ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಅನಿವಾರ್ಯ: ಡಾ. ಅಜಿತ ಪ್ರಸಾದ

ಲೋಕದರ್ಶನ ವರದಿ

ಧಾರವಾಡ21: ಕಾಲ ಕಾಲಕ್ಕೆ ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಅರ್ಥಪೂರ್ಣ ಈ ಬದಲಾವಣೆಗಳು ವ್ಯಕ್ತಿಯಲ್ಲಿ ಸಮಗ್ರ ಸರ್ವತೋಮುಖ ಬೆಳವಣಿಗೆಯನ್ನು ತರುವಲ್ಲಿ ಸಾಮಾಜಿಕ ವ್ಯವ್ಯಸ್ಥೆಯನ್ನು ಸುಧಾರಿಸುವಲ್ಲಿ ಸಹಾಯಕವಾಗುತ್ತದೆ ವಿದ್ಯಾಥರ್ಿಗಳ ವಿಚಾರ ಧಾರೆಗಳನ್ನು ರೂಪಿಸುವಲ್ಲಿ ಅವರಲ್ಲಿ ಮೌಲ್ಯಗಳನ್ನು ಸೇರ್ಪಡೆ ಮಾಡುವದರಲ್ಲಿ ಶಿಕ್ಷಕರು ಬಹು ಮುಖ್ಯ ಪಾತ್ರ ವಹಿಸುತ್ತಾರೆ ವಿದ್ಯಾಥರ್ಿಗಳು ತಂದೆ ತಾಯಿಯರನ್ನು ಎಂದೂ ಮರೆಯಬಾರದು. ಯಾವ ಫಲಾಫೇಕ್ಷೆಯಿಲ್ಲದೆ ಹೆತ್ತವರು ನೀಡುವ ಪ್ರೀತಿ ಪ್ರೇಮಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಜೆ.ಎಸ್.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ರಾಜ್ಯ ಮಟ್ಟದ ಪ್ರತಿಭಾನ್ವೇಷಣೆ ಸಂಕಲ್ಪ-2019 ರ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು ಶಿಕ್ಷಣ ಕೇವಲ ಮಾಕ್ರ್ಸಗಳಿಗೆ ಸೀಮಿತವಾಗಬಾರದು ಜೀವನ ಶೈಲಿಯನ್ನು ಕಲಿಸುವ ಪಾಠವಾಗಬೇಕು ಎಂದು ಹೇಳಿದರು. 

       ಸಂಕಲ್ಪ-2019 ರಲ್ಲಿ ಒಟ್ಟು 54 ಕಾಲೇಜುಗಳ 432 ವಿದ್ಯಾಥರ್ಿಗಳು ಪಾಲ್ಗೋಂಡಿದ್ದರು ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಎಸ್.ಜೆ.ಎಂ ವಿ ಮಹಿಳಾ ಕಾಲೇಜು ಹುಬ್ಬಳ್ಳಿ ಪಡೆದುಕೊಂಡಿತು. ರನ್ನರ್ಸ ಅಪ್ ಪ್ರಶಸ್ತಿಯನ್ನು ಬೆಳಗಾವಿ ಲಿಂಗರಾಜ ಕಾಲೇಜು ಹಾಗೂ ಹುಬ್ಬಳ್ಳಿಯ ಜೆ.ಜಿ ಕಾಲೇಜು ಪಡೆದುಕೊಂಡವು. ಸಾಂಸ್ಕೃತಿಕ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಹೊನ್ನಾವರದ ಎಸ್.ಡಿ.ಎಂ ಕಾಲೇಜು, ದ್ವಿತೀಯ ಸ್ಥಾನವನ್ನು ಗದಗಿನ ಮನೋರಾಮಾ ಕಾಲೇಜು, ತೃತೀಯ ಸ್ಥಾನವನ್ನು ಶಿರಸಿಯ ಸರಕಾರಿ ಪದವಿ ಕಾಲೇಜು ಪಡೆದವು. ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧಾರವಾಡದ ಅಕ್ಕಿಹಾಳ ಪದವಿ ಕಾಲೇಜು, ದ್ವಿತೀಯ ಸ್ಥಾನವನ್ನು ಹುಬ್ಬಳ್ಳಿಯ ಜೆ.ಜಿ ಕಾಮಸರ್್ ಕಾಲೇಜು, ತೃತೀಯ ಸ್ಥಾನವನ್ನು ಗದಗಿನ ಎ.ಎಸ್.ಎಸ್ ಕಾಲೇಜು ಪಡೆದುಕೊಂಡವು. ನಿಧಿ ಅನ್ವೇಷಣ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಳಗಾವಿ ಕೆ.ಎಲ್.ಎಸ್ ಗೊಗಟೆ ಕಾಲೇಜು, ದ್ವಿತೀಯ ಸ್ಥಾನ ಧಾರವಾಡದ ಜೆ.ಎಸ್.ಎಸ್ ಎಂ.ಬಿ.ಎ ಕಾಲೇಜು, ತೃತೀಯ ಸ್ಥಾನ ಹುಬ್ಬಳ್ಳಿಯ ಜೆ.ಜಿ ಕಾಮರ್ಸ ಕಾಲೇಜು ಪಡೆದುಕೊಂಡವು. ಡಿಬೇಟ್ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಳಗಾವಿಯ ಲಿಂಗರಾಜ ಕಾಲೇಜು, ದ್ವಿತೀಯ ಸ್ಥಾನ ಬೆಳಗಾವಿ ಲಿಂಗರಾಜ ಬಿ.ಸಿ.ಎ ಕಾಲೇಜು, ತೃತೀಯ ಸ್ಥಾನವನ್ನು ಎಸ್.ಜೆ.ಎಂ.ವಿ ಮಹಿಳಾ ಕಾಲೇಜು ಹುಬ್ಬಳ್ಳಿ ಪಡೆದುಕೊಂಡವು. ವಿಜ್ಞಾಪನ್ ವಿಭಾಗದಲ್ಲಿ ಪ್ರಥಮ ಸ್ಥಾನ ಬೆಳಗಾವಿಯ ಕೆ.ಎಲ್.ಇ ಸಿ.ಬಿ ಎ ಕಾಲೇಜು, ದ್ವಿತೀಯ ಸ್ಥಾನ ಬೆಳಗಾವಿ ಲಿಂಗರಾಜ ಕಾಲೇಜು, ತೃತೀಯ ಸ್ಥಾನವನ್ನು ಜೆ.ಎಸ್.ಎಸ್ ಎಂ.ಬಿ.ಎ ಕಾಲೇಜು ಧಾರವಾಡ ಪಡೆದುಕೊಂಡವು.

       ಕಾರ್ಯಕ್ರಮದಲ್ಲಿ ಸುಮನಾ ವಜ್ರಕುಮಾರ, ಸೂರಜ ಜೈನ್ ಮಹಾವೀರ ಉಪಾಧ್ಯೆ, ಜಿನದತ್ತ ಹಡಗಲಿ, ಜಿನ್ನಪ್ಪ ಕುಂದಗೋಳ, ವಿವೇಕ ಲಕ್ಷ್ಮೇಶ್ವರ, ಎನ್.ಎಲ್ ಪುಡಕಲಕಟ್ಟಿ, ವಿಭಾ ಮುಗಳಿ, ಶ್ರಿಕಾಂತ ರಾಗಿ ಕಲ್ಲಾಪೂರ, ನವೀನ ಬಡಿಗೇರ, ಜ್ಯೋತಿ ಅಕ್ಕಿ ಉಪಸ್ಥಿತರಿದ್ದರು.