ಮಕ್ಕಳ ಪ್ರತಿಭೆ ಗುರುತಿಸಲು ಬಾಲಮೇಳ ಸೂಕ್ತ ವೇದಿಕೆ: ಕೆ.ಕೆ.ಚವ್ಹಾಣ

Children's festival is a good platform to identify children's talent: K.K. Chavan

ಮಕ್ಕಳ ಪ್ರತಿಭೆ ಗುರುತಿಸಲು ಬಾಲಮೇಳ ಸೂಕ್ತ ವೇದಿಕೆ: ಕೆ.ಕೆ.ಚವ್ಹಾಣ

ದೇವರಹಿಪ್ಪರಗಿ, 12; ಪುಟ್ಟ ಮಕ್ಕಳ ಬಾಲ ಪ್ರತಿಭೆಯನ್ನು ಗುರುತಿಸಲು ಬಾಲಮೇಳಗಳು ಸೂಕ್ತ ವೇದಿಕೆಯಾಗಿವೆ ಎಂದು  ಜಿಲ್ಲಾ ಉಪ ನಿರ್ದೇಶಕರಾದ ಕೆ.ಕೆ.ಚವ್ಹಾಣ ಹೇಳಿದರು. ತಾಲೂಕಿನ ಕೋರವಾರ ಗ್ರಾಮದ ಎಂಪಿಎಸ್ ಕೆಜಿಎಸ್ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರದಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಂದಗಿ ಹಾಗೂ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಹಯೋಗದಲ್ಲಿ ಬಾಲಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಸರ್ವಾಂಗೀಣ ಬೆಳವಣಿಗೆಗಾಗಿ ಭಾಷಾ ಬೆಳವಣಿಗೆ, ದೈಹಿಕ ಬೆಳವಣಿಗೆ, ಭಾವನಾತ್ಮಕ ಬೆಳವಣಿಗೆ, ಕ್ರಿಯಾತ್ಮಕ ಬೆಳವಣಿಗೆ ಹಾಗೂ ಸಾಮಾಜಿಕ ಬೆಳವಣಿಗೆ ಈ 5 ಹಂತದ ಬೆಳವಣಿಗೆಯ ಕುರಿತು ಮಾಹಿತಿ ನೀಡಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಿಂದಗಿ ಸಿಡಿಪಿಒ ಎಸ್‌.ಎನ್‌.ಹಿರೇಮಠ  ಅವರು ಮಾತನಾಡಿ, ಕಾನ್ವೆಂಟ್ ಶಾಲೆಗಳಿಗಿಂತ ಅಂಗನವಾಡಿಗಳಲ್ಲಿ ಹೆಚ್ಚಿನ ಹಾಗೂ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಕಾನ್ವೆಂಟಗಳಲ್ಲಿ ಅಂಕ ಆಧಾರಿತ ಶಿಕ್ಷಣಕ್ಕೆ ಜಾಸ್ತಿ ಒತ್ತು ಕೊಡಲಾಗುತ್ತಿದೆ. ಆದರೆ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಭೌತಿಕ, ಶಾರೀರಿಕ, ಮಾನಸಿಕ, ರಸಪ್ರಶ್ನೆ, ಯೋಗ, ಕ್ರಿಯಾತ್ಮಕ ಚಟುವಟಿಕೆಗಳು ಸೇರಿದಂತೆ ನೈತಿಕ ಮೌಲ್ಯಗಳ ಕುರಿತು ತಿಳಿಸಿಕೊಡಲಾಗುತ್ತಿದೆ ಆದ್ದರಿಂದ ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ದಾಖಲಿಸಲು ತಿಳಿಸಿದರು ಹಾಗೂ ಸಮುದಾಯದ ಸಹಭಾಗಿತ್ವದಲ್ಲಿ ಪೋಷಕರು ಹಾಗೂ ಜನಪ್ರತಿನಿಧಿಗಳು ಮುಂದೆ ಬಂದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಸಾಮಗ್ರಿಗಳನ್ನು ಒದಗಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಅಂಗಡಿಗಳ ಪ್ರದರ್ಶನವನ್ನು ಹಾಗೂ ಮಕ್ಕಳ ಚಿತ್ರಕಲೆ, ಕಿರು ನಾಟಕ, ಸಂಗೀತ, ನೃತ್ಯ ಪ್ರದರ್ಶನ ಸೇರಿದಂತೆ ವಿವಿಧ ಆಟಗಳ ಕುರಿತು ಉತ್ಸುಕತೆಯಿಂದ ಗ್ರಾಮದ ಗಣ್ಯ ವ್ಯಕ್ತಿಗಳು ವೀಕ್ಷಣೆ ಮಾಡಿದರು.ಇದೇ ಸಂದರ್ಭದಲ್ಲಿ ಎಸಿಡಿಪಿಒ ಪುಷ್ಪಾವತಿ ಬಿರಾದಾರ, ಅಜೀಮ್ ಪ್ರೇಮ್ ಜಿ ಫೌಂಡೇಶನ್ ಜಿಲ್ಲಾ ಸಂಯೋಜಕರಾದ ಹರೀಶ್, ತಾಲೂಕು ಸಂಯೋಜಕ ಸಂತೋಷ, ಮಾಜಿ ಗ್ರಾಪಂ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ರಾಜಶೇಖರ ಛಾಯಗೋಳ, ಗ್ರಾಮದ ಪ್ರಮುಖರಾದ ಶೇಕರಗೌಡ ಪೊಲೀಸಪಾಟೀಲ, ಬಾಪುಗೌಡ ಬಿರಾದಾರ, ಉಜ್ವಲ ಸಂಸ್ಥೆಯ ಸಂಯೋಜಕರಾದ ಸಾಗರ ಘಾಟಗೆ,, ವಲಯ ಮೇಲ್ವಿಚಾರಕಿಯರಾದ ಕು.ಷಹಜಾದ ಕಾಗಲ್,ಶಾಂತಾ ನಾಯಕ, ಆರಿ​‍್ಬ.ಟಕ್ಕಳಕಿ ಸೇರಿದಂತೆ ಅಂಗನವಾಡಿ ಕಾರ್ಯಕರ್ತೆಯರು, ಪಾಲಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು