ಲೋಕದರ್ಶನ ವರದಿ
ಯಲಬುಗರ್ಾ 09: ಪಟ್ಟಣದ ನಾಲ್ಕನೇ ವಾರ್ಡನಲ್ಲಿರುವ ಒಂದನೇ ಅಂಗನವಾಡಿ ಕೇಂದ್ರವನ್ನು ಒತ್ತುವರಿ ಮಾಡಿಕೊಂಡು ಈ ಕೇಂದ್ರ ನನ್ನದೇ ಎನ್ನುತ್ತಿದ್ದ ಪಪಂ ಮಾಜಿ ಅಧ್ಯಕ್ಷೆ ಭಾಗೀರಥಿ ಜೋಗಿನ ಹಾಗೂ ಅವರ ಪತಿ ಮಲ್ಲಪ್ಪ ಜೋಗಿನ ವಿರುದ್ಧ ಪ್ರಕರಣ ದಾಖಲಾಗಿದೆ.
ಇತ್ತಿಚೀಗೆ ಸುಮಾರು ದಿನಗಳಿಂದ ಅಂಗನವಾಡಿ ಕಟ್ಟಡ ದುರಸ್ಥಿಗೆ ಅಡ್ಡಗಾಲು ಹಾಕುತ್ತಾ ಈ ಕೇಂದ್ರ ನನ್ನ ಜಾಗದಲ್ಲಿದೆ ಎಂದು ಹೇಳಿ ಅಂಗನವಾಡಿ ಕೇಂದ್ರದ ಮುಖ್ಯ ಗೊಡೆಗೆ ಬೀಗ ಜಡಿದು ಒಳಗಿನ ಗೊಡೆಯನ್ನು ಹೊಡೆದು ತನ್ನ ಮನೆ ಮಾಡಿಕೊಂಡಿದ್ದು ತುಂಬಾ ಚಚರ್ೆಗೆ ಗ್ರಾಸವಾಗಿತ್ತು ಹಾಗೂ ಸ್ಥಳಕ್ಕೆ ತಹಶೀಲದಾರ ರಮೇಶ ಅಳವಂಡಿಕರ್, ಪಪಂ ಮುಖ್ಯಾಧಿಕಾರಿ ನಾಗೇಶ, ಸಿಡಿಪಿಓ ಶರಣಮ್ಮ ಕಾರನೂರು ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಇದು ಸರಕಾರದ ಕಟ್ಟಡ ಹಾಗೂ ಸರಕಾರದ ಜಾಗದಲ್ಲಿದೆ ಎಂದು ವರದಿ ನೀಡಿದ್ದರು ಸಹಿತ ಇದು ಯಾವುದಕ್ಕು ಒಪ್ಪದ ಭಾಗಿರಥಿ ಜೋಗಿನವರು ನನ್ನದೆ ಎನ್ನುವ ಹಠಕ್ಕೆ ಬಿದ್ದಿದ್ದರು, ಇದನ್ನು ಗಮನಿಸಿದ ಅಧಿಕಾರಿಗಳು ಇವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದರು. ಅದರಂತೆ ಸಿಡಿಪಿಓ ಶರಣಮ್ಮ ಕಾರನೂರು ಅವರು ಯಲಬುಗರ್ಾ ಪೋಲಿಸ್ ಠಾಣೆಯಲ್ಲಿ ಇವರ ವಿರುದ್ಧ್ದ ಅಂಗನವಾಡಿ ಒತ್ತುವರಿ ಹಾಗೂ ಕಟ್ಟಡಕ್ಕೆ ಹಾನಿ ಮಾಡಿದ್ದು ಕಿಟಕಿ ಗೊಡೆಗಳನ್ನ ಹೊಡೆದಿದ್ದು ಅಂಗನವಾಡಿಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದು ಯಲಬುಗರ್ಾ ಠಾಣೆಯಲ್ಲಿ, ಕಲಂ 427, 447/448ರ ಅಡಿಯಲ್ಲಿ ಇವರ ವಿರುದ್ದ ಪ್ರಕರಣ ದಾಖಲಾಗಿದೆ.