ಲೋಕದರ್ಶನ ವರದಿ
ಹೂವಿನಹಡಗಲಿ12: ಆದಿ ಕವಿ ಮಹರ್ಷ ವಾಲ್ಮೀಕಿ ನಾಯಕರ ಜನಾಂಗದ ಸ್ವತ್ತಲ್ಲ.ಅವರೊಬ್ಬ ಪುಣ್ಯಪುರುಷರಾಗಿದ್ದಾರೆ.ರಾಮಾಯಣ ಮಹಾಕಾವ್ಯ ರಚಿಸಿ ಇಡೀ ಜಗತ್ತಿಗೆ ದಾರಿದೀಪವಾಗಿದ್ದಾರೆ ಎಂದು ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಹೇಳಿದರು.
ತಾಲೂಕಿನ ನವಲಿ ಗ್ರಾಮದಲ್ಲಿ ಸೋಮವಾರ ತಾಲೂಕು ವಾಲ್ಮೀಕಿ ನಾಯಕ ಸಮಾಜ, ತಾಲೂಕು ಘಟಕ ಆಶ್ರಯದಲ್ಲಿ ನಡೆದ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು
12ನೇ ಶತಮಾನದಲ್ಲಿ ಶಿವಶರಣರು, ದಾರ್ಶನಿಕರು ಒಂದು ಜಾತಿಗೆ ಸಿಮೀತಿವಾಗಿಲ್ಲ ಅವರು ಸಮಾಜಮುಖಿಯಾಗಿದ್ದರು. ಮಹಷರ್ಿ ವಾಲ್ಮೀಕಿ ರಚಿಸಿರುವ ರಾಮಾಯಣದ ಇಂದಿನ ರಾಜಕಾರಣಿಗಳಿಗೆ ಅತ್ಯವಶ್ಯವಾಗಿದೆ. ವಾಲ್ಮೀಕಿ ಬೇಡನಾಗಿ ಜನಿಸಿದರೂ ಸಹೋದರತ್ವ, ಸಭ್ಯವರ್ತನೆ ಹಾಗೂ ಸಮಾಜ ಮುಖಿ ಚಿಂತನೆಗಳನ್ನು ಬಿಂಬಿಸುವ ರಾಮಾಯಣದಂತಹ ಪವಿತ್ರ ಗ್ರಂಥವನ್ನು ರಚಿಸಿದಿದ್ದರೇ,ರಾಮ,ಲಕ್ಷ್ಮಣ ಹಾಗೂ ಸೀತಾಮಾತೆಯ ಪರಿಕಲ್ಪನೆ ಯಾರಿಗೂ ಗೊತ್ತಾಗುತ್ತಿರಲಿಲ್ಲ.
ಭಾರತೀಯ ಸಂಸ್ಕೃತಿ ಅವರ ಕೊಡುಗೆ ಅಪಾರ ಎಂದ ಅವರು ವಾಲ್ಮೀಕಿ ಅವರ ಚಿಂತನೆಗಳು,ಆದರ್ಶಗಳನ್ನು ಜನ ಸಾಮಾನ್ಯರ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ದಲಿತರು,ಶೋಷಿತರು,ಎಲ್ಲಾ ವರ್ಗಕ್ಕೆ ಅಗತ್ಯ ರಕ್ಷಣೆ ಹಾಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.
ನಿವೃತ್ತ ಪ್ರೊ.ಟಿ.ಪರಮೇಶ್ವರಪ್ಪ ವಾಲ್ಮೀಕಿ ಜೀವನ,ಸಾಧನೆ ಕುರಿತು ಉಪನ್ಯಾಸ ನೀಡಿದರು. ಶಾಸಕ ಪಿ.ಟಿ.ಪರಮೇಶ್ವರನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಹರಿಹರ ರಾಜನಹಳ್ಳಿ ವಾಲ್ಮೀಕಿಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಪರಿವರ್ತನೆ,ಬದಲಾವಣೆ ವ್ಯಕ್ತಿಗತ ಬದಲಾಗಬೇಕು.
ಜತೆಗೆ ವಾಲ್ಮೀಕಿ ಸೇರಿದಂತೆ ದಾರ್ಶನಿಕರು ಯಾವ ಜಾತಿಗೆ ಸಿಮೀತಿವಾಗಿಲ್ಲ.ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜತೆಗೆ ಜಯಂತಿ ಕಾರ್ಯಕ್ರಮದ ಮೂಲಕ ಸಂಘಟಿತರಾಗಿ ಸಕರ್ಾರದ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದ ಅವರು ಕೇಂದ್ರ ಮತ್ತು ರಾಜ್ಯ ಸಕರ್ಾರಗಳು ಶೋಷಿತ ವರ್ಗದ ಪ.ಜಾತಿ-ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಒತ್ತಾಯಿಸಿದರು.ನೌಕರರಿಗೆ ಮುಂಬಡ್ತಿ ನೀಡಬೇಕೆಂದು ಒತ್ತಾಯಿಸಿದರು
ಗವಿ ಮಠದ ಡಾ.ಹಿರಿಶಾಂತವೀರಸ್ವಾಮೀಜಿ, ಹಂಪಸಾಗರದ ಶಿವಲಿಂಗರುದ್ರಮನಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಮಾಜಿ ಶಾಸಕ ಶಿರಾಜ್ ಶೇಖ್, ಗದಗ ಜಿಲ್ಲಾ ವಾಲ್ಮೀಕಿ ಗುರುಪೀಠದ ಧರ್ಮದಶರ್ಿ ಸಣ್ಣವೀರಪ್ಪ, ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಎಲ್.ಜಿ.ಹೊನ್ನಪ್ಪ, ತಾ.ಪಂ.ಸದಸ್ಯೆ ರೇಣುಕಮ್ಮ, ವಾಲ್ಮೀಕಿ ನಾಯಕ ಜಿಲ್ಲಾ ಸಂಘದ ಆಧ್ಯಕ್ಷ ದೊಡ್ಡಯರಿಸ್ವಾಮಿ,ಉಪಾಧ್ಯಕ್ಷ ಊಳಿಗದ ಹನುಮಂತಪ್ಪ, ಜಿ.ಪಂ.ಮಾಜಿ ಸದಸ್ಯ ವಸಂತ, ಪುರಸಭೆ ಸದಸ್ಯರಾದ ಯು.ಹನುಮಂತಪ್ಪ, ಯು.ಲಲಿತಮ್ಮ, ಎನ್.ಕೋಟೆಪ್ಪ, ಚಿಂತಿಚಕ್ರಪತಿ, ದೀಪದ ಕೃಷ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶೀವಯೋಗಿ, ಮುಖಂಡರಾದ ವಾರದಗೌಸಮೊಹಿದ್ದೀನ್, ಬಸವನಗೌಡಪಾಟೀಲ,ಸೋಗಿ ಹಾಲೇಶ, ಬಿ.ಹನುಮಂತಪ್ಪ, ಶ್ರೀನಿವಾಸ್, ಜ್ಯೋತಿ ಮಲ್ಲಣ್ಣ, ನಿವೃತ್ತ ಪ್ರಾಚಾರ್ಯ ಕೆ.ವಿರುಪಾಕ್ಷಗೌಡ್ರ ಇದ್ದರು. ಆರಂಭದಲ್ಲಿ ಪ್ರಕಾಶ್ ಜೈನೆ ಸಂಗಡಿಗರಿಂದ ಪ್ರಾರ್ಥನೆ ನಂತರ ವೀರೇಶ ಸ್ವಾಗತಿಸಿದರು.ಜೆ.ಪರಸಪ್ಪ ನಿರೂಪಿಸಿದರು.