ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ
ಕೊಪ್ಪಳ 19: ಕರ್ನಾಟಕ ಕ್ಷತ್ರೀಯ ಮರಾಠ ಪರಿಷತ್ ಜಿಲ್ಲಾ ಶಾಖೆ ಕೊಪ್ಪಳ ವತಿಯಿಂದ ಛತ್ರಪತಿ ಶವಾಜಿ ಮಹಾರಾಜರ 398ನೇ ಜಯಂತಿಯನ್ನು ಆಚರಿಸಲಾಯಿತು. ಸಭೆಯಲ್ಲಿ ಕುಮಾರಿ ಸುಮಾ ತಂದೆ ನಾಗರಾಜ ಅಡ್ಯಾಳ ಛತ್ರಪತಿ ಶಿವಾಜಿಯ ಶೌರ್ಯ ಸಾಹಸದ ಬಗ್ಗೆ ಮಾತನಾಡಿದರೆ, ಕುಮಾರಿ ರಕ್ಷಿತಾ ತಂದೆ ಸುಭಾಸ್ ಅಡ್ಯಾಳ ತಾಯಿ ಜಿಜಾಬಾಯಿಯವರ ಬಗ್ಗೆ ಮತ್ತು ಕುಮಾರಿ ರಾಧೀಕಾ ತಂದೆ ಸುಭಾಸ್ ಅಡ್ಯಾಳ ಛತ್ರಪತಿ ಶಿವಾಜಿಯವರ ರಾಜ್ಯ ವಿಸ್ತರಣೆಯ ಬಗ್ಗೆ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೆ.ಕೆ.ಎಂ.ಪಿ. ಜಿಲ್ಲಾ ಅಧ್ಯರಾದ ಕಳಕಪ್ಪ ಜಾದವ್ ಕಾರ್ಯಕ್ರಮದ ಸ್ವಾಗತವನ್ನು ಜಿಲ್ಲಾ ಕೆ.ಕೆ.ಎಂ.ಪಿ. ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಂಗಳೂರ ನೀರುಪಣೆಯನ್ನು ಶಿಲ್ಪಾ ಮಂಗಳೂರ ನೀರ್ವಹಿಸಿದರು, ವಂದನಾರೆ್ಣಯನ್ನು ಜಿಲ್ಲಾ ಕೆ.ಕೆ.ಎಂ.ಪಿ.ಉಪಾಧ್ಯಕ್ಷರಾದ ಕಿಷ್ಟಪ್ಪ ಬಂಕದ ಇದ್ದರು. ಸಭೆಯಲ್ಲಿ ನಾಗರಾಜ ಅಡ್ಯಾಳ, ತಾನಾಜಿ ಮರಾಠ, ವಸಂತ ಲೊಂಡೆ, ಡಾ.ನಾಗರಾಜ,ಸುಭಾಸ ಆಡ್ಯಾಳ, ಗುರ್ಪ ಬೂದಗುಂಪಿ, ನಾಗೇಂದ್ರ ಸುರ್ವೆ, ಕುಮಾರಸ್ವಾಮಿ, ಮಹೇಶ ಘಾಟಗೆ, ಮಾತಾ ಜೀಜಾಬಾಯಿ ಮಹಿಳಾ ಮಂಡಳ ಜಿಲ್ಲಾ ಅಧ್ಯಕ್ಷರಾದ ಹೆಮಕ್ಕನವರು, ಲಕ್ಷ್ಮಿ ಬೂದಗುಂಪಿ, ಗೌರಮ್ಮ, ಶಾಂತಮ್ಮ, ಗೀತಾ, ಸುಜಾತಾ ಹಾಗೂ ಮಹಿಳಾ ಮಂಡಳ ಸದಸ್ಯರು, ಸಮಾಜದ ಮುಖಂಡರು ಇದ್ದರು.