ವಿಜೃಂಭಣೆಯ ಕನಕ ಜಯಂತಿ ಆಚರಣೆ

ಲೋಕದರ್ಶನ ವರದಿ

ಸಂಬರಗಿ 02:  ಸಂಬರಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕನಕ ಜಯಂತಿ ವಿಜೃಂಭನೆಯಿಂದ ಆಚರಿಸಲಾಯಿತು. 

ಸಂಬರಗಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಹಾದೇವ ತಾಣಗೆ ಇವರ ಹಸ್ತದಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಈ ವೇಳೆ ಆನಂದ ಕೋಳಿ, ಧರೆಪ್ಪಾ ತಗಲಿ, ಧರೆಪ್ಪಾ ಕುಂಬಾರ, ಸತೀಶ ನರೋಟೆ, ರಾಘು ಐಹೊಳೆ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಜಂಬಗಿ ಗ್ರಾ/ಪಂ ಕಾಯರ್ಾಲಯದಲ್ಲಿ ಗ್ರಾ.ಪಂ ಅಧ್ಯಕ್ಷ ಮಹಾದೇವ ಮಂಡಲೆ ಇವರ ಹಸ್ತದಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಈ ವೇಳೆ ಶಶಿಧರ ಕುಂಬಾರ, ದಿನಕರ ಬಾಬರ, ಯಶವಂತ ಪಾಟೀಲ, ಗೋಪಾಲ ಕೋಳೆಕರ, ಪರಸು ವಾಘಮೋರೆ, ಪ್ರಶಾಂತ ವಾಘಮೋರೆ, ಸೋಮು ರಾಠೋಡ, ಸೋಮು ಕುಂಬಾರ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಅರಳಿಹಟ್ಟಿ ಗ್ರಾ.ಪಂ ಕಾಯರ್ಾಲಯದಲ್ಲಿ ಗ್ರಾ.ಪಂ ಅಧ್ಯಕ್ಷೆ ಮಾಸಾಬಿ ಸಯ್ಯದ ಹೆರವಾಡೆ ಇವರ ಹಸ್ತದಿಂದ ಪೂಜೆ ನೆರವೇರಿಸಿದರು. ಈ ವೇಳೆ ತಾನಾಜಿ ಶಿಂಧೆ, ಮಂಜುಶ್ರೀ ಪಾಟೀಲ, ದೊಂಡಿರಾಮ ಅವಳೇಕರ, ಪಿ.ಡಿ.ಓ ಅಮಜದ ಜಮಾದಾರ ಸೇರಿದಂತೆ ಗ್ರಾ.ಪಂ ಸದಸ್ಯರು ಹಾಜರಿದ್ದರು.

ಖಿಳಿಗಾಂವ ಗ್ರಾ.ಪಂ ಕಾಯರ್ಾಲಯದಲ್ಲಿ ಗ್ರಾ.ಪಂ ಸದಸ್ಯ ಪ್ರಕಾಶ ಪಾಟೀಲ ಇವರ ಹಸ್ತದಿಂದ ಕನಕದಾಸರ ಭಾವಚಿತ್ರಕ್ಕೆ ಪೂಜೆ ನೆರವೇರಿಸಿ ಮಾತನಾಡಿದರು. ಈ ವೇಳೆ ಪಿ.ಡಿ.ಓ ಸಿ.ಜಿ.ಉಮರೆ, ಆನಂದ ಸನದಿ, ಮಾರುತಿ ಗುರವ, ಶ್ರೀಮಂತ ಉಮರೆ, ಶಿವಲಿಂಗ ತಗಲಿ, ಪ್ರಶಾಂತ ಧನಾಳ, ದುಂಡಪ್ಪಾ ಕರಡಿಮನಿ, ನಾರಾಯಣ ಅಜೆಟರಾವ, ಬಸು ಉಮರೆ, ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

ಶಿರೂರ ಗ್ರಾ.ಪಂ ಕಾಯರ್ಾಲಯದಲ್ಲಿ ಗ್ರಾ.ಪಂ ಅಧ್ಯಕ್ಷೆ ಗೋಕುಳಾ ಶ್ರೀಮಂತ ಕಾರಕೆ ಇವರ ಹಸ್ತದಿಂದ ಭಾವಚಿತ್ರ ಪೂಜೆ ನೆರವೇರಿಸಿ ಮಾತನಾಡಿದರು. ಈ ವೇಳೆ ಸುಖದೇವ ಹರಾಳೆ, ರಘು ಹಜಾರೆ, ರಾವಬಾ ಹಜಾರೆ, ಜೀಜಾಬಾಯಿ ಪಾಟೀಲ, ರಾಮದಾಸ ಪಾಟೀಲ, ಪ್ರಥಾಪ ಪಾಟೀಲ, ಅಜೀತ ಅಟವಲೆ, ಪಿ.ಡಿ.ಓ ಪ್ರೇಮಲತಾ ಮಾಳಿ, ಸಂಜು ಸಕಾನಟ್ಟಿ, ವಿನಾಯಕ ಗಸ್ತಿ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.