ಚೈಲ್ಡ್ ಲೈನ್ ಕಾರ್ಯಕ್ರಮ ಉದ್ಘಾಟನೆ
ವಿಜಯಪುರ: ಚೈಲ್ಡ್ ಲೈನ್ ಸೆ ದೊಸ್ತಿ ಕಾರ್ಯಕ್ರಮದ ಪ್ರಯುಕ್ತ ಇಂದು ನಗರದ ಹೃದಯ ಭಾಗವಾದ ದಿ.18ರಂದು ಗಾಂಧಿಚೌಕ್ದಲ್ಲಿ ನಗರ ವಲಯ ಡಿವೈಎಸ್ಪಿ ಡಿ. ಅಶೋಕ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರದ ಎಸ್. ಜಿ. ಕುಲಕಣರ್ಿ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ನಿರ್ಮಲಾ ಸುರಪುರ ಅವರು ಆಟೋಗಳಿಗೆ ಚೈಲ್ಡ್ ಲೈನ್ ಸ್ಟಿಕ್ಕರ್ ಅಂಟಿಸಿ ಕಾರ್ಯಕ್ರಮಕ್ಕೆ ಇಂದು ಮಧ್ಯಾಹ್ನ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರಾದ ಯಲ್ಲಪ್ಪ ಇರಕಲ್, ಟ್ರಾಫಿಕ್ ಪಿಎಸ್ಆಯ್ ಶರಣಗೌಡ ಗೌಡರ, ಮಹಿಳಾ ಪೋಲಿಸ್ ಠಾಣೆಯ ಸಿಪಿಆಯ್ ಶಕೀಲಾ ಪಿಂಜಾರ, ಉಜ್ವಲ ಸಂಸ್ಥೆ ಹಾಗೂ ಮಕ್ಕಳ ಸಹಾಯವಾಣಿ-1098ರ ನಿದರ್ೇಶಕರಾದ ವಾಸುದೇವ ತೋಳಬಂದಿ, ಮಕ್ಕಳ ಸಹಾಯವಾಣಿ-1098ರ ಜಿಲ್ಲಾ ಸಂಯೋಜಕಿ ಸುನಂದಾ ತೋಳಬಂದಿ ಹಾಗೂ ತಂಡದ ಸದಸ್ಯರು ಹಾಗೂ ಟ್ರಾಫಿಕ್ ಪೋಲಿಸ್ ಠಾಣೆಯ ಸಿಬ್ಬಂದಿ ಇದ್ದರು. ನಗರದಲ್ಲಿ ಓಡಾಡುವ ಆಟೋಗಳಿಗೆ ಹಾಗೂ ಕೇಂದ್ರ ಬಸ್ ನಿಲ್ದಾಣದಿಂದ ಹೊರಡುವ 500 ಕ್ಕೂ ಹೆಚ್ಚು ಬಸ್ಗಳಿಗೆ ಚೈಲ್ಡ್ ಲೈನ್ ಸ್ಟಿಕ್ಕರ್ ಅಂಟಿಸಿ ಪ್ರಯಾಣಿಕರಿಗೆ ಅರಿವು ಮೂಡಿಸಲಾಯಿತು.