ಲೋಕದರ್ಶನ ವರದಿ
ಕಂಪ್ಲಿ30: ಕೇಂದ್ರ ಸಕರ್ಾರದ 7ನೇ ವೇತನ ಆಯೋಗವು ಕಾಮರ್ಿಕರಿಗೆ 18 ಸಾವಿರ ಕನಿಷ್ಠ ವೇತನ ನಿಗದಿಗೆ ಕಾನೂನು ಮಾಡಲು ಕೇಂದ್ರ ಸಕರ್ಾರ ಹಿಂದೇಟು ಹಾಕುತ್ತಿದೆ ಎಂದು ಸಿಐಟಿಯು ಬಳ್ಳಾರಿ ಜಿಲ್ಲಾ ಉಪಾಧ್ಯಕ್ಷ ಎಚ್.ತಿಪ್ಪಯ್ಯ ಹೇಳಿದರು.
ತಾಲೂಕಿನ ಶಾರದಾ ಶಾಲೆ ಆವರಣದಲ್ಲಿ, ಸೆಂಟರ್ ಆಫ್ ಇಂಡಿಯಾನ್ ಟ್ರೇಡ್ ಯೂನಿಯನ್ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕೇಂದ್ರ ಸಕರ್ಾರ 9ಕೋಟಿ ಅನುದಾನ ಕಡಿತಗೊಳಿಸದರಿಂದ ಕಾಮರ್ಿಕರಿಗೆ ಸಂಕಷ್ಟ ಎದುರಾಗಿದೆ.
ಬಿಸಿಊಟವನ್ನು ಇಸ್ಕಾನ್ನ ಖಾಸಗೀಕರಣಕ್ಕೆ ನೀಡುವ ಮೂಲಕ ಬಿಸಿಊಟ ನೌಕರರಿಗೆ ತೊಂದರೆ ಉಂಟಾಗಿದೆ. ಕೇಂದ್ರ ಸಕರ್ಾರದ ನಿಲುವಿನಿಂದ ಕಾಮರ್ಿಕರ ಜೀವನ ಕಷ್ಟಕರವಾಗಿದೆ. ಕೇಂದ್ರ ಸಕರ್ಾರದ ನಿಲುವು ವಿರೋಧಿಸಿ, ಜ.8 ಮತ್ತು 9ರಂದು ಎರಡು ದಿನಗಳ ಕಾಲ ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.
ನಂತರ ಸಿಐಟಿಯು ಕಂಪ್ಲಿ ನಗರ ಘಟಕ ಅಧ್ಯಕ್ಷ ಡಿ.ಮುನಿಸ್ವಾಮಿ ಮಾತನಾಡಿ, ಕಟ್ಟಡ ಕಾಮರ್ಿಕರಿಗೆ ನಿವೇಶನ ಮತ್ತು ವಸತಿ ನೀಡಬೇಕು.
ಪೆಟ್ರೋಲ್, ಡಿಸೇಲ್ ದರ ಇಳಿಸಬೇಕು. ವಿವಿಧ ಬೇಡಿಕೆಗೆ ಆಗ್ರಹಿಸಿ, ಕಂಪ್ಲಿ ನಗರದಲ್ಲಿ ಜ.8,9ರಂದು ಸಾರ್ವತ್ರಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ. ತಾಲೂಕು ಕಾಮರ್ಿಕರು ಹೆಚ್ಚಿನ ಮಟ್ಟದಲ್ಲಿ ಸೇರುವ ಮೂಲಕ ಯಶಸ್ವಿಗೊಳಿಸಬೇಕು ಎಂದರು.
ನಗರ ಘಟಕ ಪ್ರಧಾನ ಕಾರ್ಯದಶರ್ಿ ಬಂಡಿ ಬಸವರಾಜ, ಮಾನ್ವಿ ಮಹೇಶ್, ಶಿವಣ್ಣ, ಎಚ್.ಬಸವರಾಜ, ಭೀಮಲಿಂಗ, ಡಿ.ಪ್ರಹ್ಲಾದ್, ಮುದ್ದಾಪುರ ಅಂಬ್ರೇಶ್, ದುರುಗಪ್ಪ, ನಾಗರಾಜ, ರಾಜಬಕ್ಷಿ, ಮಂಜುಳಾ, ಖುಷರ್ಿದಬೇಗಂ, ಅಪರ್ಣ ಸೇರಿದಂತೆ ಮಹಿಳೆಯರು ಪಾಲ್ಗೋಂಡಿದ್ದರು.