ಮಕ್ಕಳ ದಿನಾಚರಣೆ ಮಕ್ಕಳ ಪ್ರತಿಭೆಗೆ ಸೂಕ್ತ ವೇದಿಕೆ: ಡಾ.ಸುರೇಶ್

ಲೋಕದರ್ಶನ ವರದಿ 

ಹಗರಿಬೊಮ್ಮನಹಳ್ಳಿ 24 : ನಮ್ಮ ಪ್ರಾರ್ಥನಾ ವಿದ್ಯಾ ಮಂದಿರದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಕೊಡುವುದರ ಜೊತೆ ಪುಟ್ಟ ಪುಟ್ಟ ಮಕ್ಕಳ ಆಟೋಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತಮ್ಮಲ್ಲಿನ ಪ್ರತಿಭೆಗಳಗಳನ್ನು ಗುರುತಿಸಲು ಹಲವಾರು ವೇದಿಕೆಗಳನ್ನು ಕಲ್ಪಿಸಲಾಗುವುದು, ಅಂತಹ ಒಂದು ಉತ್ತಮ ವೇದಿಕೆಯೇ ಈ ಮಕ್ಕಳ ದಿನಾಚರಣೆಯ ಕಾರ್ಯಕ್ರಮವಾಗಿದೆ ಎಂದು ಎಸ್.ಪಿ.ಅಜ್ಜೋಳ್ ಎಜ್ಯುಕೇಷನ್ ಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಡಾ.ಸುರೇಶ್ ಕುಮಾರ್ ಹೇಳಿದರು.

ಪಟ್ಟಣದ ಪ್ರಾರ್ಥನಾ ವಿದ್ಯಾ ಮಂದಿರದಲ್ಲಿ ಆಯೋಜಿಸಲಾಗಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಜವಹಾರ್ಲಾಲ್ ನೆಹರುರವರ ಹುಟ್ಟುಹಬ್ಬದ ಸವಿನೆನಪಿಗಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. 

  ಪ್ರತಿಯೊಂದು ಮಕ್ಕಳಲ್ಲಿ ಒಂದು ಪ್ರತಿಭೆ ಅಡಕವಾಗಿರುತ್ತದೆ ಇಂತಹ ವಿಶಿಷ್ಟ ಪ್ರತಿಭೆ ಗುರುತಿಸಲು ಮನೆಯಲ್ಲಿ ಪೋಷಕರು ಹಾಗೂ ಶಾಲೆಗಳಲ್ಲಿ ಶಿಕ್ಷಕರು ಅವಿರತವಾಗಿ ಶ್ರಮಿಸಬೇಕಾಗುತ್ತದೆ. ಅದಕ್ಕೆ ಪೂರಕವೆಂಬಂತೆ ನಮ್ಮ ಪ್ರಾರ್ಥನಾ ವಿದ್ಯಾಮಂದಿರದ ಶಿಕ್ಷಕ, ಶಿಕ್ಷಕಿಯರು ಎಲೆಮರೆಯ ಕಾಯಿಯಂತಿರುವ ಮಕ್ಕಳಲ್ಲಿನ ಪ್ರತಿಭೆಯನ್ನು ಹೊರಗೆಳೆದು ಅದಕ್ಕೊಂದು ರೂಪುರೇಷೆ ನೀಡುವ ಮೂಲಕ ಮುಖ್ಯವಾಹಿನಿಗೆ ತರುವ ಕಾರ್ಯದಲ್ಲಿ ನಿರತರಾಗಿರುವುದು ಶ್ಲಾಘನೀಯ. 

ಅಂಬೆಗಾಲಿಟ್ಟು ಬೆಳೆಯುತ್ತಿರುವ ನಮ್ಮ ಶಿಕ್ಷಣ ಸಂಸ್ಥೆಗೆ ಪಾಲಕರು, ಪೋಷಕರು ತುಂಬು ಸಹಕಾರ ನೀಡುತ್ತಿದ್ದಾರೆ. 

 ಆದ್ದರಿಂದಲೇ ದಿನದಿಂದ ದಿನಕ್ಕೆ ನಮ್ಮ ವಿದ್ಯಾಸಂಸ್ಥೆ ಈಗಾಗಲೇ ತಾಲೂಕಿನ ಪ್ರತೀ ಮನೆಮನಗಳಲ್ಲೂ ಮನೆಮಾತಾಗಿದೆ. ಮುಂಬರುವ ದಿನಗಳಲ್ಲಿ ಇಲ್ಲಿಯ ವಿದ್ಯಾಥರ್ಿಗಳಿಗೆ ಇನ್ನೂ ಹೆಚ್ಚಿನ ತಂತ್ರಜ್ಞಾನಗಳ ಮೂಲಕ ಶಿಕ್ಷಣ ಕೊಡಲಾಗುವುದು. ಅದಕ್ಕಾಗಿಯೇ ನುರಿತ ಶಿಕ್ಷಕರ ತಂಡ ನಮ್ಮೊಂದಿಗೆ ಕೈಜೋಡಿಸಿದೆ ಎಂದರು.

ಆಡಳಿತಾಧಿಕಾರಿ ಕೊಟ್ರದೇವರು ಮಾತನಾಡಿ ಸಂಸ್ಥೆಯ ಸಂಸ್ಥಾಪಕರಾದ ಡಾ.ಸುರೇಶ್ ಕುಮಾರರವರಿಗೆ ಶಿಕ್ಷಣದ ಬಗ್ಗೆ ಅಗಾಧವಾದ ಒಲವಿದೆ. ಈ ಕ್ಷೇತ್ರದಲ್ಲಿ ಏನಾದರೊಂದು ಸಾಧಿಸಬೇಕೆಂದು ಸಮಾಜ ಸೇವೆಗೆ ಕಟಿಬದ್ಧರಾಗಿ ನಿಂತಿರುವ ಅವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.

ಪ್ರಾಂಶುಪಾಲ ಅಕ್ಕಿ ಬಸವೇಶ ಮಾತನಾಡಿ ಡಾ. ಸುರೇಶ್ ಕುಮಾರ್ರವರು ಅತೀ ಕಡಿಮೆ ಅವಧಿಯಲ್ಲಿ ಶಿಕ್ಷಣ ಸಂಸ್ಥೆ ಹುಟ್ಟುಹಾಕಿದ್ದರೂ ಉತ್ತಮ ಗುಣಮಟ್ಟದ ಶಿಕ್ಷಣದಿಂದಾಗಿ ಮಕ್ಕಳ ಹಾಜರಾತಿ ಹೆಚ್ಚಾಗಿದೆ. ಪಾಲಕ ಪೋಷಕರು ಸಂಸ್ಥೆಯ ಬಗ್ಗೆ ಅಪಾರವಾದ ಗೌರವ ಹೊಂದಿದ್ದಾರೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಪುರಸಭೆ ಸದಸ್ಯ ಮೃತ್ಯುಂಜಯ ಬದಾಮಿ ಮಾತನಾಡಿ ಇಂದಿನ ಸ್ಪಧರ್ಾತ್ಮಕ ಜಗತ್ತಿನಲ್ಲಿ ಮಕ್ಕಳಿಗೆ ಆರಂಭದಿಂದಲೇ ಉತ್ತಮ ಗುಣಮಟ್ಟದ ಶಿಕ್ಷಣ ಸಿಗಬೇಕಾಗಿದೆ. ಆ ನಿಟ್ಟಿನಲ್ಲಿ ಎಸ್.ಪಿ.ಅಜ್ಜೋಳ್ ಎಜ್ಯುಕೇಷನ್ ಟ್ರಸ್ಟ್ ದಾಪುಗಾಲಿಟ್ಟಿದೆ ಎಂದರೆ ತಪ್ಪಾಗಲಾರದು ಎಂದರು.

ಇದೇ ವೇಳೆ ಆಟೋಟಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನ ನೀಡಲಾಯಿತು. ಆ ನಂತರ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಕಣ್ಮನಸೆಳೆದವು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನೆಲ್ಲು ಇಸ್ಮಾಯಿಲ್, ಎಸ್ಬಿಐ ಬ್ಯಾಂಕ್ನ ಡೆವೆಲಪ್ಮೆಂಟ್ ಆಫೀಸರ್ ವೆಂಕಟೇಶ್, ಶಿಕ್ಷಕ ಮಹಾಂತೇಶ, ಶಿಕ್ಷಕಿಯರಾದ ರೇಖಾ, ರೂಪ, ಸವಿತ ಹಾಗೂ ಶಾಲಾ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಗುರುಪ್ರಸಾದ್ ಹಾಗೂ ರೂಪಶ್ರೀ ನಿರೂಪಿಸಿದರು.