ಅಕ್ಕನ ಬಳಗ ಸಂಯುಕ್ತಾಶ್ರಯದಲ್ಲಿ ಸಂಕ್ರಾಂತಿ ಸಂಭ್ರಮವನ್ನು ಸಿರಿಧಾನ್ಯಗಳಿಂದ ರಂಗೋಲಿ ಬಿಡಿಸುವ ಮೂಲಕ ಆಚರಣೆ

Celebration of Sankranti at Akkana Balaga Samyuktashraya by making rangoli with grains

ಅಕ್ಕನ ಬಳಗ ಸಂಯುಕ್ತಾಶ್ರಯದಲ್ಲಿ  ಸಂಕ್ರಾಂತಿ ಸಂಭ್ರಮವನ್ನು ಸಿರಿಧಾನ್ಯಗಳಿಂದ ರಂಗೋಲಿ ಬಿಡಿಸುವ ಮೂಲಕ ಆಚರಣೆ 

ಹಾವೇರಿ 15 : ಇಲ್ಲಿನ ಹೊಸಮಠದಲ್ಲಿ  ಶ್ರೀಮಠ ಹಾಗೂ ಅಕ್ಕನ ಬಳಗ ಸಂಯುಕ್ತಾಶ್ರಯದಲ್ಲಿ  ಸಂಕ್ರಾಂತಿ ಸಂಭ್ರಮವನ್ನು ಸಿರಿಧಾನ್ಯಗಳಿಂದ ರಂಗೋಲಿ ಬಿಡಿಸುವ ಮೂಲಕ ಆಚರಿಸಲಾಯಿತು.  

        ಮಠದ ಬಸವಶಾಂತಲಿಂಗ ಸ್ವಾಮಿಗಳು ಮಾತನಾಡಿ ಸಂಕ್ರಾಂತಿ ಬಂತು.ಸುಗ್ಗಿ ತಂತು ಎಂಬ ಮಾತು ಕೇಳಿಬರುತ್ತಿದೆ.ಜೀವನದಲ್ಲಿ ಎಲ್ಲಾ ಕಹಿ ಮರೆತು ಒಳ್ಳೆಯ ಬಾಂಧವ್ಯ ಹೊಂದೋಣ ಎಂಬ  ಹಬ್ಬಗಳು ಸಂದೇಶ  ಸಾರುತ್ತವೆ.ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ಪ್ರತಿಯೊಬ್ಬರ ಬಾಳಲಿ ಸಂತಸ ಸಮೃದ್ಧಿ ಮತ್ತು ಸುಖ ಶಾಂತಿ ದಯಪಾಲಿಸಲಿ. ಭಾರತದ ಸಂಸ್ಕೃತಿ,ಧರ್ಮ ಮತ್ತು ಕೃಷಿಯೊಂದಿಗೆ ಆಳವಾಗಿ ಸಂಬಂಧ ಹೊಂದಿರುವ ಹಬ್ಬವಾಗಿದೆ, ಸಂಕ್ರಾಂತಿ ಹಬ್ಬವು ಭಾರತದಾದ್ಯಂತ ವೈವಿಧ್ಯಮ ಸಮುದಾಯಗಳನ್ನು ಒಂದುಗೂಡಿಸುತ್ತದೆ.ಸೂರ್ಯನ ಉತ್ತರದ ಪ್ರಯಾಣವನ್ನು ಮಾತ್ರವಲ್ಲದೇ ನವೀಕರಣ-ಸಮೃದ್ಧಿ  ಮತ್ತು ಕೌಟುಂಬಿಕ ಸಂಬಂಧಗಳು ಬಲಪಡಿಸುವ ಭರವಸೆಯೂ ಸಹ ಆಚರಿಸಿದೆ. ಧಾರ್ಮಿಕ ದೃಷ್ಟಿಕೋನದಿಂದ ಮಕರ ಸಂಕ್ರಾಂತಿಯು ಹಿಂದುಗಳಿಗೆ ಪವಿತ್ರವಾದ ಅನುಕರಣೆ ಹೊಂದಿದೆ. ವಿಶೇಷವಾಗಿ ಸೂರ್ಯ ದೇವರ ಆರಾಧನೆ ಸಮರ​‍್ಿಸಲಾಗಿದೆ ಎಂದು ಶ್ರೀಗಳು ಹೇಳಿದರು.ಅಕ್ಕನ ಬಳಗದವರು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಕಮಲ ಬುಕ್ಕುಶೆಟ್ಟಿ.ರತ್ನ ಹೀರೆಮಠ,ಶಾಂತಕ್ಕ ಶಿರೂರು,ರೇಣುಕಾ ಗುಡಿಮನಿ ಸೇರಿದಂತೆ ಅಕ್ಕನ ಬಳಗದ ಸದಸ್ಯರು ಹಾಗೂ ಮಹಿಳೆಯರು ಪಾಲ್ಗೊಂಡಿದ್ದರು.