ಜಮ್ಮು ಕಾಶ್ಮೀರ ಸಮಸ್ಯೆಗೆ ಕೇಂದ್ರದಿಂದ ಸ್ಪಂದನೆ: ಬಿಜೆಪಿ ತಾಲೂಕ ಪ್ರಧಾನ ಕಾರ್ಯದರ್ಶಿ ಪ್ರಭುರಾಜ

ಲೋಕದರ್ಶನ ವರದಿ

ಯಲಬುರ್ಗಾ 05: ಸುಮಾರು 65ವರ್ಷಗಳಿಂದ ಕೇವಲ ಕೋಮು ದ್ವೇಷದಿಂದ ಹಾಗೂ ಭಯೋತ್ಪಾಧನೆಗೆ ಸಿಲುಕಿ ಅಲ್ಲಿಯ ಜನರಿಗೆ ನೆಮ್ಮದಿ ಇಲ್ಲದಂತಾಗಿತ್ತು ಆದರೆ ಕೇಂದ್ರ ಸರಕಾರದ ಈ ಕ್ರಮ ಅತ್ಯಂತ ಉತ್ತಮವಾದದ್ದು ಎಂದು ಬಿಜೆಪಿ ತಾಲೂಕ ಪ್ರಧಾನ ಕಾರ್ಯದರ್ಶಿ ಪ್ರಭುರಾಜ ಕಲಬುರ್ಗಿ  ಹೇಳಿದರು.

ಜಮ್ಮು ಕಾಶ್ಮೀರವನ್ನು  ಕೇಂದ್ರ ಸರಕಾರ ಕೇಂದ್ರಾಡಳಿತ ಪ್ರದೇಶವೆಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಾಮಾಚರಣೆ ಮಾಡಿ ಅವರು ಮಾತನಾಡಿದರು.

ಜಮ್ಮು ಕಾಶ್ಮೀರ ಹಾಗೂ ಲಡಾಕ್ ರಾಜ್ಯಗಳಲ್ಲಿ ಇಲ್ಲಿಯವರೆಗೆ ಇದ್ದಂತಹ ಭಯದ ವಾತವಾರಣ ಇನ್ನು ಮುಂದೆ ಇರಲಾರದು ಅಲ್ಲಿಯ ಮಹಿಳೆಯರು ಮಕ್ಕಳು ಸ್ವತಂತ್ರವಾಗಿ ಜೀವನ ಸಾಗಿಸುವದಕ್ಕೂ ಅನುಕೂಲವಾಗಲಿದೆ ಅಲ್ಲಿರುವ 370ನೇ ವಿಧಿ ರದ್ದು ಮಾಡಿರುವದು ಸಂತೋಷದ ವಿಷಯವಾಗಿದೆ ಇದರಿಂದ ಜಮ್ಮು ಕಾಶ್ಮೀರಗಳು ನಮ್ಮ ದೇಶದಲ್ಲಿಯೇ ಉಳಿಯಲು ಅನುಕೂಲವಾಗುತ್ತವೆ ಎಂದರು.

ಪಪಂ ಸದಸ್ಯ ವಸಂತಕುಮಾರ ಭಾವಿಮನಿ ಮಾತನಾಡಿ ಇದೊಂದು ಐತಿಹಾಸಿಕ ತಿಮರ್ಾನವಾಗಿದೆ ಇದರಿಂದ ದೇಶದ ಎಲ್ಲಾ ರಾಜ್ಯಗಳು ಸರಿ ಸಮಾನವಾಗಿ ಕಾಣಲು ಅನುಕೂಲವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ  ಪಪಂ ಸದಸ್ಯರಾದ ಬಸವಲಿಂಗಪ್ಪ ಕೊತ್ತಲ, ಅಮರೇಶ ಹುಬ್ಬಳ್ಳಿ, ಮುಖಂಡರಾದ ಈರಪ್ಪ ಬಣಕಾರ, ಬಾಪುಗೌಡ ಪಾಟೀಲ, ಸಂಗಪ್ಪ ರಾಮತಾಳ, ಸಿದ್ರಾಮೇಶ ಬೆಲೇರಿ, ಸುನೀಲ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.