ಚಿಕ್ಕೋಡಿ 01: ಆಥರ್ಿಕತೆಯಲ್ಲಿ ಹಿಂದುಳಿದ ವಿವಿಧ ಕಾಯಿಲೆಗೆ ತುತ್ತಾಗಿರುವ ರೋಗಿಗಳನ್ನು ಗುತರ್ಿಸಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡುವ ಚಿಕ್ಕೋಡಿ ವೈದ್ಯರ ಸೇವೆ ಅಮೂಲ್ಯವಾಗಿದ್ದು, ಸಾಮಾಜಿಕ ಸೇವೆ ಎಂದು ತಿಳಿದುಕೊಂಡು ಗುಣಮಟ್ಟದ ಸೇವೆ ನೀಡಲು ಮುಂದೆ ಬರಬೇಕೆಂದು ನಾಗಪೂರದ ಭಾರತೀಯ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷ ಡಾ. ದಿಲೀಪ ಗೋಡೆ ಹೇಳಿದರು.
ಇಲ್ಲಿನ ಐಎಂಎ ಸಭಾಭವನದಲ್ಲಿ ಭಾರತೀಯ ವೈದ್ಯಕೀಯ ಸಂಘ, ಕನರ್ಾಟಕ ರಾಜ್ಯ ಶಸ್ತ್ರ ಚಿಕಿತ್ಸಕರ ಸಂಘ ಸಂಯಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡ ವಿವಿಧ ಕಾಯಿಲೆಗಳ ಉಚಿತ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮೀಸಿದ ಬೆಳಗಾವಿ ಹಿರಿಯ ಶಸ್ತ್ರಚಿಕಿತ್ಸಕ ಡಾ,ಅಶೋಕ ಗೊಂಧಿ ಮಾತನಾಡಿ, ಪ್ರಖ್ಯಾತ ತಜ್ಞ ವೈದ್ಯರಿಂದ ವಿವಿಧ ಕಾಯಿಲೆ ಹೊಂದಿರುವ ರೋಗಿಗಳಿಗೆ ಉಚಿತ ಶಸ್ತ್ರಚಿಕಿತ್ಸೆ ನೀಡುವುದು ವೈದ್ಯರ ಸಾಮಾಜಿಕ ಕಾಳಜಿ ಎತ್ತಿ ತೋರಿಸುತ್ತದೆ. ಯಾವುದೇ ಕಾಯಿಲೆ ಇದ್ದರೂ ಒಂದು ಶಸ್ತ್ರ ಚಿಕಿತ್ಸೆಗೆ ಇಂದಿನ ದಿನಮಾನಗಳಲ್ಲಿ 25 ರಿಂದ 50 ಸಾವಿರ ಖಚರ್ು ಆಗುವ ವೇಳೆಯಲ್ಲಿ ಇಲ್ಲಿನ ವೈದ್ಯರು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬಡ ರೋಗಿಗಳಿಗೆ ದಾರಿದೀಪವಾಗಿದ್ದಾರೆ ಎಂದರು.
ಹುಬ್ಬಳ್ಳಿಯ ಖ್ಯಾತ ವೈದ್ಯ ಸದಾಶಿವಯ್ಯ ಸೊಪ್ಪಿಮಠ ಮಾತನಾಡಿ, ಉಚಿತ ಶಸ್ತ್ರಚಿಕಿತ್ಸೆ ಮಾಡುವುದು ವೈದ್ಯರ ಸಾಮಾಜಿಕ ಸರಳತೆ ಎತ್ತಿ ತೋರಿಸುತ್ತದೆ. ಈ ಸಂಘದ ಮೂಲಕ ವಿವಿಧ ಕಡೆಗಳಲ್ಲಿ ಉಚಿತ ಶಿಬಿರ ಮಾಡಲಾಗಿದೆ. ಈ ಹಿಂದೆಯೂ ಕೂಡಾ ದಾಂಡೇಲಿಯಲ್ಲಿ ನಡೆದ ಶಿಬಿರ ಯಶಸ್ವಿಯಾಗಿದೆ. ಚಿಕ್ಕೋಡಿಯಲ್ಲಿಯೂ ಸಹ ಶಿಬಿರ ಯಶಸ್ವಿಯಾಗಬೇಕು ಎಂದರು.
ಭಾರತೀಯ ಶಸ್ತ್ರ ಚಿಕಿತ್ಸೆಕರ ಸಂಘದ ಕನರ್ಾಟಕ ಘಟಕದ ಅಧ್ಯಕ್ಷ ಡಾ. ದಯಾನಂದ ನೂಲಿ ಮಾತನಾಡಿ. ಚಿಕ್ಕೋಡಿಯಲ್ಲಿ ಇರುವ ನುರಿತ ಶಸ್ತ್ರಚಿಕಿತ್ಸಕರ ವೈದ್ಯರಿಂದ ಈ ಶಿಬಿರ ನಡೆಯಲು ಕಾರಣವಾಗಿದೆ. ಇಲ್ಲಿನ ಎಲ್ಲ ವೈದ್ಯರು ಸಹ ಸಹಕಾರ ನೀಡಿದ್ದಾರೆ ಎಂದು ಹೇಳಿದ ಅವರು, ಚಿಕ್ಕೋಡಿ ಸತ್ಯಸಾಯಿ ಆಸ್ಪತ್ರೆ, ಶಿವಕೃಪಾ ಆಸ್ಪತ್ರೆ, ಭಾತೆ ಆಸ್ಪತ್ರೆ, ಕಮಲ ಆಸ್ಪತ್ರೆಗಳಲ್ಲಿ ಅಪೆಂಡಿಕ್ಸ್, ಪಿತ್ತಾಶಯ, ಕಲ್ಲುಗಳು, ಹನರ್ಿಯಾ, ಸ್ತನದಲ್ಲಿ ಗಂಟು, ಮೂಲವ್ಯಾಧಿ, ಪಿಶರ್, ಪಿಸ್ತುಲಾ, ಥೈರೈಡ್ ಗಂಟುಗಳ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಚರಮೂತರ್ಿಮಠದ ಸಂಪಾದನ ಸ್ವಾಮೀಜಿ ಆಶೀರ್ವಚನ ನೀಡಿದರು.
ಡಾ. ಶ್ರೀಧರ ಕುಲಕಣರ್ಿ, ಟಿಎಚ್ಒ ಡಾ.ವಿಠ್ಠಲ ಶಿಂಧೆ, ಡಾ. ಬಸವರಾಜ ಚೌಗಲೆ, ಡಾ. ಅರವಿಂದಕುಮಾರ, ಎಬಿನೀಸ್ ಬೆನಸಮ್, ಡಾ.ಸಂಜಯಕುಮಾರ, ಡಾ. ಬಿಂದೆಕುಮಾರ, ಡಾ.ನಾರಾಯಣ ಹೆಬನೂರ, ಡಾ.ಮಲ್ಲಿಕಾಜರ್ುನ ಪಾಟೀಲ, ಡಾ.ಸಂಜೀವ ಪಾಟೀಲ, ಡಾ.ಮಾರುತಿ ಮುಸಳೆ, ಡಾ.ರೋಹಿಣಿ ಕುಲಕಣರ್ಿ, ಡಾ.ರವೀಂದ್ರ ಭಾತೆ, ಡಾ.ಪದ್ಮರಾಜ ಪಾಟೀಲ, ಡಾ.ಜಯಶ್ರೀ ಸಲಗರೆ, ಡಾ.ಜಯಶ್ರೀ ಮುಸಾಳೆ, ಡಾ.ಪಾಶ್ವನಾಥ ಜೈನ, ಡಾ.ಸುಧೀರ ಪಾಟೀಲ, ಡಾ.ದೇವಿಕಾ ಭಾತೆ, ಡಾ.ಪ್ರಗತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಡಾ. ಸಂಜೀವ ಪಾಟೀಲ ಸ್ವಾಗತಿಸಿದರು. ಡಾ. ಸಂಧ್ಯಾ ಪಾಟೀಲ ನಿರೂಪಿಸಿದರು. ಡಾ.ಬಸವರಾಜ ಚೌಗಲೆ ವಂದಿಸಿದರು.