷ್ಟಕರ ಎನ್ನುತ್ತಾರೆ ಸ್ವಾಮಿಜಿಗಳು.
ಹೈನುಗಾರಿಕೆಯಿಂದ ಹಾಲು ಉತ್ಪಾದನೆ ಜೊತೆಗೆ ಸೆಗಣಿ ಗೊಬ್ಬರ ಹಾಗೂ ಗೋ ಮೂತ್ರದಿಂದ ಸಾಯವಯ ಗೊಬ್ಬರ ಉತ್ಪಾದನೆ ಹೆಚ್ಚಿನ ಲಾಭವನ್ನು ತಂದು ಕೊಡುತ್ತಿದ್ದು ಇಡೀ 16 ಎಕರೆ ಹೊಲಕ್ಕೆ ಸಾಕಾಗುಷ್ಟು ಗೊಬ್ಬರ ನಮ್ಮಲ್ಲೇ ತಯಾರಾಗಿದೆ. ಇದರಿಂದ ರಾಸಾಯನಿಕ ಗೊಬ್ಬರ ಖರೀದಿಸುವ ಹಣವೂ ಉಳಿಯುತ್ತದೆ ಹಾಗೂ ಸಾವಯವ ಗೊಬ್ಬರದಿಂದ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎಂದು ಸ್ವಾಮಿಗಳು ಖುಷಿಯಿಂದ ವಿವರಿಸುತ್ತಾರೆ. ಒಂದು ಆಕಳನ್ನು ಸಾಕಿದರೆ ಅದು ಇಡೀ ಮನೆಯ ಖರ್ಚನ್ನು ನಿಭಾಯಿಸುತ್ತದೆ. ಇನ್ನೂ ಹೆಚ್ಚು ಆಕಳುಗಳನ್ನು ಸಾಕಿದರೆ ಒಬ್ಬ ಸರಕಾರಿ ನೌಕರ ಗಳಿಸುವದಕ್ಕಿಂತ ಹೆಚ್ಚಿನ ಹಣವನ್ನು ಮನೆಯಲ್ಲಿ ಕುಳಿತು ಕಡಿಮೆ ಅವ ಸೇವೆಯಲ್ಲಿ ಗಳಿಸಬಹುದಾಗಿದೆ. ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಬಂಜರವಾಗುತ್ತಿದ್ದು ಈಗಲೇ ರೈತರು ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಪಶ್ಚಾತಾಪ ಪಡುವ ಸರದಿ ರೈತರದ್ದಾಗುತ್ತದೆ. ಈಗಲೇ ಎಚ್ಚೆತ್ತುಕೊಂಡು ಜಾನುವಾರುಗಳನ್ನು ಸಾಕಿ ಆಥರ್ಿಕ ಅಭಿವೃದ್ಧಿ ಜೊತೆಗೆ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಬೇಕು ಎನ್ನುತ್ತಾರೆ ಸ್ವಾಮಿಜಿಗಳು.
ಬಾಕ್ಸ ಐಟಂ
ಕೆ ಎಮ್ ಎಫ್ ವತಿಯಿಂದ ಸಹಾಯ ಹಸ್ತ ಚಾಚಲು ಸಿದ್ದರಿದ್ದೇವೆ. ನಿರುದ್ಯೋಗಿ ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳದೇ ಹೈನುಗಾರಿಗೆ ಮುಂದಾಗಬೇಕು. ನಮ್ಮ ಹಿರಿಯರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ಸಾವಯವ ಕೃಷಿ ಪದ್ಧತಿಗೆ ಮರಳಬೇಕಿದೆ. ಆಥರ್ಿಕ ಸಹಾಯಕ್ಕೆ ಬ್ಯಾಂಕ್ ಸೌಲಭ್ಯಗಳಿದ್ದು ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು.
? ಡಾ. ಬಸವರಾಜ ಪರವಣ್ಣವರ, ಕೆ ಎಮ್ ಎಫ್ ನಿದರ್ೇಶಕರು.