ಲೋಕದರ್ಶನ ವರದಿ
ಬೆಳಗಾವಿ 02: ಪ್ರತಿಷ್ಠಿತ ಮಜಲಿ ಹಾಗೂ ಬೆಂಬಳಗಿ ಸ್ಮರಣಾರ್ಥ ಅಂತರ ಕಾಲೇಜು ಚಚರ್ಾ ಸ್ಪಧರ್ೆ ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯ ದಲ್ಲಿ ಶನಿವಾರ ದಿ.29ರಂದು ನಡೆಯಿತು. ಶಿರಸಿ ಯ.ಎಮ್. ಈ. ಎಸ್ ವಾಣಿಜ್ಯ ಮಹಾವಿದ್ಯಾಲಯದ ತಂಡ ಬೆಂಬಳಗಿ ಪ್ರಶಸ್ತಿ ಫಲಕವನ್ನು ಗೆದ್ದುಕೊಂಡಿತು. ಬೆಳಗಾವಿಯ ಬಿ. ವಿ. ಬೆಲ್ಲದ ಕಾನೂನು ಮಹಾವಿದ್ಯಾಲಯದ ತಂಡ ಮಜಲಿ ಪ್ರಶಸ್ತಿ ಫಲಕವನ್ನು ಗೆದ್ದುಕೊಂಡಿತು.
ಬೆಂಬಳಗಿ ಸ್ಮರಣಾರ್ಥ ಕನ್ನಡ ಚಚರ್ಾ ಸ್ಪಧರ್ೆಯಲ್ಲಿ ಎಮ್.ಈ. ಎಸ್ ವಾಣಿಜ್ಯ ಕಾಲೇಜಿನ ದೀಪ್ತಿ ಭಟ್ ಹಾಗೂ ಗಜಾನನ ಹೆಗಡೆ, ಮೊದಲ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು. ಹುಬ್ಬಳ್ಳಿಯ ಕೆಎಸ್ಎಲ್ಯು ಕಾನೂನು ಶಾಲೆಯ ರಂಜೀತಾ ಅಲಗವಾಡಿ ಅವರು ಎರಡನೇ ಸ್ಥಾನ ಪಡೆದುಕೊಂಡರು.
ಮಜಲಿ ಸ್ಮರಣಾರ್ಥ ಇಂಗ್ಲೀಷ ಚಚರ್ಾ ಸ್ಪಧರ್ೆಯಲ್ಲಿ ಬೆಳಗಾವಿಯ ಕೆಎಲ್ ಈ ಸಿಬಾಲಸಿ ಕಾಲೇಜಿನ ಪ್ರಥ್ವಿ ಬಾಳೆಕುಂದ್ರಿ ಮೊದಲ ಸ್ಥಾನ ಪಡೆದರೆ, ಬೆಳಗಾವಿಯ ಬಿ. ವಿ ಬೆಲ್ಲದ ಕಾನೂನು ಕಾಲೇಜಿನ ಎಮ್. ಮುಜಾಹಿದ ಹಾಗೂ ಕಿರಣ ಕುಮಾರ್ ಎಮ್. ಅವರು ಎರಡನೇ ಹಾಗೂ ಮೂರನೇ ಸ್ಥಾನ ಪಡೆದರು.
ಮಜಲಿ ಸ್ಪಧರ್ೆಯ ತೀಪರ್ುಗಾರರಾದ ಜೀವನ ಖಟಾವ, ಸಂಧ್ಯಾ ಹಾಗೂ ಚೈತನ್ಯ ಹಲಗೇಕರ ಅವರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬೆಂಬಳಗಿ ಸ್ಪಧರ್ೆಯ ತೀಪರ್ುಗಾರ ಪ್ರೊ. ಜಿ. ಎಮ್ ವಾಘ, ಪ್ರೊ. ಡಾ. ಡಿ. ಪ್ರಸನ್ನ ಕುಮಾರ, ಪ್ರೊ. ಪಿ. ಎ. ಯಜುವರ್ೆದಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಪ್ರಾಂಶುಪಾಲ ಡಾ. ಎ. ಎಚ್. ಹವಾಲ್ದಾರ ಅವರು ಎರಡೂ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಯುವ ಜನಾಂಗದಲ್ಲಿ ಸಂವಹನ ಕಲೆ ಹಾಗೂ ಆತ್ಮ ವಿಶ್ವಾಸ ವೃದ್ಧಿಯ ಉದ್ದೇಶದಿಂದ ಈ ಸ್ಪಧರ್ೆಗಳನ್ನು ಆಯೋಜಿಸಲಾಗುತ್ತಿದೆ ಎಂದು ಆರಂಭದಲ್ಲಿ ತಿಳಿಸಿದರು.
ಚಚರ್ಾ ಕೂಟ ಸಮಿತಿಯ ಅಧ್ಯಕ್ಷ ಜ್ಯೊತಿ ಕುಲಕಣರ್ಿ ಸ್ವಾಗತ ಕೋರಿದರು. ಕಾರ್ಯದಶರ್ಿ ತೃಪ್ತಿ ಸಡೇಕರ ಹಾಗು ಕೌನ್ಸಿಲರ ಶ್ರೇಯಾ ಉತ್ತೂರೆ ಪ್ರಶಸ್ತಿಗಳನ್ನು ಪರಿಚಯಿಸಿ ಇಂಗ್ಲೀಷ ಹಾಗೂ ಕನ್ನಡ ಸ್ಪಧರ್ೆಗಳನ್ನು ನಡೆಸಿಕೊಟ್ಟರು. ಪ್ರಧಾನ ಕಾರ್ಯದಶರ್ಿ ಸಚ್ಚಿದಾನಂದ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು. ಮಹಿಳಾ ಪ್ರತಿನಿಧಿ ಅನುಜಾ ಬೆಳಗಾಂವಕರ ವಂದಿಸಿದರು. ಸ್ನೇಹಾ ಕುಲಕಣರ್ಿ ಪ್ರಾರ್ಥನಾ ಗೀತೆ ಹಾಡಿದರು.