ಮಕ್ಕಳು ಗಣಿತ ಆಸಕ್ತಿಯನ್ನು ಬೆಳೆಸಿಕೊಳ್ಳಿ ; ರವೀಂದ್ರ ಪತ್ತಾರ
ಹೂವಿನ ಹಡಗಲಿ 05: ವಿದ್ಯಾರ್ಥಿಗಳು ಗಣಿತದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಮುಖ್ಯ ಗುರುಗಳಾದ ರವೀಂದ್ರ ಪತ್ತಾರ ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಹಿರೇಬನ್ನಿಮಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಸಂಘದ ವತಿಯಿಂದ ಆಯೋಜಿಸಿದ್ದ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಗಣಿತ ಬಗ್ಗೆ ಮಕ್ಕಳು ಭಯ ಪಡುವ ಅಗತ್ಯ ವಿಲ್ಲ ಎಂದ ಅವರು ಜನ ಸಾಮಾನ್ಯರ ನಿತ್ಯ ಬದುಕಿನಲ್ಲಿ ಗಣಿತ ಹಾಸುಹೊಕ್ಕಾಗಿದೆ. ಇಷ್ಟ ಪಟ್ಟು ಓದಿದರೆ ಗಣಿತಕ್ಕಿಂತ ಸುಲಭವಾದ ವಿಷಯ ಬೇರೊಂದಿಲ್ಲ ಎಂದು ಹೇಳಿದರು.ಶಾಲೆಯ ನಿವೃತ್ತ ಮುಖ್ಯ ಗುರುಗಳಾದ ಎಸ್ ನಾಗಪ್ಪ ಗಣಿತ ಕ್ಷೇತ್ರಕ್ಕೆ ಭಾರತೀಯರ ಕೊಡುಗೆ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.ನಿವೃತ್ತ ಉಪ ಪ್ರಾಂಶುಪಾಲ ಪಿ ಪ್ರಕಾಶ್ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಲ್ಲಾ ವಿಷಯಗಳ ಓದಿನ ಜೊತೆಗೆ ಗಣಿತದ ಅಭ್ಯಾಸಕ್ಕೆ ಹೆಚ್ಚು ಸಮಯ ನೀಡಿರಿ ಎಂದರು.ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿ ಗಡ್ಡಿ ಶಿವಕುಮಾರ್ ಗ್ರಾಮೀಣ ಪ್ರದೇಶದ ಸರ್ಕಾರಿ ಪ್ರೌಢಶಾಲೆಯಲ್ಲಿ ಸುಸಜ್ಜಿತವಾದ ಗಣಿತ ಪ್ರಯೋಗಾಲಯ ಇರುವುದು ಸಂತಸದ ಸಂಗತಿ ಎಂದರು.ಉಪನ್ಯಾಸಕ ನಟರಾಜ ಪಾಟೀಲ್,ಮುಖ್ಯ ಗುರುಗಳಾದ ಧರ್ಮಾನಾಯ್ಕ್, ಟಿ ಪಿ ವೀರೇಂದ್ರ , ಮಂಜುನಾಥ, ಎಚ್ ಎಂ ವಾಣಿ ಗಣಿತ ಶಿಕ್ಷಕರ ಸೇವೆ ಗುರುತಿಸಿ ಸತ್ಕರಿಸಲಾಯಿತು.ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಶಿವಬಸವ ಸ್ವಾಮಿ ಹಿರೇಮಠಗಣಿತ ಶಿಕ್ಷಕ ದಿನಾಚರಣೆ ಕುರಿತು ಅರ್ಥಪೂರ್ಣ ವಿಷಯ ಹಂಚಿಕೊಂಡರು.ಎಸ್ ಡಿ ಎಂ ಸಿ ಅಧ್ಯಕ್ಷ ಎಚ್ ಎಂ ಕೊಟ್ರಯ್ಯ, ಸದಸ್ಯರಾದ ಮಂಜುನಾಥ ಶ್ಯಾನುಭೋಗರ, ಚನ್ನಬಸವನ ಗೌಡ, ಇಬ್ರಾಹಿಂ ಸಾಹೇಬ್ ಶಾಲೆಯ ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು.